ಶಿಲಾಮೂರ್ತಿಯಲಿ ದೇವರನು
ಕಾಣುವ ಹುಚ್ಚು ಹಂಬಲವೇಕೆ?
ಕಣ್ಣಿಗೆ ಕಾಣುವ ದೇವರನು
ಅರಿಯದೆ ಕೈಬಿಟ್ಟೆಯೇಕೆ?
ಕಲ್ಲಿನಲಿ ಮಣ್ಣಿನಲಿ
ಗಾಳಿಯಲ್ಲಿ ನೀರಿನಲ್ಲಿ
ಪಶುಪ್ರಾಣಿ ಸಂಕುಲದಲಿ
ಪ್ರಕೃತಿಯ ಜೀವಜಂತುಗಳಲ್ಲಿ
ಅಣುರೇಣು ತೃಣಕಾಷ್ಠಗಳಲ್ಲಿ
ಎಲ್ಲೆಂದರಲ್ಲಿ ನೀ ಕಾಣುವಲ್ಲಿ
ದೇವರಿರುವನು ನೋಡಾ
ಕಾಣದೆ ಬಳಲುವೆಯೇಕೆ ಮೂಡಾ.
ಗುಡಿ ಚರ್ಚು ಮಸೀದಿಗಳ ಒಳಗೆ
ಅರಳಿ ಅಶ್ವತ್ಥ ಕಟ್ಟೆಗಳ ನಡುವೆ
ದೇವರಿರುವನೆಂಬ ಸಂಕುಚಿತ ಭಾವನೆ
ಸರಿಸಿ ಮನವ ವಿಶಾಲವಾಗಿಸಿ
ಒಳಗಣ್ಣ ತೆರೆದು ಸುತ್ತ ಗಮನಿಸಿ
ಕಾಣುವನು ದೇವರಾಗ
ಪ್ರೀತಿ ತುಂಬಿದ ಹೃದಯಗಳಲ್ಲಿ
ಸ್ನೇಹ ವಿಶ್ವಾಸದ ಮಾತಿನಲ್ಲಿ.
*****
Related Post
ಸಣ್ಣ ಕತೆ
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…