ಮೂರ್ಛೆ ಬಂದಿತ್ತು!
ಮೂರ್ಛೆ ಬಂದಿತ್ತು!
ಕಾಂಪೋಂಡು ಬಂಗ್ಲಿ
ಕಂಕಮ್ಮಂಗೆ
ಮೂರ್ಛೆ ಬಂದಿತ್ತು
ಮದಿವೊ ಏನೋ ಆಗುತಿತ್ತಂತೆ
ಚಪ್ಪರ ಕಂಬ ವರಗಿದ್ದರಂತೆ
ಮದವಣಗನ್ನೇ ನೋಡುತಿದ್ದರಂತೆ
ಯಾಕೋ ಏನೋ ಬಂದವರಂತೆ
ಯಾರೋ ಏನೋ ಉಸಿರಿದರಂತೆ
ಕೂತಿದ್ದ ಹಾಗೇ ಕನಕಂನೋರು
ಇದ್ದಿದ್ದ ಹಾಗೇ ನಿಟ್ಟುಸಿರಿಟ್ಟು
ಕಂಬ ಬಿಟ್ಟು ಜಾರಿದರಂತೆ
ಕಂಕಂಮ್ಮ
ಕಾಂಪೋಂಡು ಬಂಗ್ಲಿ ಕಂಕಂಮ್ಮ
ಏಕಾ ಏಕೀ ಉಸಿರೇ ನಿಂತು
ಉರುಡಿದರಂತೆ ಎಚ್ಚರ ತಪ್ಪಿ
ಯಾರಾರೆಲ್ಲ ಕೂಗಿದರಂತೆ
ಹೆಸರೇ ಹಿಡಿದು ಅರಚಿದರಂತೆ
ಏನೇನೆಲ್ಲ ಮಾಡಿದರಂತೆ
ಎಚ್ಚರ ತಪ್ಪಿ ಅರಿವೇ ಇಲ್ಲ
ಚಪ್ಪರವೆಲ್ಲಾ ಚಾಮರ ಬೀಸೆ
ಮೂರ್ಛೆ ಬಂದಿತ್ತು
ಕನಕಮ್ಮಂಗೆ
ಮೂರ್ಛೆ ಬಂದಿತ್ತು
ಆಕಾಶಪುರದ ಅಚ್ಛೋದ್ಯಪ್ಪ
ಎಲ್ಲಿಂದೆಲ್ಲೊ ಓಡೋಡಿ ಬಂದು
ಯಾಕೆ? ಏನು? ಯಾರು? ಎತ್ತ?
ಎಂದು ಬಂದು ಹಿಡಿದು ಎತ್ತಿ
ಮೆತ್ತನ್ನೇಯ ಕುರ್ಚಿಲಿಟ್ಟು
ಬೆಚ್ಚನ್ನೇಯ ಕಾಫಿ ಕುಡಿಸಿ
ಪನ್ನೀರೆರಚಿ ಗಾಳಿಹಾಕಿ
ಯಾಕೇ ಕನಕ
ಏನಾಯ್ತಮ್ಮ?
ಎಂದುನಿಂದು
ನುಡಿಸಿದರಾಗ!
ತೆಗೆದು ಉಸಿರ
ಹಚ್ಚಿದೃಷ್ಟಿ
ಕಂಗಳ ತುಂಬಿ
ಬಿಕ್ಕಳಿಸುತ್ತ
ಹೇಳಿದರಾಗ ಕನಕಮ್ಮ
ಎಚ್ಚರ ಬಂದು ಕನಕಮ್ಮ
ಮೂರ್ಛೆ ತಿಳಿದು ಕನಕಮ್ಮ
ಜ್ಞಾನ ನಿಂದು ಕನಕಮ್ಮ
ಕಾಂಪೊಂಡು ಬಂಗ್ಲಿ
ಕಂಕಂಮ್ಮ
ನಾನಂತೆ ಮುದುಕಿ
ಕೆಣಕತಾರೆ ಕದಕಿ
ಚಾಳೀಸೆಲ್ಲಾ ಷೋಕೀಗಂತೆ
ಗಲ್ಲಗಳೆರಡೂ ಸುಕ್ಕಿವೆಯಂತೆ
ಇದ್ದಲ್ಲೆಲ್ಲ ಬಿದ್ದಿವೆಯಂತೆ
ಇದ್ದದ್ದೆಲ್ಲ ಬದ್ಧಲ್ಲಂತೆ
ನಾನಂತೆ ಮುದುಕಿ
ಕೆಣಕತಾರೆ ಕೆದಕಿ
ಹೇಡೀ ಕೂಡೀ ಕಾಡೀ ಬೇಡೀ
ಮೋಡೀ ಆಡೀ ಛೋಡೀ ಮಾಡೀ
ಚಾಡೀ ಹಾಡಿದ ರೂಢೀ ಕೇಡೀ
ನಾನಂತೇ
ಕೆಣಕತಾರೆ ಕೆದಕಿ
ನಾನಂತೆ ಮುದುಕೀ
ನಕ್ಕರು ಕೆಲವರು
ಅತ್ತರು ಕೆಲವರು
ಎಲ್ಲವರೆಂದರು
ಅಯ್ಯೋ ಪಾಪ
ಅಯ್ಯೋ ಪಾಪ!
*****