ಹನಿಗವನ ಚೈತ್ರ ಲತಾ ಗುತ್ತಿ June 4, 2017February 13, 2019 ರಣಗುಡುವ ಬಿಸಿಲಿಗೆ ಚೈತ್ರನ ಸವಾಲು ಎಲ್ಲೆಂದರಲ್ಲಿ ಚಪ್ಪರ ಹೊದೆಸುವ ಭರಾಟೆಯ ಕೆಲಸ ನೂಕು ನುಗ್ಗುಲಾಟ ಗಿಡಮರಬಳ್ಳಿಗಳಿಗೆ. ***** Read More
ಹನಿಗವನ ಆವಸ್ತೆ ಲತಾ ಗುತ್ತಿ May 28, 2017February 13, 2019 ಒಂದು ಮಿಂಚು ಮತ್ತೊಂದು ಗರ್ಜನೆ ಕೆ.ಇ.ಬಿ.ಗೆ ನಡುಕ ನಾಡಿಗೆಲ್ಲ ಕಗ್ಗತ್ತಲು ***** Read More
ಹನಿಗವನ ಮುಗ್ಧರ ಬಲಿ ಲತಾ ಗುತ್ತಿ May 21, 2017February 13, 2019 ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! ***** Read More
ಕವಿತೆ ಕ್ಷಣಿಕದವರು ಲತಾ ಗುತ್ತಿ May 14, 2017February 13, 2019 ಮಳೆ ನೀರು ಮಿಜಿ ಮಿಜಿ ಮಣ್ಣು ನೋಡಿ ಕೆರೆಗಳು ನಕ್ಕವು ನಾವು ಯಾವತ್ತೂ ಇದ್ದವರೆಂದು. ***** Read More
ಕವಿತೆ ಲಾಲ್ಬಾಗದ ಮಣ್ಣು ಲತಾ ಗುತ್ತಿ May 7, 2017February 13, 2019 ಮರುಜನ್ಮಪಡೆದ ಹೂವುಗಳು ಮಣ್ಣಾಗಿದೆಯೋ ಮಣ್ಣೇ ಮರುಜನ್ಮ ಪಡೆದು ಹೂವುಗಳಾಗಿವೆಯೋ ಲಾಲ್ಬಾಗ ಮಣ್ಣೆಲ್ಲ ಬಣ್ಣಬಣ್ಣಗಳ ಹೂವಂತೆ ಕೆಂಪು ಕಂಪು ತಂಪು. ***** Read More
ಹನಿಗವನ ಕ್ರಿಯೆ ಲತಾ ಗುತ್ತಿ April 30, 2017February 13, 2019 ಮಳೆಗೆ ಹುಲ್ಲು ಜೀವಮಾನವಿಡಿ ಎಷ್ಟೆಂದು ಕೃತಜ್ಞತೆ ಹೇಳೀತು ಹೆಂಡತಿ ಗಂಡನಿಗೆ ಹೇಳಿದಷ್ಟು!! ***** Read More
ಹನಿಗವನ ಚಕ್ರ ಲತಾ ಗುತ್ತಿ April 23, 2017February 13, 2019 ದೇಶದ ಹೊಲಸೆಲ್ಲ ಸಮುದ್ರದೊಡಲಿಗೆ ಒಡಲಕಿಚ್ಚು ಆಕಾಶಕ್ಕೇರಿ ಹನಿಹನಿಯಾಗಿ ಧರೆಗೆ. ***** Read More
ಹನಿಗವನ ಮಳೆ ಲತಾ ಗುತ್ತಿ April 16, 2017February 13, 2019 ಮೋಡಿನ ಗರ್ಭಕ್ಕೆ ಸಿಡಿಲಿನ ಚೂರಿ ಇರಿದಿರಬೇಕು ಅದಕ್ಕೆಂದೇ ದಬದಬನೆ ನಿಸರ್ಗ ನೆತ್ತರು ಬಿದ್ದು ಹಿಡಿತಕ್ಕೆ ಬರದೇ ಹರಿದೊಡುತ್ತಿದೆ. ***** Read More
ಕವಿತೆ ಬೆಳ್ಳಿ ಹೂವು ಲತಾ ಗುತ್ತಿ April 9, 2017February 13, 2019 ನೀಲಿ ಸೀರೆಯ ತುಂಬೆಲ್ಲ ಬಿಳಿ ಹೂವುಗಳ ರಾಶಿ ರಾಶಿ ಮಳೆ ಮೋಡ ಮಿಂಚಿನಾಚೆಗೆಲ್ಲ ನಗುತ ಚಂದ್ರನೊಡನೆ ಸರಸವಾಡುತ ಬಣ್ಣವಾಸನೆ ಸಾವು ನೋವುಗಳಿಲ್ಲದ ಬೆಳ್ಳಿಹೂವುಗಳು ನಾವೆಂದು ಮಿರುಗುವ ನಕ್ಷತ್ರಗಳು. ***** Read More
ಕವಿತೆ ಮಳೆ – ಹುಳ ಲತಾ ಗುತ್ತಿ April 2, 2017February 13, 2019 ೧ ರಸ್ತೆ ಲೈಟು, ಅದರ ಸುತ್ತ ಮುತ್ತಿದ ಹುಳಗಳನ್ನೆಲ್ಲಾ ನೋಡಿದಾಗ ಪಕ್ಕನೆ ನೆನಪಾಗುತ್ತದೆ ರಾಜಕಾರಣಿ ಮತ್ತು ಚೇಲಗಳು ಇಷ್ಟೇ ವ್ಯತ್ಯಾಸ ಅಲ್ಲಿ ಸಾಯುತ್ತವೆ ಇಲ್ಲಿ ಸಾಯಿಸುತ್ತಾರೆ. ೨ ಮಳೆಯ ಮರುದಿನ ಇರುವೆಗಳಿಗೆ ಜಾತ್ರೆಯೋ ಜಾತ್ರೆ... Read More