
ರೂಹುಳ್ಳ ರೊಟ್ಟಿಗೊಂದೇ ಅರ್ಥ ನಿರಾಕಾರ ಅವಿನಾಶಿ ಹಸಿವೆಗೆ ನೂರು ಪರಮಾರ್ಥ ಈ ಅಂತರಗಳ ಅರಿಯುವ ಕ್ಷಣ ರೊಟ್ಟಿಗೆ ಅಲ್ಲೋಲಕಲ್ಲೋಲ. *****...
ಅಲ್ಪ ತೃಪ್ತನಾಗಿರೆ ಹೆಚ್ಚು ಸುಖವು ಜೀವನವು| ಬಾಳು ಸುಗಮ ಸುಂದರ ಬದುಕು ಬಲು ಹಗುರ| ಇಲ್ಲದಿರೆ ಎಲ್ಲದಕೂ ಬೇಸರ ವಿಷಮಸ್ಥಿತಿ, ಬದುಕು ಭೀಕರ|| ಇತಿಮಿತಿಯಲ್ಲಿರುವುದೇ ಬಲು ಸೊಗಸು, ನನಸಾಗುವುದೆಲ್ಲಾ ಕಂಡ ಕನಸು| ಮಿತಿ ಮೀರಿದರೆಲ್ಲಾ ಬರೀ ಕೆಡಕು||...
ಅವ್ವನ ಹಸಿರ ರೇಶಿಮೆ ಸೀರೆ ನೆರಿಗೆಯ ನಕ್ಷತ್ರಗಳು ನಾವು || ಮೇಘವರ್‍ಣಗಳ ನಡುವೆ ಹೂವು ಗೊಂಚಲುಗಳಾಗೆ ಅವಳ ಸೆರಗ ಬಳ್ಳಿಗಳು ನಾವು || ಅವಳ ತನುಮನದ ಹೊಲಗದ್ದೆ ಗಳ ಉಳುಮೆ ಗರಿಯಲಿ ಗರಿಗೆದರಿದ ನವಿಲುಗಳು ನಾವು || ಸಾವಿರದ ಸಹಸ್ರ ಕಣ್ಣುಗಳ ಸಹಸ್ರ ...
ಅಷ್ಟೆಲ್ಲಾ ತಾರೆಗಳ ಬಿಗಿ ಪಹರೆಯ ನಡುವೆಯೂ ತಿಂಗಳಿಗೊಮ್ಮೆ ಕಣ್ಮರೆಯಾಗುವ ತುಂಟ ಚಂದಿರನಂತೆ, ಮೈ ಎಲ್ಲಾ ಕಣ್ಣಾಗಿ ಕಾದಿರುವ ಹಸಿವಿನ ಪರಿಧಿ ದಾಟಿ ಮರೆಯಾಗಿ ನಿಡುಸುಯ್ಯುತ್ತದೆ ರೊಟ್ಟಿ. *****...
ಅಮ್ಮ ನಿನ್ನ ಮಡಿಲಲ್ಲೊಮ್ಮೆ ಮಗುವಾಗಿ ತಲೆಯನಿಟ್ಟು ತೂಗುವಾಸೆ| ಆ ನಿನ್ನ ಲಾಲಿಹಾಡ ನೆನೆದು ಮಗುವಾಗಿ ಮರಳುವಾಸೆ|| ಅಮ್ಮ ನಿನ್ನ ಮಡಿಲಲ್ಲೊಮ್ಮೆ ನಾನೂ ಅಮ್ಮನಾಗಭರವಸೆಯಲಿ ಹುಟ್ಟುವ ಮಗುವಿಗಾಗಿ ಕುಲಾಯಿ ಹೆಣೆಯುತಿರುವಾಗ ನನ್ನಲೇಕಿಂತ ಮುಗ್ದ ಆಸೆ|...













