ಎಣಿಕೆ

ನಡುಹಗಲಿನಲಿ ಗಮ್ಮನೆಣಿಕೆ ಇಣಕುವದೊಂದು, "ಇಂದು ಬಂದದ್ದು ಹೋದದ್ದು ಏನು?" ಬರಿಗೈಲಿ ಮೊಳಹಾಕಿ ಬಯಲ ಸುತ್ತಿದೆನಷ್ಟೆ! "ಹಾರುತ್ತ ಹೊರಟಿರುವೆನೆತ್ತ ನಾನು?" ನಿದ್ದೆಯಿಂದೆಚ್ಚತ್ತು, ನಡು ಇರುಳಿನಲ್ಲೆದ್ದು, ಬಿಡಿಸುತಿದೆ ‘ಮುಂದೆ ಏನೆಂಬ ಗಂಟು? ಹಿಂದಿನಂತೆಯೆ ಮುಂದೆ, ಎಂದಿನಂತೆಯೇ ಇಂದೆ’...

ಈ ಬ್ರಹ್ಮನಿಗೆಂಥ ಹಸಿವು

ಅಹಂ ಬ್ರಹ್ಮ ಈ ಬ್ರಹ್ಮನಿಗೆಂಥ ಹಸಿವು ಇದು ಹಿಂಗಿಸಲಾರದ ಹಸಿವು ಅನ್ನದ ಹಸಿವೀ ಬ್ರಹ್ಮನಿಗೆ ಅನ್ನ ದೊರೆತೊಡೆ ನೀರಿನ ಹಸಿವು ನೀರು ದೊರೆತೊಡೆ ಕಾಮದ ಹಸಿವು ಕಾಮ ದೊರೆತೊಡೆ ಪ್ರೇಮದ ಹಸಿವು ಅಹಂ ಬ್ರಹ್ಮ...

ಪರದೆಯ ಹಿಂದೆ

ದರ್‍ಗಾದ ಎರಡು ಘನ ಗಂಭೀರ ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ ಬದುಕನು ಸಾರಿ ಸಾರಿ ಹೇಳುತ್ತಿದ್ದವು. ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ...

ಬಿಡುಗಡೆಗೆ

ಬಿಡುಗಡೆಯೆ! ದೇವರಿನಣಂ ಕಿರಿಯ ದೇವತೆಯೆ? ಭಾರತಕ್ಕೆ ಬಾರ, ನರನೆರಡನೆಯ ತಾಯೆ! ಋದ್ಧಿ ಬುದ್ಧಿಗಳಕ್ಕನೆಂದು ಸಂಭಾವಿತೆಯೆ, ನೀನೆಲ್ಲಿ ಶಾಂತಿಯಲ್ಲಿದೆ ನಿನ್ನ ಛಾಯೆ! ಯೂರೋಪದಾವ ಗುಣಕೊಲಿದಲ್ಲಿ ನೀ ನಿಂತು ಮಿಕ್ಕಿಳೆಯನವರ ತುಳಿಗಾಲ್ಗೆ ಬಾಗಿಸಿದೆ? ಆಶ್ಯದಾವವಗುಣಕೆ ಮುಳಿದಕಟ ನೀನಿಂತು...

ಪ್ರೀತಿಯ ಸೆಲೆ

ಸವಿನುಡಿಯು ತಾಯ್‌ನುಡಿಯು ಸಿಹಿಯಾದ ಜೇನನುಡಿಯು ಕಸ್ತೂರಿ ಶ್ರೀಗಂಧ ಚಂದನದಾನಂದ|| ಮಲೆನಾಡ ಐಸಿರಿಯ ಸೊಬಗಲ್ಲಿ ತೆರೆಯಾದ ಸಹ್ಯಾದ್ರಿ ಉತ್ತುಂಗ ಲೋಕದಾಸೆರೆಯಲ್ಲಿ ಕಾಜಾಣಗಳ ಶೃ ಶ್ರಾವಿತ ಗಾನವಿಹಾರದಲ್ಲಿ ಶ್ರುತಿಯಾಗು ಕಾಣ|| ಮನುಕುಲದ ನವನವೀನತೆಯ ಅಂಗಳದಲಿ ಕೆಳೆಯ ಸಿರಿಯ...

