Home / Hemanta

Browsing Tag: Hemanta

ಬಾಳ್ಗಡಲು ಕೆರಳಿಹುದು, ಕಾರಿರುಳು ಬೆಳೆದಿಹುದು ಮನದ ಮನೆಯಲಿ ಭೀತಿ ನಡುಗುತಿಹುದು ನೀಲಿಮಾಪಥದಲ್ಲಿ ಅಭ್ರರಥ ತಾರೆಗಳ ತುಳಿದರೆದು ಬಾನೆದೆಯ ಸೀಳಿರುವುದು ಅಪ್ಪಿ ತಿರೆಯೆದೆಯನ್ನು ತೆಪ್ಪಗಿಹ ಮೆಲುಗಾಳಿ ನೂರು ನಾಲಗೆ ಚಾಚಿ ಒದರುತಿಹುದು -‘ಗು...

ಓಂ ಅಗ್ನಿಮೀಳೆ! ನಡೆಡಿದೆ ಒಂದೇ ಮಂತ್ರ ನಿರಂತರ ನಡುಗಿಸಿ ವಿಶ್ವದ ವಿರಾಟ ಅಂತರ ಓಂ ಅಗ್ನಿಮೀಳೆ! ಇದಕ್ಕೆ ಎಲ್ಲಿಯ ವೇಳೆ ಅವೇಳೆ ಸದಾಸರ್ವದಾ ಅಗ್ನಿಮ್‌ ಈಳೆ ಕೋಟಿ ಕಂಠದಲಿ ಕೂಗಿದ ಕಹಳೆ ನಿನ್ನ ಪೂಜೆಯಲಿ ಲೀನವಾಯಿತಿಳೆ ಓಂ ಅಗ್ನಿಮೀಳೆ! ಸರ್ವದೇವತಾ...

ಇರುಳು ಅಡಗಿ ಮೂಡು ಬೆಳಗಿ ಕಮಲದಂತೆ ತೆರೆಯಿತು ಹೃದಯದಿಂದ ಗೀತವೊಂದು ಹೊಮ್ಮಿ ದೆಸೆಯ ತುಂಬಿತು. ನಭದ ನೆಲದ ಕೆನ್ನೆಗಿತ್ತ ಉಷೆಯ ಪ್ರೀತಿ ಚುಂಬನ ಕೊನರಿಸಿತೈ ಮನಸಿನಲ್ಲಿ ಕನಸು ಕಂಡ ನಂದನ! ಬಾನ ಭಾಲದಲ್ಲಿ ಹೆಣೆದ ಅರುಣ ಕಿರಣ ಗುಂಫನ ಮನದ ಭಾವ ವಿಹಗ...

ಮನೆಗೆ ಬಂದೆ ಭಾಗ್ಯ ಸಖಿ ಅಂದು ನೀ ವಿವಾಹಿತ ಮನದಿ ಬರೆದ ಸ್ವಪ್ನ ಲಿಪಿ ಮೃದು ಮೃಣಾಲ ಶಿಲ್ಪಿತ ತೆರೆಯಿತೆಂದೆ ದೈವಕೃಪಾ ಜನುಮ ಜನುಮ ವಾಂಛಿತ ನಿಂತೆ ನೀನು ನನ್ನ ಎದುರು ನನ್ನ ದೇಹ ನವಿರಿನ ತರು ಅಡಿಮುಡಿಗಳ ಅದರು ಪದರು ದಾದಿಡಗಳ ಝೋಂಕೃತ ಮನದ ಮೂಲೆ...

ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಹೊರಗೆ ಬರಿಯ ಬಿಸಿಲು ಧೂಳಿ ದೇಹ ಮನವನೆಲ್ಲ ಹೂಳಿ ಮೇಲೆ ಕುಣಿವಳವಳು ಕಾಳಿ ನೋವು ನರನ ಕೊರಳ ತಾಳಿ! ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಎಲ್ಲ ಕಡೆಗೆ ವಿಷದ ಗಾಳಿ ತಡೆಯಲಾರೆ ಅದರ ದಾಳಿ ನನ...

