Home / Pu Ti Narasimhachar

Browsing Tag: Pu Ti Narasimhachar

ಬೇಡಿದುದೆಲ್ಲವ ಕೊಡುವಾ ಜೋಳಿಗೆ ಬಯಸಿದ ತಾಣಕೆ ಒಯ್ಯುವ ಹಾವುಗೆ ದೊರೆತ ತೆರದಿ, ಮಗು, ರಾಜಕುಮಾರಗೆ ನಿನಗೂ ದೊರೆತೊಡೆ ಏಗೆಯ್ವೆ? “ಜೋಳಿಗೆ, ಜೋಳಿಗೆ, ಹಾರೆ ಕೊಡೆನುವೆ, ಒಂದೇ ನೆಗೆತಕೆ ಬಾನಿಗೆ ನೆಗೆವೆ, ಎತ್ತೆಡೆ ಹೋದರು ಬೆನ್ನೊಳೆ ಬರುವೀ...

(ಗೋ. ಕೃ. ಅವರಿಗೆ) ಎದುರು ಬಾನ ತೀರದಲ್ಲಿ ರಾಶಿ ರಾಶಿ ಹೊನ್ನ ಚೆಲ್ಲಿ ಸರಿಯುತಿಹಳು ಸಂಜೆ, ಕೆಳೆಯ, ಸ್ವರ‍್ಣಲುಬ್ಧವಾಗಿ, ಎಲೆಯ ಕೈಗಳಿಂದ ಬೊಗಸೆಯಾಯ್ದು ಹಳುವಿಹುದಿಕೊ ಹುಯಿಲಗಯ್ದು. ಇದನು ಕಂಡು ಕೊಂಕು ಚಂದ್ರ ನಗುತಿಹನದೊ ಮುಗಿಲಿನಿಂದ, ಕೊನೆ ಆ...

ತಾಳೆಯ ಹೂಹುಡಿ ಬಣ್ಣದ ಜೊನ್ನವು ಇರುಳೊಳು ಹರಡುತಿದೆ-ತಮ ತಿಳಿಯಿತು ಎನ್ನುತಿದೆ. ಅರಿಲಿನ ಕಿರುಕಿರು ದೋಣಿಗಳಾಗಸ- ದೆದೆಯೊಳು ತೇಲುತಿವೆ-ನಗು- ವಮರರ ತೋರುತಿವೆ. ಮುಗಿಲ ತೀರದೊಳು ರಾಜನೌಕೆಯಹ ಕರೆಯನು ಬಿಟ್ಟಿತಿಗೋ-ಮುದ- ಕೆಂದೆಯೆ ಸಾಗಿತಿಗೋ. ಕನಸ...

ಆವನೀ ಉನ್ಮತ್ತ-ಈ ಸರಿಯ ಹೊತ್ತಿನೊಳು ಕೊಳಲ ಬಾರಿಸಿ ಮಧುರ ರಾಗವನು ರಚಿಪನಿಂತೆ? ಕರಿಮುಗಿಲ ಬಲೆಯೊಳಗೆ ಪೆರೆ ಸಿಲುಕಿ ನೋಯುತಿದೆ ಗಾಳಿ ಬಾನಲೆಯುತಿದೆ ಪಾಳೆಯದ ಭೂತದಂತೆ. ಈಗಿತ್ತ ಆಗತ್ತ ಕಿವಿಯಾಚೆ ದೂರತ್ತ ಮುಗಿಲ ಮರೆ ಜೊನ್ನದಿಂ ಬೂದಾದ ರಜನಿಪಥದಿ...

ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆನು, ದೀನಗಿಂತ ದೇವ ಬಡವ- ನೆಂದು ಬಗೆವೆನು. ನಿಜವು, ವಿಷ್ಣು ವಿಶ್ವದರಸು, ವಿಶ್ವಧಾಮನು, ಒಂದೆ ಹೆಜ್ಜೆಯಿಟ್ಟು ಬುವಿಯ ನಾಕವಳೆದನು, ಎಷ್ಟು ಚಿಕ್ಕದೆನ್ನ ಹೃದಯ; ಏನು ಹೊಲಸದು! ಇಲ್ಲು ನೆಲೆಯ ಬೇಡುವವನ ದೈನ್ಯ...

