
ಮತ್ತೆ ಹಸಿವು ವ್ಯಘ್ರಗೊಂಡಿದೆ ಎಲ್ಲ ಸೂರ್ಯನದೇ ಕಿತಾಪತಿ ಅವನ ಮುಖಕ್ಕಿಷ್ಟು ಉಗಿದು ಒಳ ಬಂದ ರೊಟ್ಟಿಗೆ ಏಕೋ ಕ್ಷಮಯಾಧರಿತ್ರಿ ತಣ್ಣಗಿನ ಇಳೆ ನೆನಪಾಗುತ್ತಾಳೆ. ಮತ್ತೆ ಹೊರಬಂದು ಉರಿವ ಸೂರ್ಯನನ್ನೇ ಅಣಕಿಸಿ ಬೀಗುತ್ತ ಹೇಳುತ್ತದೆ ‘ನಾನು ಇಳೆಯಲ್ಲ’...
ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ ಗತಿ ಕಾಣಿಸುವ ಸ್ಮೃತಿಯು ನೀನೇನೇ| ನನ್ನ ಪಾಪಪುಣ್ಯದ ಫಲಾನುಫಲ ನೀನೇ ನನ್...
ನನ್ನ ಎದೆಯ ಗೂಡಲ್ಲಿ ಮಾತನಿರಿಸಿದ ಪ್ರೇಮಿ ನೀನು ಪ್ರೀತಿಸುವೆ ಪ್ರೇಮಿಸುವೆ ಎಂಬ ಮಾತಿನೆಳೆಯಲಿ ಸೆರೆ ಸಿಕ್ಕ ರಾಧೆ ನಾನು ||ಪ್ರೀ|| ವಿರಹ ವೇದನೆಯಲಿ ಹಗಲಿರುಳು ಕಾದಿರುವೆ ನಿನಗಾಗಿ ನಾನು ಎನ್ನ ಮನವ ತಿಳಿಯದೇ ಹೋದೆ ನೀನು ||ಪ್ರೀ|| ಬರಿದಾಗುವುದ...
ಸುತ್ತೆಲ್ಲ ಹಸಿವಿನ ನಿಗೂಢ ಕರಿ ಮೌನ ಆವರಿಸಿ ಪಸರಿಸಿದೆ ಭೀತಿಯನು ಹಸಿ ನೆತ್ತರಲಿ ಕಲೆಸಿ ದೈನ್ಯತೆಯೇ ಮೈವೆತ್ತು ಬೇಡುತ್ತದೆ ರೊಟ್ಟಿ ‘ಪ್ರಭು ಆಕಾಶ ಬೇಡ ನನಗೆ ಅರಳಲು ಬಿಡು ನೆಲದ ನಗೆಗೆ’ *****...
ಬದುಕು ಇದು ಹೀಗೆ ಅದರ ರೀತಿಯೇ ಹಾಗೆ|| ಯಾರ ಮಾತ ಕೇಳದದು ತನ್ನಂತೆ ತಾನೇ ನಡೆವುದು|| ಏನಿರಲಿ ಇಲ್ಲದಿರಲಿ ಯಾರಿರಲಿ ಇಲ್ಲದಿರಲಿ ಸಾಗುತಲಿ ಹೀಗೆ| ಸುಖ ದುಃಖವನು ಸಮನಾಗಿ ನೀಡುತಲಿ|| ಹಿರಿಯರಿರಲಿ ಕಿರಿಯರಿರಲಿ ಭೇದ ಭಾವವ ತೊರದು| ಹಣವಂತನೆ ಆಗಲಿ ...
ತ್ಯಾಗಮಯಿ ನೀ ಪೂರ್ಣಮಯಿ ನಿನ್ನ ಅಮರ ಭಾವನ ಅಮರಮಯಿ || ಜನಕನಲ್ಲಿ ಜನಿಸಿ ನೀ ಜಾನಕಿಯಾದೆ ರಾಜಕುವರಿ ಎನಿಸಿ ನೀ ತೊಟ್ಟಿಲ ತೂಗಿದೆ ರಾಮ ರಾಮ ಎಂದೊಲಿದು ರಾಮನ ವರಿಸಿದೆ || ದಶರಥನ ಸೊಸೆ ಎನಿಸಿ ಕುಲವಂತಿಯಾದೆ ರಾಮ ವನವಾಸದಿ ನೀ ಬಲು ನೊಂದೆ ರಾಮ ರಾ...
ಹೇಗೆಂದು ಅಳೆವುದು ಈ ಹಾಳು ಹಸಿವನ್ನು ಒಮ್ಮೆ ಇತ್ತಿತ್ತ ಒಮ್ಮೆ ಅತ್ತತ್ತ ಅಳತೆಗೋಲುಗಳೇ ಪೊಳ್ಳು. ಲೆಕ್ಕವಿರದಷ್ಟು ರೊಟ್ಟಿ ತುಂಬಿಸಿದರೂ ಹಸಿವಿನ ತಕ್ಕಡಿ ತಟ್ಟೆ ಏರುವುದಿಲ್ಲ ತುಲಾಭಾರ ಮುಗಿಯುವುದಲ್ಲ. *****...













