ಗಂಡು ಮಕ್ಕಳ ವ್ಯಾಮೋಹ ಅತೀತವಾಗುತ್ತಿದೆ. ಗಂಡೆಂದರೆ ವಂಶವನ್ನು ಬೆಳೆಸುತ್ತಾನೆ. ಸಂಸಾರವನ್ನು ಸಾಕಿ ಸಲಹುತ್ತಾನೆ ಎಂಬಿತ್ಯಾದಿ ಕಾರಣಗಳನ್ನಿಡಲಾಗುತ್ತದೆ. ಹೆಣ್ಣಾದರೆ ಮದುವೆ, ಮುಂಜಿ, ವಡವೆ ವಸ್ತ್ರ, ವರದಕ್ಷಿಣೆ, ಕೊಡಬೇಕಾಗುತ್ತದೆ. ಅದಕ್ಕಾಗಿ ಹೆಣ್ಣು ಸಂತಾನವು ಒಂದೇ ಇರಲೆಂಬ ಹಂಬಲ ನಮ್ಮ ಮೂರ್ಖ ಜನಕ್ಕಿದೆ. ಹೆಣ್ಣು ಹೆಚ್ಚಾದರೆ ಒಂದು ಗಂಡು ಮಗುವನ್ನು ಹೆತ್ತುಕೋಡದ ಗಯ್ಯಾಳಿ, ಎಂದು ಹೆಣ್ಣಿಗೆ ಶಪಿಸಲಾಗುತ್ತದೆ. ನಿಜವಾಗಿ ನೋಡಿದರೆ ಇಂದು ಗೌರವ ಪ್ರತಿಷ್ಟೇ ವಂಶದ ವಾಹಿನಿಗೆ ಹೆಣ್ಣೇ ಬಹುತೇಕ ಕಡೆ ಸಾಬೀತಾಗುತ್ತಿದ್ದಾಳೆ ಮತ್ತು ತಂದೆ ತಾಯಿಯರನ್ನು ಸಲಹುತ್ತಾಳೆ, ಸಂತೈಸುತ್ತಾಳೆ. ಗಂಡುಮಕ್ಕಳಲ್ಲಿ ಬಹುತೇಕ ಜನ ಪೋಲಿ ಪುಂಡರಾಗಿ ಹಿಂಸೆಯಲ್ಲಿ ತೊಡಗಿ ಮರ್ಯಾದೆಯನ್ನು ಹರಾಜು ಹಾಕುವುದು ನಮ್ಮ ಜನಕ್ಕೆ ಕಾಣುವುದೇ ಇಲ್ಲ. ಇದೇನೇ ಇರಲಿ, ಇಲ್ಲಿ ಇದು ಮುಖ್ಯ ಪ್ರಶ್ನೆ ಅಲ್ಲವೇ ಅಲ್ಲ. ಈಗ ವೈಜ್ಞಾನಿಕವಾಗಿ ಚಿಂತಿಸೋಣ. ಯಾವುದೇ ಮಗುವಿನಲಿಂಗ ನಿರ್ಧಾರವಾಗುವುದು ತಂದೆಯಿಂದ ಮಾತ್ರವೆಂದು ವಿಜ್ಞಾನಿಗಳು ಹೇಳುತ್ತಾರೆ. ತಂದೆಯಾದವನು X ಕ್ರೋಮೊಜೋಮ್, ನೀಡಿದರೆ ತಾಯಿಯ x ಜತೆಗೂಡಿ XX ಆಗಿ ಹೆಣ್ಣಾಗುತ್ತದೆ. y ಕ್ರೋಮೋಜೋಮ್ ನೀಡಿದರೆ ತಾಯಿಯ x ಕ್ರೋಮೋಜೋಮ್ ಜೊತೆ ಸೇರಿ xy ಗಂಡಾಗುತ್ತದೆ. ಆದ್ದರಿಂದ ಗಂಡಿಗೆ ತಂದೆ ನೀಡುವ ಕ್ರೋಮೋಜೋಮ್ ಹೆಣ್ಣು ಅಥವಾ ಗಂಡನ್ನು ರೂಪಿಸುತ್ತದೆ. ವಾಸ್ತವ ಸ್ಥಿತಿ ಹೀಗಿರುವಾಗ ಹೆಂಡತಿಯಾದವಳು ಹೆಣ್ಣು ಹೆತ್ತರೆ ಗಂಡುಮಗುವಿಗಾಗಿ ಹಂಬಲಿಸಿ ಮತ್ತೆ ಮತ್ತೇ ಗರ್ಭಿಣಿಯಾಗುತ್ತಾಳೆ. ಇದೇ ರೀತಿ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರವಿಲ್ಲದೇ ಗರ್ಭೀಣಿಯಾದವಳು ದೈಹಿಕವಾಗಿ ಶಕ್ತಿಯನ್ನು ಕುಂದಿಸಿಕೊಳ್ಳುತ್ತಾಳೆ.
ತಿನ್ನುವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕ ಆಹಾರವನ್ನು ಮನೆಯ ಯಜಮಾನನಿಗೆ ಅಂದರೆ ಗಂಡನಿಗೆ ಸಲ್ಲುವುದರಿಂದ ತಾಯಿ ತಿನ್ನುವ ಆಹಾರ ಪೌಷ್ಟಿಕವಾಗಿರುವುದಿಲ್ಲ. ಹೀಗೆ ದಿನಗಳೆದಂತೆ ಕೆಲವೊಮ್ಮೆ ಹೆರುವ ಮಗು ಅಪೌಷ್ಠಿಕತೆಯಿಂದ ಇದು ಸರಿಯಾದ ರೀತಿಯಲಿ ಬೆಳವಣಿಗೆಯಾಗದೇ ಹುಟ್ಟುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಯಾವುದೇ ಹೆಣ್ಣು ಅಥವಾ ಗಂಡು ಮಗುವಾಗಬೇಕಾದರೆ ಗಂಡಿನ x-ಅಥವಾ y ಕ್ರೋಮೊಜೋಮ್‌ಗಳೇ ಕಾರಣವಾಗಿರುತ್ತವೆ ಎಂಬ ಸತ್ಯವನ್ನು ಹೆಣ್ಣಿಗೆ ತೆಗಳುವವರು ಅರಿತುಕೊಳ್ಳಬೇಕಿದೆ.
*****