ಪ್ರೇಮಿಯ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಕ್ಕಿ ಮಿಡುಕುತಿದೆ ಗಾಳಿಗೆ, ಯೋಚನೆ, ಎಲ್ಲಿಗೊ ಅರಿಯೆ. ಬೀಜ ತುಡಿಯುತಿದೆ ಬಸಿರಿಗೆ. ಮನಸಿನ ಮೇಲೆ, ಗೂಡಿನ ಮೇಲೆ ರತಿಯಲಿ ಬಳಲುವ ತೊಡೆಗಳ ಮೇಲೆ ಜಿನುಗಿ ಇಂಗುತಿದೆ ಅದೇ ಪ್ರಶಾಂತತೆ...

ಗೋರಿ

ನನ್ ಪುಟ್ನಂಜೀನ್ ಯೆಂಡಾ ಬುಟ್ಟು ಕಣ್ತುಂಬಾನು ಕುಡದೆ. ಪದಗೊಳ್ ಆಡೋದ್ ಯೆಂಗೇಂತೇಳಿ ಔಳ್ನೇ ಪಟ್ಟಾಗಿಡದೆ. ೧ ಮೂರೊತ್ತೂನೆ ನಂಜೀಂತಂದಿ ಔಳಾಡೇ ನಂಗ್ ಮಗ್ಲು. ನಂಜಿ ವೋದ್ರೂ ನೆಪ್ ಓಗ್ನಿಲ್ಲ. ನೆಪ್ ಆಡಿಸ್ತೈತ್ ಈಗ್ಲು. ೨...

ಬಾಳೆದೆಯ ಶೂಲ

ಹೊನ್ನುರಿಯ ಮೈ ಬಣ್ಣ, ಕೆಂಡಕಾರುವ ಕಣ್ಣ ಎಂಟೆದೆಯ ಹುಲಿರಾಯ, ನಂಟ ನೀನು. "ಕವಡು ಕಂಟಕವಿಲ್ಲದೀ ಹುಲ್ಲೆ ಸವಿ ಮೇವು" ಎನುವೆ ಅದು ತಿಂದಂಥ ಗಂಟು ಏನು? ನೀ ಪಶುವು; ನಿನಗೇನು? ಮನದ ಚೊಚ್ಚಿಲ ಮಗನು...

ಈ ಗಿಣಿಯೆ

ಈ ಗಿಣಿಯೆ ಆ ಗಿಣಿಯೆ ಯೇ ಗಿಣಿಯೆ ಕಡು ಕೆಂಪಿನ ಕೊಕ್ಕಿದೆಯೆ ಹರಳಿನ ಕಣ್ಣಿದೆಯೆ ಆಚೀಚೆಗೆ ಹೊರಳಿದೆಯೆ ಕೊಂಕುವ ದುಂಡನೆ ಕತ್ತಿದೆಯೆ ಈ ಗಿಣಿಯೆ ಆ ಗಿಣಿಯೆ ಯೆ ಗಿಣಿಯೆ ಎಲ್ಲೆಲ್ಲೂ ಗಿಣಿಯೆ ಚಿನ್ನದ...

ಶಕ್ತಿ ಸಂಕೇತದ ಸೂಕಿ

ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು ಗೃಹಬಂಧನದ ಜೈಲಿನ ಗೋಡೆಗಳಿಗೆ ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು. ಅರವತ್ತೈದರ ತೆಳ್ಳನ ದೇಹದಲ್ಲಿ ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು. ನೀಳ ದೇಹದಲ್ಲಿ ಸಾಗರದಷ್ಟು ಸಿಟ್ಟು ಬಂದೂಕಿನ...