ಇ೦ದು ಸಂಜೆಯ ನಿಟ್ಟು ನಿಟ್ಟಿಗೆ ಬೆಳೆದು ನಿಂತಿದೆ ಸಂಪದ ಹಕ್ಕಿ ಹಾರಿದ ಹಾಗೆ ಹರಿಯಿತು ಮನದಿ ಊರಿದ ಆ ಪದ ಚೆಂಗುಲಾಬಿಯ ಬನವು ಅರಳಿದೆ ನೋಡು ಬಾನಿನ ದಂಡೆಗೆ ಪ್ರಾಣ ಶುಕವೇ ಕ್ಷುಬ್ಧವಾಯಿತು ಬಂತು ಕಣ್ಣಿನ ಕಿಂಡಿಗೆ ಸ್ವರ್ಗಲೋಕದ ಸ್ವರ್ಣ ದ್ವಾರವು ...

ನಾನು ನೀನು ಬೇರೆ ಏನು? ಒಲಿದು ಬೆರೆತ ಹಾಲು ಜೇನು! ಯುಗ ಯುಗಗಳ ಬಲಿದ ಆಸೆ ಜನ್ಮಾಂತರಗಳ ಪಿಪಾಸೆ ಫಲಿಸಿ ಬಂದ ಹೃದಯಂಗಮ ನಮ್ಮೆದೆಗಳ ಸಂಗಮ ೧ ಗಂಗೆ ಯಮನೆ ಕೂಡಲಿಲ್ಲ ಕರಿದು ಬಿಳಿದು ಬೆರೆಯಲಿಲ್ಲ ನಾನು ನೀನು ಬೇರೆಯಲ್ಲ ಅತುಲವೀ ಸಮಾಗಮ ೨ ಆಕಾಶದ ಚಿ...

ಬಾ ಬಾರೆ ರಾಧಿಕೆ ಶೂನ್ಯವಾದ, ದೀನವಾದ ನನ್ನ ಹೃದಯಕೆ! ಗರುವದ ಶಿಲೆ ಕತ್ತರಿಸಿದೆ ವಿನಯದ ಶೆಲೆ ಹೊರ ಹೊಮ್ಮಿದೆ ಬಾರೆಲೆ ತಡವೇಕೆ ಬಾ ಬಾರೆ ರಾಧಿಕೆ! ವನವನದಲಿ ಸಂಚರಿಸಿದೆ ನಿನ್ನ ಹೆಸರನುಚ್ಚರಿಸಿದೆ ಕರೆದೆ ಸಖಿಯೆ ಸನಿಹಕೆ ಬಾ ಬಾರೆ ರಾಧಿಕೆ! ಬೇರೆ...

ಇಳೆಗೆ ಬಂದಳದೋ ಲಕ್ಷ್ಮಿ ಮಧುಮಾಸದ ಅಮೃತ ರಶ್ಮಿ! ಮಿಂದು ಬಂತು ನೆಲಜಲ ಸ್ವಾಗತಿಸಿತು ಭೂತಲ ದಿಸೆ ದಿಸೆಯೂ ಹೊಳೆವ ಹವಳ ಸ್ವಸ್ತಿ ಲಿಖಿತ ಹೊಸ್ತಿಲ! ಗಗನ ಕರದ ನೀಲಕಮಲ ಅರ್ಘ್ಯವೀಯೆ ಕಿರಣ ಸುಜಲ ಕೈ ಮುಗಿಯಿತು ಜೀವಕುಲ ಭಾವ ಪಕ್ವ ಫಲವಲ! ಪುರೂರವನ ಎದ...

ಉಷೆಯು ವೀಣೆಯ ನುಡಿಸುತಿರುವಳು ಯಾವ ರಾಗದ ಮಧುವನು ತಂತಿ ಕಂಪಿಸೆ ಚಿಮ್ಮಿ ಬರುವುದು ಗಾನದೈಸಿರಿ ನೆಗೆವುದು ವಿಶ್ವಕಮಲವು ಅರಳಲಿರುವುದು ಬೆಳಕಿನಲಿ ನಗೆ ಮೊಲ್ಲೆಯು ಭೂಮಿದೇವಿಯ ಮನವು ಚಿಗಿವುದು ಮುಗಿಲ ಮುಟ್ಟುತ ಮೆರೆವುದು. ಹೃದಯಶತದಲ ಸುಮನ ಬಿರಿವ...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...