ಚಿಂತೆ

ನನ್ನ ನಿದ್ದೆಗಳನ್ನು ಕದ್ದವರು ನೀವು ಸಾಲಾಗಿ ನಿಲ್ಲಿಸಿ ನಿಮ್ಮನ್ನು ಶಿಕ್ಷೆ ಕೊಡಬೇಕೆನ್ನಿಸುತ್ತಿದೆ ಆದರೆ ನೀವು ಗಾಳಿಗಳು ಬೆಂಕಿಗಳು ಭೂಮಿ ಆಕಾಶಗಳು, ನೀವು ಮೈಗಳು ಮನಸ್ಸುಗಳು ಬುದ್ಧಿ ಗಳು ಹೃದಯಗಳು ಇಂಥ ಸಂಕೀರ್ಣತೆಗೆ ಶಿಕ್ಷೆ ಹೇಗೆ...

ಹೂ

ಇದೊಂದು ಬಗೆಯ ಹೂ ಮುಟ್ಟುವಂತಿಲ್ಲ ಮೂಸುವಂತಿಲ್ಲ ನೋಡಿ ಅನಂದಿಸು ಪಕಳೆ ಎಣಿಸಬೇಡ ದಳವ ದಣಿಸಬೇಡ ದಳ ದಳವಾಗಿ ಉದುರುವ ವರೆಗೆ ಕಾದರೆ ಅಂತ ರಾಳದಲ್ಲೇನಿದೆಯೋ ನೋಡಬಹುದು, ಅಲ್ಲಿಯವರೆಗೆ ಕಾಯಬೇಕು. *****

ಮಿಗಿಲು

ಇದು ಎಲ್ಲರಿಗೂ ಸಾಧ್ಯ ವಿಲ್ಲ ಬಿಡಿ, ಹೀಗೆ ಸುಮ್ಮನೆ ನೋಡಿ ನೋಡಿ ಹೋಗುವುದು ಆದರೂ ಮೋಡಿ ಹಾಕುವುದು ಏನೂ ಸಿಗುವುದಿಲ್ಲವೆಂದು ತಿಳಿದೂ ಇಂಥವರಿಗೆ ಅಂಜಿ ಬಾಳುವು ದಿದೆಯಲ್ಲಾ ಅದರಲ್ಲೊಂಥರಾ ರೋಮಾಂಚನ, ಒಂಥರಾ ಧಿಗಿಲು ಆದರೂ...

ಇವರು

ಕೃಷ್ಣನ ಕತೆಯನ್ನು ನಂಬದೇ ಇರುವವರಿಗೂ ನಂಬುವಂತೆ ಮಾಡುವ ಕೆಲವರಿ ರುತ್ತಾರೆ, ಇವರು ಪದ್ಮ ಪತ್ರ ಮಿವಾಂಭಸ, ತಾವರೆ ಎಲೆಯ ಮೇಲಿನ ನೀರು, ಅಂಟಿಯೂ ಅಂಟ ದಿರುವ ಇವರು ಹಿಡಿಯಲೂ ಬಲ್ಲರು ಬಿಡಲೂ ಬಲ್ಲರು, ಎಲ್ಲರೂ...

ಕವಿತೆ

ಬರೆದೂ ಬರೆದೂ ಸಾಕಾಯಿ ತಪ್ಪ ಈ ಪದ್ಯ ಇವುಗಳದು ಮುಗಿಯದ ತಂಟೆ ಒಂದಷ್ಟು ಹೊತ್ತು ಒಂದೊಂದು ರೂಪು, ಇವುಗಳ ಕೈಯೋ ಕಾಲೋ ಮುಖವೋ ಯಾವುದೂ ತಿಳಿಯುವುದು ಕಷ್ಟ ಆದರೂ ಇರಲಿ ಒಂದು ಅಂಗಿ ಪಾಪ...

ತಲುಪುವುದಿಲ್ಲ

ಮೊಬೈಲ್ ಉಲಿಯುತ್ತಿದೆ ಒಂದೇ ಸಮನೆ ರೀಚ್ ಆಗಲ್ಲ ರೀಚ್ ಆಗಲ್ಲ ಅಷ್ಟು ಹೇಳಿ ಸುಮ್ಮನಾಗಬಾರದೇ ಮತ್ತೆ ಟ್ರೈ ಮಾಡಿ ಎಂಬ ಒಗ್ಗರಣೆ ಬೇರೆ ಹೌದೆ ? ಮತ್ತೆ ಪ್ರಯತ್ನಿಸಬಹುದೆ ? ಇಷ್ಟು ಸಲ ಸೋತ...

ಮೆಟ್ಟಿಲುಗಳು

ಎಷ್ಟೊಂದು ಮೆಟ್ಟಿಲುಗಳು ಹತ್ತಲಾರದ ಕಾಲುಗಳಿಗೆ ಸಪಾಟಾಗಿರಬಾರದಿತ್ತೆ ಈ ನೆಲ? ಇದೇಕೆ ಹೀಗೆ ಅಂಕು ಡೊಂಕಾಗಿದೆ ಕಷ್ಟ ಕಷ್ಟ ಎಂದು ಎಚ್ಚರಿಸುತ್ತಿದೆ ಸೌಧಕ್ಕೆ ಪ್ರೇಮ ಸೌಧಕ್ಕೆ ಎಷ್ಟೊಂದು ಒಟ್ಟಿಲುಗಳು ಹತ್ತಲಾರದ ಕಾಲುಗಳಿಗೆ *****

ಬೇಡ

ಇದೇಕೋ ಈ ಜನ ಬೇಡ ಬೇಡ ಎಂದರು ಹೂಬಿಟ್ಟಿತು ಹಣ್ಣಾಯಿತು ಮರ ಮತ್ತೆ ಮತ್ತೆ ಚಿಗುರುವುದಿದ್ದೇ ಇದೆ ಪ್ರತಿ ವರುಷ ಇನ್ನೇಕೆ ಕಸಿ ಮಾಡಿಸುವ ಹಂಬಲ ಬಿಡಿ ಅದೆಲ್ಲಾ ಚಿಕ್ಕ ಚಿಕ್ಕ ಗಿಡಗಳಿಗೆ ಬಳಲಿ...

ಸೇತುವೆ

ಕವಿತೆ ಓದಿ ಎಂದರು ಅವರು ಹಾಡಿ ಹಾಡಿ ಎಂದರು ಇವರು ಓದುವುದೋ ಇದು ಹಾಡುವುದೋ ಒಟ್ಟನಲ್ಲಿ ಹೃದಯ ತಟ್ಟಿದರೆ ಸರಿ ಅದೊಂದು ಸೇತುವೆ ಸೇತುವೆಗಳಿರುವುದೇ ದಾಟುವುದಕ್ಕೆ ಅದನ್ನೇಕೆ ಕೆಡಹುವಿರಿ ಬಿಡಿ ಪ್ರವಾಹ ಬಂದರೆ ಅದೇ...