ಕಾಸಿನಾಸೆ ತೋರಿಸಿ ಬಡವಾದ ಕೃಷಿಯನುಳಿಸಲುಂಟೇ?

ರಸಗೊಬ್ಬರವನೆರಚಿ ಇಳುವರಿಯನಧಿಕ ಗೊ ಳಿಸುವವೊಲ್ ಸಾಲ ಸಬ್ಸಿಡಿ ಯೋಜನೆಗಳಾಸೆ ತೋ ರಿಸಿ ರೈತರುತ್ಸಾಹವುಳಿಸುವುಪಾಯ ಇನ್ನೆಷ್ಟು ದಿನವೋ? ಕಸುವಿಲ್ಲ ಭುವಿಯಲ್ಲಿ ಜಸವಿಲ್ಲ ರೈತನಲಿ ವಿಷವೆಲ್ಲ ಮನಸಿನಲಿ ರಸ ಸೃಷ್ಟಿಯದೆಂತೋ -ವಿಜ್ಞಾನೇಶ್ವರಾ *****

ನನ್ನಲಿಲ್ಲದ್ದು

ಶೀಲಾ: "ನಾನು ದಿನಾ ನೋಡುತ್ತಿದ್ದೀನಿ.. ಪಕ್ಕದ ಮನೆಯವಳನ್ನು ನೋಡ್ತಾ ಇರ್‍ಈರಲ್ಲಾ. ನನ್ನಲಿಲ್ಲದ್ದು ಅವಳಲ್ಲೇನಿದೆ?" ಮಂಜು: "ನಾನು ನೋಡ್ತಿರುವುದು ಅದನ್ನೆ" *****

ಚೈತ್ರಗಾನ

ಚೈತ್ರ ಬಂತು ಚೈತ್ರ ಬದುಕು ಬವಣೆಯಾತ್ರೆ ಅಳುವಿರಲಿ, ನಗುವಿರಲಿ ಕಥೆಗೆ ತಕ್ಕ ಪಾತ್ರ ಅಪ್ಪ ಅಮ್ಮ ಅಣ್ಣ ತಂಗಿ ಜೊತೆಯಾದರು ಪಯಣಕೆ ನಲಿವಿನಿಂದ ನೋವು ನುಂಗಿ ನಡೆದೆವು ದೂರ ತೀರಕೆ ತೀರ ದೂರ ಬದುಕು...
ವಚನ ವಿಚಾರ – ಊರ್ವಶಿ ಮತ್ತು ಹಂದಿ

ವಚನ ವಿಚಾರ – ಊರ್ವಶಿ ಮತ್ತು ಹಂದಿ

ಊರ್ವಸಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರಲ್ಲದೆ ಹಂದಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರೆ ಹುಡು ಹುಡು ಎಂದಟ್ಟುವರಲ್ಲದೆ ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮಚ್ಚುವರಲ್ಲದೆ...

ನಾದಭೇದ

೧ ಢಣಢಣನಾದವು ಕೇಳಿಸಿತೆಂದರೆ, ದೇವರಪ್ರಾಣವು ಹಾರುವುದು. ಧರ್ಮಕ್ಕೆ ಬೆಂಕಿಯ ಬೀಳುವದು. ಸೂರ್ಯನ, ಸಾಗರ ನುಂಗುವುದು. ದೈತ್ಯರ ಮೇಳವು ಕೂಡುವುದು. ಕಾಲನ ನೃತ್ಯವು ನಡೆಯುವುದು. ಭೈರವಿರಾಗವು ಕೇಳುವುದು. ನರಕವು ಸ್ವಾಗತಗೈಯುವುದು. ಢಣಢಣನಾದವು ಕೇಳಿಸಿತೆಂದರೆ! ೨ ಝಣಝಣನಾದವು...