ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ ವಿಕೃತಿಯನೆ ನೋಡಿದೆನು ಅದು ಸತ್ಯವೆಂದು ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ. ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ ಮಾನಾಪಮಾನಮಂ ಲೆಕ್ಕಿಸದೆ ನಡೆದು ...

ಮುಳ್ಳುಗಳ ಮಧ್ಯದಲ್ಲಿಯೇ ಗುಲಾಬಿ ಹುಟ್ಟುತ್ತದೆ ನಿಜ. ಪ್ರೀತಿ ಹೂ ಅರಳುವ ಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ ನೋಡು. ಅಮವಾಸ್ಯೆ ಕತ್ತಲಲ್ಲಿ ಏಕಾಕಿ ಕಾಡಿನಲ್ಲಿ ಪಯಣಿಸುತ್ತೇನೆ ನಿಜ, ರಾತ್ರಿ ಕಳೆದುಹೋದ ಸೂರ್ಯ ಮತ್ತೇ ಹುಟ್ಟುತ್ತಲೇ ಇರುತ್ತ...

ಸಾಲು ಮೆಟ್ಟಲುಗಳನೇರಲು ಹೊರಟರೆ ಸಾಲಭಂಜಿಕೆಗಳು ತಡೆದಾವೆ ಸಾಲಭಂಜಿಕೆಗಳು ತಡೆದಾವೆ ನಮ್ಮ ವಿಗಡವಿಕ್ರಮರಾಯನ ಕೇಳ್ಯಾವೆ ಒಂದೊಂದು ಸಾಲಿಗೆ ಒಂದೊಂದು ಪ್ರಶ್ನೆ ಇಪ್ಪತ್ತು ಬೊಂಬೆಗಳು ಕೇಳಿದರೆ ಒಂದೊಂದು ಬೊಂಬೆಗು ಒಂದೊಂದು ಉತ್ತರ ಜಾಣ ವಿಕ್ರಮರಾಯ ಹ...

ಗಂಡು ಮಕ್ಕಳ ವ್ಯಾಮೋಹ ಅತೀತವಾಗುತ್ತಿದೆ. ಗಂಡೆಂದರೆ ವಂಶವನ್ನು ಬೆಳೆಸುತ್ತಾನೆ. ಸಂಸಾರವನ್ನು ಸಾಕಿ ಸಲಹುತ್ತಾನೆ ಎಂಬಿತ್ಯಾದಿ ಕಾರಣಗಳನ್ನಿಡಲಾಗುತ್ತದೆ. ಹೆಣ್ಣಾದರೆ ಮದುವೆ, ಮುಂಜಿ, ವಡವೆ ವಸ್ತ್ರ, ವರದಕ್ಷಿಣೆ, ಕೊಡಬೇಕಾಗುತ್ತದೆ. ಅದಕ್ಕಾಗಿ ...

ಮೊನ್ನಿಽನ ಬರದಾಗ ಕುಸುಬಿಽಯ ಮಾರಿದರಲ್ಲ| ಕೋಲು ಕೋಲೆಣ್ಣ ಕೋಲ ||೧|| ಅಣ್ಣಾಗಾದರು ಮಕ್ಕಳಿಲ್ಲ ತಮ್ಮಽಗಾದರೂ ಮಕ್ಕಳಽವ| ಕೋ ||೨|| * * * ಏ ಅಣ್ಣಾ ಏ ಅಣ್ಣಾ ಸೊಲಗಿ ಜ್ವಾಳಾ ಕಡಾ ಕೊಡು| ಕೋ ||೩|| ಸೊಲ್ಲಿಗಿ ಜ್ವಾಳಾ ಕಡನೆ ಕೊಟ್ಟಽರ ನಟ್ಟ ಕಡಿಯ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....