Home / Hoyisala

Browsing Tag: Hoyisala

ನಿತ್ಯ ನಿತ್ಯ ಪಾರಿಜಾತ ಚಂಪ ಮಂದಾರವು ಮರವು ಗಿಡವು ಬೇರ ಬಳಿಗೆ ಸುಮವ ಸಲಿಸಲು ಭೂಮಿ ತಾಯಿ ಬಣ್ಣ ಬಣ್ಣ ದರಳ ನಿವುಗಳ ಮಾಲೆಯೆತ್ತಿ ಪ್ರೇಮದಿಂದ ಮೇಲೆ ಎಸೆವಳು. ವ್ಯೋಮವದನು ಎತ್ತಿ ಜಗಕೆ ನೋಡಿರೆನುವನು || ಇಲ್ಲಿ ನೋಡಿ ಕಾಮಹಾರವೆಂದು ತೋರ್ಪನು || ...

ಟಗರನು ಕೂಡಲು ಗೂಳಿಯು ಬಂದು ಚಿಗುರಿದ ಬೇವಿಗೆ ಬೆಲ್ಲವು ಸಂದು ಸಾಗಿತು ಕರಗವು ಕಬ್ಬಿನ ಗಾಣ ಈಗೀಗ ಹೊರಟಿವೆ ಹುಬ್ಬಿನ ಕಂಪು ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ || ಹುಯ್ಯೋ ಹುಯ್ಯೋ, ಹುವ್ವಿನ ಕೋಲ | ಅವಳಿಯ ಕೂಟವ ನಳ್ಳಿಯು ನೋಡೆ ಜವದೊಳು ಬಂದಿತು ...

ಕೆಂಪು ವಜ್ರ ನೀಲ ಪುಷ್ಯ ರಾಗ ವೈಡೂರ್ಯವು ಚಂಪರಾಗ ಚಂದ್ರಕಾಂತ ನಾಗ ಗೋಮೇಧಿಕ ಇಂತು ನೋಡಿ ಒಡೆದು ಕಡೆದು ತಿಕ್ಕಿ ನಾಸಿಕ್ಕಿದೆ ಚಿಂತೆಯಲ್ಲಿ ಸಾಣೆಯಿಟ್ಟು ಮಿಕ್ಕುವನ್ನಿಕ್ಕಿದೆ ಇಡಲು ಕಳಸ ಗೋಪುರಾದಿ ರತುನ ಮಂದಿರಕೆನೆ ನುಡಿಯ ಗಣಿಗಳಿಂದ ತೆಗೆದೆ ರ...

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ ಅಂದಣವದೆತ್ತಿರಲು ಅಂದವೆನೆ ಪರರೆಲ್ಲ ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ ಭಾರತದಿ ಬಂತು ಹೊಳಲು ಚಂದಿರನು ತಂಬೆಳಕ ನಗುವಿಡಲು ಅಪಹಾಸ ದಂದಣವನೆತ್ತಿರಲು ಲಗುಬಿಗಿಯ ಪರರಾಳು ಮಂದಿಗಳು ತಿಳಿದೇಳಲಗೊ! ಯೋಗಿ ಕರ...

ಕಲ್ಯಾಣಸೇವೆ ಜೇಬಿನ ಬುಡದಲಿ ಪುಟ್ಟಾಣಿ ಪುರಿಯು ಮೇಲೊಂದಿಷ್ಟು ಗೋಲೀ ಬಳಪ ಮತ್ತೊಂದಿಷ್ಟು ಬಂದ ಬಂದ ಸಣ್ಣತಮ್ಮಣ್ಣ ಪರಾಸು ಪೆಟ್ಲು ಒಳ ಜೇಬಲ್ಲಿ ಕಾಸಿನ ಸಾಲು ಕಳ್ಳ ಜೇಬಲ್ಲಿ ಚಂಡು ದಾಂಡು ಎಡ ಬಲದಲ್ಲಿ ಬಂದ ಬಂದ ಸಂತಂಮಣ್ಣ ಅಮ್ಮನ ಹಾರ ಉಬ್ಬಿದ ಎದ...

ಮೂರ್ಛೆ ಬಂದಿತ್ತು! ಮೂರ್ಛೆ ಬಂದಿತ್ತು! ಕಾಂಪೋಂಡು ಬಂಗ್ಲಿ ಕಂಕಮ್ಮಂಗೆ ಮೂರ್ಛೆ ಬಂದಿತ್ತು ಮದಿವೊ ಏನೋ ಆಗುತಿತ್ತಂತೆ ಚಪ್ಪರ ಕಂಬ ವರಗಿದ್ದರಂತೆ ಮದವಣಗನ್ನೇ ನೋಡುತಿದ್ದರಂತೆ ಯಾಕೋ ಏನೋ ಬಂದವರಂತೆ ಯಾರೋ ಏನೋ ಉಸಿರಿದರಂತೆ ಕೂತಿದ್ದ ಹಾಗೇ ಕನಕಂನ...

ಫಣೆಗೆ ಚಂದಿರ ರೇಖೆ ಆಣಿಯಾಗಿ ತಿದ್ದಿಟ್ಟು! ಮಣಿರಮಣಿ ತಾರೆಯೊಲು ಮಿಣುಗು ದೀಪವನಿಟ್ಟು ಕ್ಷಣಗಳನ್ನು ವರಸತಿಯು ಎಣಿಸುತಲಿ ಕುಳಿತಿರಲು! * * * ಘನ ಘನೋಪಾಧಿಗಳ! ತನ ಬುದ್ಧಿಯಿಂ ಪಡೆದ ಘನಶ್ರೇಷ್ಠ ಪಂಡಿತನು ತನಿಗಬ್ಬ! ಓದುತಲಿ! ಮಣಿ ರಶಿಕಮಣಿಯವನು ...

ಕಿಡಿಯೊಂದನಡಗಿಸೆ ನುಡಿಬಲೆ ಹೂಡಿ ಗುಡುಗಾಡಿ ಜಗವೆಲ್ಲ ಸುತ್ತಿತು ಹಾಡು ಸಿಡಿಯುತ ನುಡಿಗಳು ಸುಳಿರಾಗವುಗುಳೆ ಒಡಲುರಿಯೆಂದಿತು ಧರಣಿಯು ಹೊರಳಿ ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು ಚಿಗಿಯಿತು ಕವಿಮನದಾಶೆಯ ಕಿಚ್ಚು ಇನ್ನೊಂದು ಕಿಡಿಯಿಟ್ಟೆ ರೇಖೆ ಬಣ...

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು ಬಿಳಿ ಮಡಿಯ ಶೆಳೆದುಡುತಲೆ ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು ತರದ ಶಾಂತಿಯ ಸವಿ...

ಉಘೇ ಉಘೇ ಉಘೇ ಹಿಂದು ದೇಶ ಹಿಂದು ಹೃದಯ ಸಿಂಧು ಗೋದೆ ಗಂಗೆಯು ಅಂದಿಗಿಂದಿಗೆಲ್ಲ ಒಂದೆ ಹಿಂದು ಜನ ಸ್ವತಂತ್ರರು ಉಘೇ ಉಘೇ ಉಘೇ ಮುಳಿಗಿ ಸೂರ್ಯ ಬೆಳಗಿ ಸೂರ್ಯ ಮುಳುಗಿ ಪರರು ಮೇಗಡೆ ಕಳೆದು ನನ್ನ ನಿನ್ನ ಬಂಧ ತಿಳಿಯೊ ನಾವ್ ಸ್ವತಂತ್ರರು ಸಾಗಿ ವರ್ಷ ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...