ಎದ್ದೇಳಿ ಎದ್ದೇಳಿ ಸೋದರರೇ

ಎದ್ದೇಳಿ ಎದ್ದೇಳಿ ಸೋದರರೇ ಕನ್ನಡದಾ ವೀರಯೋಧರರೇ ಕನ್ನಡದಾ ಮಣ್ಣಲ್ಲಿ ಮಣ್ಣಾಗಿ ಕನ್ನಡದಾ ನೆಲದ ಹಸಿರಾಗಿ || ಬಡಿದೆಬ್ಬಿಸುತಿಹಳು ತಾಯಿ ಮೊರೆ ಕೇಳಿ ಕನ್ನಡದಾದೀಪ ಹಚ್ಚಿ ಬೆಳಗಿ ನುಡಿಯೊಂದ ಕೇಳಿ ಒಲವಿಂದೇ ತೂಕಡಿಸದಿರಿ ತೂಕಡಿಸದಿರಿ ಮತ್ತೆ...

ಯಕ್ಷಿ

ನೀನಾರು ಬಂದೆ ಅಜ್ಞಾತ ನಾಮವನು ತೊಟ್ಟುಕೊಂಡು ಯಕ್ಷಿ ಸುಪ್ತ ಜ್ವಾಲೆಗಳ ನೇತ್ರದವಳು ಘನರಾಜ ನೀಲಪಕ್ಷಿ ಮರೆತುಹೋದ ಹೊತ್ತೊಂದು ಉದಿಸಿ ಮೂಡಿಸಿದೆ ಭವ್ಯ ಆಸೆ ನಿಶಾಗುಹೆಯ ತೆರೆದಾದ ಅದ್ಭುತವ ಬರೆವ ಅಗ್ನಿರೇಷೆ ರಾಗ ಜೀರ್ಣ ಸೂತ್ರಗಳ...

ಆಸೆಯು ಮುಂದೆ

ಆಸೆಯು ಮುಂದೆ ನಿರಾಸೆಯು ಹಿಂದೆ| ಆಮಿಷದಿಂದೆ ಬೇಸರ ಮುಂದೆ| ತಿಳಿದೂ ಅದರ ಹಿಂದೆ ಹೋದರೆ ನಾವೂ ಕುರಿ ಮಂದೆ|| ಬೆಳಕ ಜೊತೆಯಲಿ ನೆರಳಿರುವಂತೆ ದೀಪದ ಕೆಳಗಡೆ ಕತ್ತಲಿರುವಂತೆ ಆಸೆಯು ತುಂಬಾ ಚಿಕ್ಕದಿರಬೇಕು| ನಾಳೆಯ ಕಾಣಲಷ್ಟೇ...

ಆರು ಗತಿಯೆನಗೆ

ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ ವಿಕೃತಿಯನೆ ನೋಡಿದೆನು ಅದು ಸತ್ಯವೆಂದು ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ. ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ ಮಾನಾಪಮಾನಮಂ ಲೆಕ್ಕಿಸದೆ ನಡೆದು ಎನ್ನ ಹಿರಿತನಕಾಗಿ ಗರ್ವದಲಿ ದರ್ಪದಲಿ...

ಮುಳ್ಳು ಗುಲಾಬಿಯ ಮಧ್ಯೆ

ಮುಳ್ಳುಗಳ ಮಧ್ಯದಲ್ಲಿಯೇ ಗುಲಾಬಿ ಹುಟ್ಟುತ್ತದೆ ನಿಜ. ಪ್ರೀತಿ ಹೂ ಅರಳುವ ಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ ನೋಡು. ಅಮವಾಸ್ಯೆ ಕತ್ತಲಲ್ಲಿ ಏಕಾಕಿ ಕಾಡಿನಲ್ಲಿ ಪಯಣಿಸುತ್ತೇನೆ ನಿಜ, ರಾತ್ರಿ ಕಳೆದುಹೋದ ಸೂರ್ಯ ಮತ್ತೇ ಹುಟ್ಟುತ್ತಲೇ ಇರುತ್ತಾನೆ...

ಸಾಲುಗಳ ಬೊಂಬೆ ಕೇಳೆ

ಸಾಲು ಮೆಟ್ಟಲುಗಳನೇರಲು ಹೊರಟರೆ ಸಾಲಭಂಜಿಕೆಗಳು ತಡೆದಾವೆ ಸಾಲಭಂಜಿಕೆಗಳು ತಡೆದಾವೆ ನಮ್ಮ ವಿಗಡವಿಕ್ರಮರಾಯನ ಕೇಳ್ಯಾವೆ ಒಂದೊಂದು ಸಾಲಿಗೆ ಒಂದೊಂದು ಪ್ರಶ್ನೆ ಇಪ್ಪತ್ತು ಬೊಂಬೆಗಳು ಕೇಳಿದರೆ ಒಂದೊಂದು ಬೊಂಬೆಗು ಒಂದೊಂದು ಉತ್ತರ ಜಾಣ ವಿಕ್ರಮರಾಯ ಹೇಳ್ಯಾನೆ ಇಪ್ಪತ್ತು...

ಭೂಮಿ

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ ನಮ್ಮಮ್ಮ ಮಹತಾಯಿ ಭೂಮಿತಾಯೇ ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ? ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ ಕಾರಿಕೊಳ್ಳುವ ಬಾಯೇ...

ಗರ್‍ಜಿಸುವುದನು ಕಲಿತು ಸಿಂಹವಾಗಿ

ಎನ್ನ ದೇಹವೇ ಕನ್ನಡಾಲಯ ಕನ್ನಡ ಕನ್ನಡವೆನ್ನಲೇತಕೆ ಭಯ ಕನ್ನಡಕೆ ನಮೋ ನಮೋ ಎನ್ನುವೆ ಎನ್ನ ಮಂತ್ರವೊಂದೇ ಅದುವೇ ಕನ್ನಡ ಬಾಡದ ಹೂವಿನ ಮಾಲೆ ಈ ಕನ್ನಡ ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ ಪ್ರೀತಿಯ ಕನ್ನಡವೇ...

ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ

ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ ಆಣೆಯಿಡುವಳು, ಸುಳ್ಳು ! ಆದರೂ ನಂಬುವೆನು ; ಲೋಕ ಬೇಡುವ ಸುಳ್ಳು ಸೂಕ್ಷ್ಮ ಅರಿಯದ ಬೆಳ್ಳ, ಕಲಿಯದವ ಎಂದು ತಿಳಿಯಲಿ ಎಂದು ನಟಿಸುವೆನು. ಪ್ರಾಯ ಆರಿರುವೆ, ಅವಳದನು...

ಇದ್ದಲ್ಲೇ ಸ್ವರ್‍ಗ

ವಸಂತ ಋತು ಮನದೇಚ್ಛೆ ಅನುಭವಿಸಲು ಕಾಡಿಗೆ ಹೋಗಿ ಕುಳಿತುಕೊಳ್ಳಬಯಸಿದೆ ನಾಡು ಹೇಳಿತು ಕಾಡಿನ ಮೃಗಗಳು ಭಯಂಕರ ನಾಡಿನಲ್ಲೇ ಕುಳಿತೆ ಇದ್ದಷ್ಟು ಕಣ್ಣುಂಬಿಕೊಳ್ಳಲು ಕಾಡುಪ್ರಾಣಿಗಳು ನಕ್ಕವು ನಮಗಿಂತಲೂ ಭಯಾನಕ ರಾಜಕೀಯದವುಗಳು, ಜಾತಿ ಮತದವುಗಳು. ಕಾಡುನಾಡು ತೊರೆದು...