ಸೋನೆ

ಹನಿಹನಿ ಬಿದ್ದು ಲಯ ಭೋರೆಂದು ಸುರಿದಾಗ ಬೀದಿಯಲಿ ಹರಿಯುವ ಧಾರೆ ಹಳ್ಳವಾಗಿ ನದಿಯಾಗಿ ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ ಮೇಲೆ ನೀಲಿಹಕ್ಕಿ ತೊಯ್ದು ತಪ್ಪಡಿಯಾಗಿ. ಸಾಲು ಸಾಲು ಪಾಠವ...

ಗಾಳಿಪಟ

ಮೂಲ ತಿಳಿಯದ ಆಳ ಅರಿಯದ ಮುಗ್ದ ಮನಸ್ಸುಗಳು ಕಲ್ಪನೆ ಚಿಟ್ಟೆಗಳರಸಿ ವಿಸ್ಮಯಕೆ ಒಡ್ಡಿ ಎಲ್ಲಿಂದಲೋ ಬಂದವರು ಒಂದಾದ ಅಂಗಳ ಓಣಿ, ಶಾಲೆ, ಬಯಲು. ಜತನದಲಿ ಒಂದಾದ ಗೆಳೆತನ ಕಾಪಿಟ್ಟ ಭಾವಗಳ ಒಂದೊಂದಾಗಿ ಅರಸಿ ಆರಿಸಿತಂದ...

ಒಡತಿ

ಸಾಲುಗಟ್ಟಿ ಸಾಗಿದ ಇರುವೆಗಳು ಕವಿತೆ ಮೆರವಣಿಗೆ ಹೊರಟವೆ ಶಬ್ದಗಳ ಸೂಕ್ಷ್ಮ ಜೇಡನ ಬರೆಯಲಿ ಸಿಲುಕಿ ಹೊರ ಬರಲಾರದೇ ಒದ್ದಾಡಿವೆ ಸುರಿದ ಮಳೆ ಅಂಗಳದ ಥಂಡಿ ಹರಡಿ ಹಾಸಿದ ಹನಿ ಹನಿಯ ಹೆಗ್ಗುರುತು ಗುಳಿಯಲಿ ಅವಳ...

ಇರಬಹುದು ಬದುಕು

ನಮ್ಮೆಲ್ಲರ ಪಯಣದ ದಾರಿ ತುಂಬ ಗಿಡಮರ ಹಕ್ಕಿ ಚಕ್ಕಿ ವಿಸ್ಮಯಗಳ ನೋಟ ಕೂಟದಲ್ಲಿ ನಾನೀನಾಗಿ ನೀನಾನಾಗಿ ಬಿಟ್ಟು ಬಂದ ನಡೆದ ದಾರಿ ಹಸಿಬಿಸಿ ಎಲ್ಲವೂ ಇದ್ದು ಒಮ್ಮೆ ತಿರುಗಿ ನೋಡಿ ನರಳೋಣ ಇದು ಇರಬಹುದು...

ಚಿಗುರು ಮೌನ

ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ. ಮಾಗಿದ ಚಳಿಯ ಪದರಲಿ ಸೋಸಿ...

ಸಿಕ್ಕು

ತೆರೆದ ಮುಚ್ಚಿದ ಬಾಗಿಲುಗಳ ಸಂದಿಯಲಿ ಜೇಡ ನೇಯ್ದ ಬಲೆ ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು ಕಳೆದು ಹೋದವು ದಿನಗಳ ನೇಯ್ಗೆಯ ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ. ನಾಡಿನ ದೇವರಿಗೆಲ್ಲಾ ಚೌಕಟ್ಟು ಪಡೆದು ಕುಂತ...

ಬೋರಂಗಿ

ದಟ್ಟ ಮೆಳೆಯ ಬದುವಿನಲಿ ಅಂಡಲೆಯುತ್ತಿದ್ದ ಗೆಳತಿಗೆ ಎಲ್ಲೋ ಮರದ ತುದಿಯಲಿ ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ ಬೋರಂಗಿ ಸಾಹಸದಿಂದ ಹಿಡಿದು ತಂದ ಮದರಂಗಿ. ಅದು ಪುರ್ರನೆ ಹಾರಿ ಮೈಯಲ್ಲಾ ರೋಮಾಂಚನ ಪುಟ್ಟ ಅಂಗೈತುಂಬ ಚೆಲುವಿನ...

ಕಾಯಕಲ್ಪ

ಪ್ರತಿ ಸಂಜೆ ತಲೆಯ ಮೇಲೆ ಹಾಯ್ದು ಹೋಗುವ ರೆಕ್ಕೆಗಳ ತಂಪಿನಲಿ ನಿನ್ನ ಪ್ರೀತಿ ತೇಲಿ ಯಾವುದೋ ಪರಿಮಳ ಹೊತ್ತ ಸೂರ್‍ಯ ಮುಳುಗುತ್ತಾನೆ ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ. ನಕ್ಷತ್ರ ತುಂಬಿದ ನೀಲಿಯಲ್ಲಿ ಮಹಾ ಮೌನ...

ಕೊಳಲು

ಅಂತ ಕರಣ ಒಸರಿಸಿದ ರಸಪದದ ರಾಗ ಹರಿವ ನದಿಯ ಜುಳು ಜುಳು ಸಪ್ತಸ್ವರವಾದ ಸಪ್ತರ್ಷಿಮಂಡಲ ಮಿನುಗು ಮಿಂಚು ರಸಭಾವ ಎಲ್ಲ ತಲ್ಲಣಗಳ ದಾಟಿ ಒಡಲಿಂದ ಒಡಲಿಗೆ ಸೇರುವ ಅಂತರಂಗದ ಸಮುದ್ರ. ವೃಷ್ಠಿ ಸಮಷ್ಠಿಯ ಮಂಗಳ...

ಕವಿತೆ

ಎಣ್ಣೆಹಚ್ಚಿ ತಿದ್ದಿತೀಡಿ ಬೆಚ್ಚಗಿನ ಹಂಡೆಯಲಿ ಹದಕಾಯಿಸಿ ಕಾಲು ನೀಡಿ ಎರೆದು ಹಾಕಿದ ಕಂದ ಸಾಂಬ್ರಾಣಿಯ ಸೂಸು ಹೋಗೆ ಕಣ್ಣು ರೆಪ್ಪೆಯ ಮುಚ್ಚಿ ತೆಪ್ಪಗೆ ಮಲಗಿರುವ ತೊಟ್ಟಿಲಲಿ ಹಾಲು ಹೀರಿದ ಎದೆಯಲಿ ಚಿಲ್ಲನೆ ಮತ್ತೆ ಚಿಮ್ಮುತ್ತಿವೆ...