ನನ್ನ ಕವಿಯೆಂದೆನುವ ಮೆಚ್ಚುಮಾತೇಕೆ? ಪದದ ಸಮ್ಮಿಳನವೋ ಈ ನನ್ನ ಕವಿತೆ! ಎದೆಯ ಉಮ್ಮಳವಿದುವೆ, ಅದು ನಿನ್ನ ಕುರಿತೆ ಕೊರಗುತಿಹೆ ಕೊರಳಿದಕೆ ಹೊನ್ ಪದಕವೇಕೆ? ಇದು ಕವಿತೆಯಹುದೆನುವ ಮಾತು ಸರಿಯಲ್ಲ -ಕವಿಯು ನಾನಲ್ಲ- ಇದು ನಿನ್ನ...
ತಾರೆ ಬೆಳಗುತಲಿತ್ತು ಆಗಸದಿ ನಗುನಗುತ ಹುಲ್ಲು ಗರಿಕೆಯದೊಂದು ನೆಲದಿ ನಿಂತು ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ ಕಂಡು ಬೆರಗಾಗುತಲಿ ಕರೆಯಿತಿಂತು! "ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ ಮನದ ಚಿಂತೆಯನಳಿಸಿ ಶಾಂತಿ ನೀಡು." ಗರಿಕೆ ವಿರಹದಿ ಸೊರಗಿ...
ಉರುಳಿರುವ ತಾರೆಗಳಿಗಳುತ ನಿಲ್ಲುವರುಂಟೆ? ಮೂಡಿರಲು ಮೂಡಲಲಿ ಉದಯದರಳಿನ ಕಂಪು ಕಳೆದ ಕಾಲದ ತಂಟೆ ಇಂದೇಕೆ? - ಹೊಸ ತಂಪು ಹೃದಯದೊಳಗರಳಿರಲು, ಕಂಪು ಸವಿವುದಬಿಟ್ಟು ಅಳಿದ ಕನಸುಗಳನ್ನು-ಸತ್ವವಿಲ್ಲದ ಹೊಟ್ಟು ಅದು ಎಂಬುದನೆ ನೀ ನಂಬದೆಯೆ ಮೊಗೆಮೊಗೆದು...
ಕಂಗಳಿಂದಲಿ ನಿನ್ನ ನೆನಪದೂಡುವುದೆಂತು? ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು ಕಳೆದ ಕಾಲದಲಳಿದ ಕನಸುಗಳು ಹೊರಬಂದು ದುಗುಡ ಹರಡುತಲಿಹವು. ದಡದ ಮೇಲಿನ ಮರಳು ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,...