ಆಯ್ದಯ್ದರನಿತಯ್ದುತಯ್ದಿತಾ ಕಾಲಂ

ಅಯ್ದಯ್ದರನಿತಯ್ದು ತಯ್ದಿತಾ ಕಾಲಂ ನಿನ್ನ ನಿನ್ನವರಂದು ನನಗಿತ್ತ ದಿನದಿಂ; ವಿಧಿ ನಿನ್ನ ತುಡುಕಲಿಂದೆನ್ನ ಬಾಳ್ತನದಿಂ ಕತ್ತಲಿಸಿತೊಡನೆ ಮುಂದಣ ಚಕ್ರವಾಲಂ! ೪ ನಿನಗಾದುದಿಲ್ಲ ನಾ, ನೀನೆ ನನಗಾದೆ- ನನ್ನ ಕೆಯ್ವಿಡಿದೆ ನೀನಳಲನನುಭವಿಸೆ! ನಿನ್ನ ಚೆಲುವಲಿ ಪಿಪಾಸೆಯನೆನ್ನ...

ಹೋಮರ್ ಹಾಡಿದ ಹೆಣ್ಣು

ನನ್ನ ಹರೆಯದ ಆ ದಿನಗಳಲ್ಲಿ ಅವಳತ್ತ ಗಂಡೊಂದು ಸುಳಿದರೆ, ಪ್ರೀತಿಸುತ್ತಿದ್ದಾನೆ ಅನ್ನಿಸಿ ಭಯ ದ್ವೇಷ ಉಕ್ಕಿ ತಲ್ಲಣಿಸುತ್ತಿದ್ದೆ. ನೋಡಿಯೂ ಅವಳತ್ತ ತಿರುಗದೆ ದಾಟಿ ಹೋದರೆ ಅವನು ‘ಅಯ್ಯೋ ಘೋರ ಅಪರಾಧ’ ಎಂದೆನ್ನಿಸಿ ಒಳಗೊಳಗೆ ಒದ್ದಾಡುತ್ತಿದ್ದೆ....

ನಂ ದೇವ್ರು ಮುನಿಯ

ಕೈ ಮುಗದು ಕರ್‍ಪೂರ ಅಚ್ಚಿ ಕಾಸ್ಕೊಟ್ಟು ತಂಗನಕಾಯ್ ಚಚ್ಚಿ ಅಡ್ಬಿದ್ರೆ ಕಲ್ಲೆಲ್ಲ ದೇವ್ರೆ! ಇಲ್ದಿದ್ರೆ-‘ಜಾಕರ್ರ್ ಆವ್ರೆ!’ ೧ ‘ಮುನ್ಯಣ್ಣ!’ ಅಂದ್ಕೊಂಡಿ ಬಂದಿ ಝಲ್ ಝಲ್ನೆ ರೂಪಾಯ್ಗೋಳ್ ತಂದಿ ಸುರಿತಿದ್ರೆ ಕೊಡತೌನೆ ಯೆಂಡ! ಇಲ್ದಿದ್ರೆ ತರತೌನೆ...

ರತ್ನಾಕರ

ಕೃತಿಗಳೊಳು ನಿನ್ನ ಶೃಂಗಾರ ಪಾವನ ಗಂಗೆ- ಯೊಲು; ರಸವು ಸಮರಸವು. ರುಚಿಯು ಶುಚಿ, ಸುಭಗ, ಗಂಭೀರ, ಅಸಮಾನ, ನೂತನ, ರಮ್ಯ, ಮಧುರತಮದೃಷ್ಟಿ ಸುಖವೃಷ್ಟಿ; ಕಲ್ಲಿನಲು ನಂದನದ ಅಂದ ಕಂಡರಿಸಿ ಕುಸಿರಿಸಿ ನಗುವ ರೂವಾರಿ ಬಗೆ;...

ಯುಗಾದಿಯ ನೆನಪು

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ! ಇಂದೆನ್ನನೀಚಿಸುವ ವೀಚಿಯೂ ವಿಭವಂ ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪ ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ- ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ? ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ- ಹಬ್ಬಮಿನ್ನೆನಗೆ...

ಪ್ರೀತಿಸುತ್ತಿರಬೇಡ ಬಹುಕಾಲ

ಪ್ರೀತಿಸುತ್ತಿರಬೇಡ ಬಹುಕಾಲ, ಚಿನ್ನ! ಪ್ರೀತಿಸಿದ್ದವ ಹಾಗೆ ನಾನು, ಹೊರಗಾಗುವಂತೆ ಫ್ಯಾಷನ್ನಿಂದ ಹಳೆಹಾಡು ಮರೆಯಾಗಿಯೇ ಹೋದೆ ನಾನು. ನಮ್ಮ ಯೌವನದ ಅಷ್ಟೆಲ್ಲ ವರ್ಷಗಳುದ್ದ ತಿಳಿಯಲಾಗಲೇ ಇಲ್ಲ ನಮಗೆ ಯಾವುದವಳ ವಿಚಾರ, ಯಾವುದು ನನ್ನದು ಎಂದು ಹಾಗಿತ್ತು...

ಬಲೆ ಜಿಪ್ಣ ಮುನಿಯ

ಊರಾಚೆ ಪಡಕಾನೆ ಇಟ್ಟೌನೆ ಮುನಿಯ- ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ. ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ- ಯಾರ್ ಬಿಕ್ಸೆ ಬೇಡ್ತಾರ್‌ ಅಂತ್ ಎದರ್‍ತಾನಾ ಮುನಿಯ- ಊರಾಚೆ ಪಡಕಾನೆ ಯೆಜಮಾನ ಮುನಿಯ- ನಂ...

ಅಲ್ಲಮ ಪ್ರಭು

ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ- ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು, ಶಿಷ್ಯ, ಪ್ರೀತಿಯ ಚಾತಿಗಾರ! ಎಲ್ಲಿರುವೆ ರಸ- ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು...

ತೌಳವ ಮಾತೆ

ರಾಗ ಭೈರವೀ-ತ್ರಿತಾಲ ('ಪತಿತೋದ್ಧಾರಿಣಿ ಗಂಗೇ' ಎಂಬ ಬಂಗಾಳೀ ಹಾಡಿನಂತೆ) ಜಯ ಜಯ ತೌಳವ ತಾಯ ||ಪಲ್ಲ|| ಮಣಿವೆ ತಂದೆತಾಯಂದಿರ ತಾಯೇ, ಭುವನದಿ ತ್ರಿದಿವಚ್ಛಾಯೇ ||ಅನು|| ಭಾರ್ಗವನಂದು ಬಿಸುಡೆ ಕೊಡಲಿಯ ನೀ ಕಡಲೊಡೆದೆಡೆಯಿಂ ಮೂಡಿ, ಭಾರತಮಾತೆ...

ಆದಮನ ಶಾಪ

ಬೇಸಿಗೆ ಕೊನೆಯ ಒಂದು ಸಂಜೆ ಹೊತ್ತು : ನಿನ್ನಾಪ್ತ ಗೆಳತಿ, ಆ ಚೆಲುವೆ ಕೋಮಲೆ, ನಾನು ನೀನು ಕೂತು ಮಾತಾಡಿದೆವು ಕವಿತೆಯನ್ನು ಕುರಿತು ನಾನೆಂದೆ : "ಕವಿತ ಸಾಲೊಂದನ್ನು ಸಾಧಿಸಲು ಗಂಟೆಗಟ್ಟಲೆ ನಾವು ಹೆಣಗಬೇಕು;...