ತನ್ನೆಲೆಯ ಕಳೆದೇನು ವನವೋ? ಜೀವನವೋ?

ಏನಿದೇನಿದಕಟಾ ನಾವಿರ್ಪಲ್ಲೆ ಇರುತಿದ್ದೆಮ್ಮ ಬೇಕುಗಳೆಲ್ಲ ವನು ಕೊಂದಾಯ್ತು ನೀರನ್ನಗಳನು ತಿಂದಾಯ್ತು ಇನ್ನುಳಿದಿಹುದೊಂದೆ ಗಾಳಿಯದರಂತರುಷ್ಣತೆ ಯನೇರಿಸಿರಲದಕು ಅಭಾವ ಬಂದಾಯ್ತು ಇನ್ನೇನಿದ್ದೊಡಂ ಇರುನೆಲೆಯ ಕೃಷಿಯೊಂದ ಬದುಕಿಗಾಧಾರ - ವಿಜ್ಞಾನೇಶ್ವರಾ *****

ಮಲಗಿದ್ದೆ

ಸರ್ಕಾರಿ ಕಛೇರಿ ಕ್ಲರ್‍ಕ್ ಶೀಲಾಳಿಗೆ ಬಾಸ್ ಕೇಳಿದ "ಯಾಕೆ ಇವತ್ತೂ ಲೇಟು.." "ಸಾರ್ ಬೆಳಿಗ್ಗೆ ಏಳುವುದು ಲೇಟಾಯಿತು.." "ಏನು ಮನೆಯಲ್ಲೂ ನಿದ್ದೆ ಮಾಡ್ತೀರಾ?" ಎಂದು ಕೇಳಿದ ಬಾಸ್. *****

ಸಂಕ್ರಾಂತಿ

ಹುಟ್ಟು ಸಾವುಗಳ, ನೋವು ನಲಿವುಗಳ ಬದುಕಿದು ಬರೀ ಭ್ರಾಂತಿ ಆಸೆನಿರಾಸೆಗಳ ನಡುವೆ ತೂಗಿದೆ ಸಂತಸದ ಸಂಕ್ರಾಂತಿ ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ ಕಾಣಲು ಹೊಸ ವರುಷ ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ ಸಂಕ್ರಾಂತಿಯ...
ವಚನ ವಿಚಾರ – ನೀನು ನಾನು

ವಚನ ವಿಚಾರ – ನೀನು ನಾನು

ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ ಅಯ್ಯಾ ಎನ್ನೊಳಗೆ ಇನಿತಿರ್ದು ಮೈ ದೋರದ ಭೇದವ ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ [ಇನಿತಿರ್ದು-ಇಷ್ಟು ಇದ್ದು, ಹೀಗೆ ಇದ್ದು] ಅಕ್ಕಮಹಾದೇವಿಯ ವಚನ. ನಾನು ಯಾರು...

ಕೊನೆಯಾಶೆ

ಹೊಸದಿನದ ಹೊಸತುತ್ತೂರಿಯ ದನಿ- ಯು ಹೃದಯವನು ಸೇರೆ, ಕುದಿರಕ್ತ ತಳಮಳಿಸಲಾ ನವಜವ್ವನೋತ್ಸಾ- ಹದಲಿ ಪಂಜರದೊಳಿಹ ಗಿಳಿಯ ಹೊ- ರಗೆಳೆದು ತೂರಿ ತೇಲಲು ಬಿಟ್ಟು, "ಸೌಖ್ಯದಾಕಾಶದಲಿ ಮುಗಿಲು- ಹಣ್ಣುಗಳ ಸವಿದು ಶಾಂತಿಸರಕಿ- ಳಿದು ತಿಳಿನೀರನೀಂಟಿ ಸತಿ...