ಚಿಟ್ಟೆ

ನಿತ್ಯ ನಿತ್ಯ ಪಾರಿಜಾತ
ಚಂಪ ಮಂದಾರವು
ಮರವು ಗಿಡವು ಬೇರ ಬಳಿಗೆ
ಸುಮವ ಸಲಿಸಲು
ಭೂಮಿ ತಾಯಿ ಬಣ್ಣ ಬಣ್ಣ
ದರಳ ನಿವುಗಳ
ಮಾಲೆಯೆತ್ತಿ ಪ್ರೇಮದಿಂದ
ಮೇಲೆ ಎಸೆವಳು.
ವ್ಯೋಮವದನು ಎತ್ತಿ ಜಗಕೆ
ನೋಡಿರೆನುವನು
|| ಇಲ್ಲಿ ನೋಡಿ ಕಾಮಹಾರವೆಂದು ತೋರ್ಪನು ||

ದೇವನದನು ಪ್ರೇಮಹಾರ
ಕೊರಳಲಿಡುವನು!
ಬಣ್ಣ ಬಣ್ಣ ಹೂವ ಬಿಡಿಸಿ
ಜೋಡಿ ಮಾಡುವ.
ಚಿಣ್ಣರೆದುರು ಕುಣಿಯಿರೆಂದು
ಕೆಳಗೆ ಹಾಕುವ.
ಹುಡುಗರವನು ಚಟ್ಟೆಯೆಂದು
ಹಿಡಿಯ ಪೋಪರು!
ಹಿಡಿಗೆ ಸಿಗದೆ ಹೂವ ನುಡಿಸಿ
ಚಿಟ್ಟೆ ಪೋಪವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎನಿಮಿ ಎಂಡೋಸಲ್ಫಾನ್
Next post ಬೆನ್ ಜಾನ್ಸನ್‌ಗೆ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…