ಸಾಲುಗಟ್ಟಿ ಸಾಗಿದ ಇರುವೆಗಳು
ಕವಿತೆ ಮೆರವಣಿಗೆ ಹೊರಟವೆ
ಶಬ್ದಗಳ ಸೂಕ್ಷ್ಮ ಜೇಡನ ಬರೆಯಲಿ
ಸಿಲುಕಿ ಹೊರ ಬರಲಾರದೇ ಒದ್ದಾಡಿವೆ
ಸುರಿದ ಮಳೆ ಅಂಗಳದ ಥಂಡಿ
ಹರಡಿ ಹಾಸಿದ ಹನಿ ಹನಿಯ
ಹೆಗ್ಗುರುತು ಗುಳಿಯಲಿ ಅವಳ
ಕಣ್ಣುಳು ಏನೋ ಅರಸಿ ಬಳಲಿವೆ
ಕರಿಮೋಡದ ತೇಲು ಬಾನಿನಗಲ
ಹಾಸಿದ ಇರುಳಲ್ಲದ ಹಗಲು ಮುಬ್ಬು
ಸಂಜೆ ಮಲ್ಲಿಗೆ ಅರಳಿ ಸೂಸಿದ ಕಂಪು
ಗಾಳಿಯಲಿ ತೇಲಾಡಿವೆ ಹೊಂಗೂದಲು
ಸುರಿದ ಮಳೆ ಭರತ ಸೆಳೆತ
ತೋಡು ಸಂಕ ನದಿಯಾಗಿ ಸೇರುವ
ಗೊಂದಲದ ಅಲೆಗಳು ಸಾಗರ ತುಂಬಿ
ಆಳದ ನಿರಾಳದಲಿ ನೀರವ ಶಾಂತ ಕವಿತೆ
ಮರಗಿಡಗಳು ಹಕ್ಕಿಕೊರಳು
ಮಿಂದನೆಂದ ನೆಲಮುಗಿಲುಗಳು
ಮನಸ್ಸಿನ ಸೂಕ್ಷ್ಮ ಸಾಮರ್ಥ್ಯಗಳ
ರಹಸ್ಯ ಒಡೆಯುವ ಮಾಟಗಾತಿ ನನ್ನೊಡತಿ.
*****