ದೇವರ ನೆಲೆ

ಶಿಲಾಮೂರ್ತಿಯಲಿ ದೇವರನು ಕಾಣುವ ಹುಚ್ಚು ಹಂಬಲವೇಕೆ? ಕಣ್ಣಿಗೆ ಕಾಣುವ ದೇವರನು ಅರಿಯದೆ ಕೈಬಿಟ್ಟೆಯೇಕೆ? ಕಲ್ಲಿನಲಿ ಮಣ್ಣಿನಲಿ ಗಾಳಿಯಲ್ಲಿ ನೀರಿನಲ್ಲಿ ಪಶುಪ್ರಾಣಿ ಸಂಕುಲದಲಿ ಪ್ರಕೃತಿಯ ಜೀವಜಂತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಂದರಲ್ಲಿ ನೀ ಕಾಣುವಲ್ಲಿ ದೇವರಿರುವನು ನೋಡಾ...

ಸಂಕ್ರಾಂತಿ

ಹುಟ್ಟು ಸಾವುಗಳ, ನೋವು ನಲಿವುಗಳ ಬದುಕಿದು ಬರೀ ಭ್ರಾಂತಿ ಆಸೆನಿರಾಸೆಗಳ ನಡುವೆ ತೂಗಿದೆ ಸಂತಸದ ಸಂಕ್ರಾಂತಿ ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ ಕಾಣಲು ಹೊಸ ವರುಷ ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ ಸಂಕ್ರಾಂತಿಯ...

ಬವಣೆ ಗೂಡು

ಚೈತ್ರ ಬಂದರೇನು? ಚಿಗುರಿಲ್ಲವಲ್ಲ ವಸಂತ ಬಂದರೇನು ಹೂ ಅರಳಿಲ್ಲವಲ್ಲ. ಯುಗಾದಿ ಬಂದರೇನು? ಹರುಷವಿಲ್ಲವಲ್ಲ ಕಟ್ಟಿದ ಕನಸುಗಳು ನನಸಾಗದೆ ಬಂಧಿಯಾಗಿವೆ ಭೂತದ ಪಂಜರದಲ್ಲಿ ಆಸೆ ಭರವಸೆಗಳು ದಹಿಸಿವೆ ಅಂತರಂಗದ ಅಗ್ನಿಕುಂಡದಲ್ಲಿ ಹೃದಯ ಮನಸ್ಸುಗಳೆರಡು ಶಿಲೆಯಾಗಿವೆ. ಜಡಭರತ...

ಚೈತ್ರಗಾನ

ಚೈತ್ರ ಬಂತು ಚೈತ್ರ ಬದುಕು ಬವಣೆಯಾತ್ರೆ ಅಳುವಿರಲಿ, ನಗುವಿರಲಿ ಕಥೆಗೆ ತಕ್ಕ ಪಾತ್ರ ಅಪ್ಪ ಅಮ್ಮ ಅಣ್ಣ ತಂಗಿ ಜೊತೆಯಾದರು ಪಯಣಕೆ ನಲಿವಿನಿಂದ ನೋವು ನುಂಗಿ ನಡೆದೆವು ದೂರ ತೀರಕೆ ತೀರ ದೂರ ಬದುಕು...

ಹಾಡು ಕೋಗಿಲೆ

ಹಾಡುವ ಕೋಗಿಲೆಯೇ ಏಕೀ ಮೌನ ದುಮ್ಮಾನ ಹೊಸ ವರುಷಕೆ ಹೊಸ ಪಲ್ಲವಿಯ ಹೊಸ ತಾನದೆ ಹಾಡು ನೀನು ಮುನಿದ ಮನಗಳ ಬೆಸೆದು ಪ್ರೇಮ ಪಾಶದೆ ಬಿಗಿದು ಒಲವು ಚೆಲುವುಗಳ ಧಾರೆಯೆರೆದು ಎದೆ ತುಂಬಿ ಹಾಡು...