೧ ಬೆಳುಬೆಳಗಾಯಿತು, ಎಳಬೆಳಕಾಡಿತು ದೇವನ ಹಳ್ಳಿಯ ನೆಲ ನಲಿದಿತ್ತು. ಆತ್ಮೋಲ್ಲಾಸದ ಮಧುರಾಲಾಪದ ತೊಟ್ಟಿಲ ಮಗುವೊಲು ಜಗವುಲಿದಿತ್ತು. ಆಗಸ ಮಾನಸಸರದೊಳು ಮಿಂದೊಲು ತಣ್ಣನೆ ತೆಳುಗಾಳಿಯು ಬೀಸಿತ್ತು; ಎದುರಿನ ಹೊಲದೊಳು ಹೊಂಗೆಯ ತುರುಗಲು ಬೆಳಕಿನ ತುಂತ...

ಬುವಿಗಾಯಿತು ಬೆಳುದಿಂಗಳ ಸೇತುವೆ ಇಗೊ ಬನ್ನಿ ; ನಂದನವನ ಕುಸುಮಂಗಳ, ಕೆಳದಿಯರೇ, ತನ್ನಿ. ದೈನಂದಿನದಿಳೆಯಾರ‍್ತಿಯ ಪೂಜೆಗೆ ಆಸತ್ತು ಬೇಸತ್ತಿಹ ಮಾದೇವನ ನಲಿಸುವ ಈ ಹೊತ್ತು. ಬಾನ್‌ಬಟ್ಟೆಯೊಳಡಿಗೆಜ್ಜೆಯ ನೇವುರ ಝಣರೆನಲಿ, ಹಾಸಿಗೆಯೊಳು ಹಸುಮಕ್ಕಳು ...

(ಅಳ್ವಾರರ ಬಗೆಯನ್ನು ಭಗವಂತನು ತುಂಬಿ ನಿಂತುದನ್ನು ಕುರಿತ ಹಾಡು) (ಸಿರಿಬಾಯಿ ನುಡಿಯ ಒಂದನೇ ನೂರಿನ ಹತ್ತನೇ ಹಾಡು) ೧ ಅರಿಶಿರಗಳನು ತರಿವ ಮಾಶಂಖ ಚಕ್ರಗಳ ಧರಿಸಿದವನು ಸಿರಿಯ ಚೆಲುನೀಳಡಿಯನೇಳು ಲೋಕಗಳಾದರಿಸುವಂತೆ ತರಳನಿಂಥವನಿಲ್ಲವೆನುವ ವಾಮನನಾಗ...

(ಭಗವನ್ಮೋಹಾವಿಷ್ಟಳಾದ ಮಗಳನ್ನು ನೋಡಿ ತಾಯಿಯ ಮಾತು) (ನಮ್ಮಾಳ್ವರ್ರವರ ಸಿರಿಬಾಯಿನುಡಿಯ ಎರಡನೆಯ ಶತಕದ ನಾಲ್ಕನೆಯ ದಶಕ) ೧ ಆಡಿಯಾಡಿ ಮನಕರಗಿ ಹಾಡನು ಹಾಡಿ ಹಾಡಿ ಕಂಬನಿಕರೆದೆಲ್ಲೆಡೆ ನೋಡಿ ನೋಡಿ ನರಸಿಂಗಾ ಎನ್ನುತ ಬಾಡಿ ಹೋದಳೀ ಕಳೆಮೊಗದವಳು ೨ ಏನ...

ಹೃದಯಾವಕಾಶದೊಳು ಸಚ್ಚಿದಾನಂದವನು ತ್ರಿದಶತ್ರಿವಿಷ್ಟಪರ ರೂಪದೊಳು ಮೂಡಿಸಿದ ಪರಮ ಋಷಿದರ್ಶನಗಳಸ್ತಮಿಸೆ ಜಡಧಿಯೊಳು ಕರುಣಿ ನೀನಾ ಜಡಧಿಗನುವಾದ ರೂಪಾಂತು ಮೇಲಕೆತ್ತಿದೆ ವೇದರೂಪದೆಮ್ಮಾತ್ಮವನು. ಬಾಳೊಳಮೃತಾನಂದ ಪಡೆಯುವಾತುರದಲ್ಲಿ ವಿಷಯಾಬ್ಧಿಮಗ್ನಮತಿ...

1234...16

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...