ಬೋಳು ಮರ

ಅಚ್ಚರಿಯ ನೋಟವದೇಕೆ ನಿಟ್ಟುಸಿರ ಬಿಡುವಿರೇಕೆ ಅರೆಗಳಿಗೆ ದಿಟ್ಟಿಸಿ ನೋಡಿರಿ ಕಲಾವಿದನ ಕರಚಳಕದೆ ಅವಿರ್ಭವಿಸಿದ ಕಲ್ಪನೆಯ ಚಿತ್ರವೇ ದೇವನ ಸೃಷ್ಠಿಯ ವೈಚಿತ್ರವೇ ಅಲ್ಲ ನಿಮ್ಮೆದುರು ನಿಂತಿರುವ ನಾನೊಂದು ಬೋಳು ಮರ ಗತ ಕಾಲದೆ ನಾನಾಗಿದ್ದೆ ಫಲಭರಿತ...

ವರ್ಷ ಕಾಲ

ವರ್ಷಾ ಬಂತು ಹರುಷ ತಂತು ಎಲ್ಲರೆದೆಯಲಿ ಹಸಿರು ತುಂಬಿ ಉಸಿರು ಬಂತು ಭೂಮಿಯ ಮೊಗದಲಿ ಹನಿ ಹನಿ ಮುತ್ತಾಗಿ ಚೆಲ್ಲಿ ಧರೆಗಿಳಿದು ಹಾರವಾಗಿ ಕಡಲ ಕೊರಳ ಬಳಸಲೆಂದು ವಧುವಂತೆ ನಾಚುತ ಬಂತು ಹೊಳೆ ಹಳ್ಳ...

ಸುಂದರ ಪರಿಸರ

ಪರಿಸರ ಸುಂದರ ಪರಿಸರ ಜೀವಕೋಟಿಯ ಚೇತನಸಾರ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ ಕಾಣದಾಯಿತೇ ಕಣ್ಮನ ತಣಿಸುವ ಗಿರಿಕಾನನ ಪರಿಮಳ ಸೂಸುವ ಸುಮವದನ ಪಂಚಮ ಸ್ವರದ ಕೋಗಿಲೆಗಾನ ತಂಪು ಸೂಸುವ ತಂಗಾಳಿ ತಾನ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ...

ಉಪದೇಶ

ಬಂದೆಯಾ ಬಾ, ಬಂದಾಯಿತಲ್ಲ ಇನ್ನೇಕೆ ಮೀನಮೇಷ. ಮೂರು ಬಿಟ್ಟು ನಿಂತಿರುವ ಅಭ್ಯಾಗತ ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ ನಿನ್ನದೇನು ಹೆಚ್ಚುಗಾರಿಕೆ ಅರವತ್ತರಲ್ಲಿ ನೀನು ಒಬ್ಬ. ಹೊಸ ವೇಷ ಹಳೆ ಹೆಸರು ಬರಿಗೈಯಲ್ಲಿ ಬಂದಿರುವೆಯಾ ಹೇಗೆ? ಏನೇನು...

ಯಾರಿವರು?

ಎಲ್ಲೋ ನೋಡಿದ್ದೇನೆ ಇವರನ್ನು ಕೇಳಿದ್ದೇನೆ ಮಾತುಗಳನ್ನು ಯಾರಿವರು? ಅಟ್ಟದಿಂದ ಬೆಟ್ಟಕ್ಕೆ ಏರಿಸಿ ಧೊಪ್ಪನೆ ಕೆಡುವವರು ಕಂಬಿ ಇಲ್ಲದೆ ರೈಲು ಬಿಡುವ ಅತಿ ಮಾನುಷರು. ಮಾತಿನಲ್ಲೇ ಮನೆ ಕಟ್ಟಿ ಮಾತಿನಲ್ಲೇ ಹೊಟ್ಟೆ ಬಟ್ಟೆ ಮಾತಿನಲ್ಲೇ ಸ್ವರ್ಗ...