ದುಡಿತ

ಹಗಲು ಇರುಳೆನ್ನದೆ ಸಾಗುತಿದೆ ಬದುಕು ಎಷ್ಟು ದುಡಿದರೂ ದುಡಿಮೆ ಸಾಲದು ಅದಕೂ ಇದಕೂ ದುಡಿಯುವವ ಒಬ್ಬ ತಿನ್ನುವ ಕೈಗಳು ಹತ್ತು ಶ್ರಮಕ್ಕೆ ತಕ್ಕ ಫಲ ಪ್ರತಿಭೆಗೆ ತಕ್ಕ ಪುರಸ್ಕಾರ ಮರಳುಗಾಡಿನ ಮರೀಚಿಕೆ ಶೋಷಿತ ಸಮಾಜದ...

ಆತ್ಮವಿಶ್ವಾಸ

ಅಂತರಂಗದಾಳದಲಿ ಮರೆಯಾಗಿ ನಿಂತಿದೆ ಒಂದು ಬಂಗಾರದ ಎಳೆ ಅದು ಆತ್ಮವಿಶ್ವಾಸದ ನೆಲೆ. ಅನುಭವದುರಿಯಲಿ ಬೆಂದು ಉಕ್ಕಿಹರಿದ ಲಾವಾರಸ ಗಟ್ಟಿಯಾದಾಗ ಪುಟಕ್ಕಿಟ್ಟ ಬಂಗಾರ, ಅದೇ ಜೀವನ ಸಾರ. ಅಂತರಂಗದಾಳದ ಬಂಗಾರದ ಎಳೆಯೊಳಗೆ ಬೆಚ್ಚನೆ ಮಲಗಿದೆ ಆತ್ಮವಿಶ್ವಾಸದ...

ರಾಮರಾಜ್ಯ

ಕನಸು ಕಾಣುತ್ತಿದ್ದೇವೆ ಮುಂಬರುವ ದಿನಗಳಿಗಾಗಿ ಆಸೆ ಭರವಸೆಯ ಹೊರೆ ಹೊತ್ತು ತುಡಿಯುತಿದೆ ಜೀವ ಮಿಡಿಯುತಿದೆ ಜೀವ ಕಾತರಿಸುತಲಿವೆ ಕಂಗಳು ಬರುವ ನಾಳೆಗಳಿಗಾಗಿ ಎಂದು ಬರುವುದೋ ರಾಮರಾಜ್ಯ ಅಳಿಸಿ ರಾವಣರ ಸಾಮ್ರಾಜ್ಯ ಹಿಂದೆ ಇತ್ತಂತೆ ಸುಂದರ...

ಬಿಡುವು

ಜೀವನದಲ್ಲೇನಿದೆ ಎಲ್ಲಾ ಇದ್ದೂ ಒಂದು ಕ್ಷಣ ಮೈಮರೆತು ನಿಂತು ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ? ಹಸಿರು ಹೊದ್ದ ಮರದ ನೆರಳಲಿ ನಿಂತು ದನಕರು, ಕುರಿಮಂದೆ ಮೇಯುತ್ತಿರುವಷ್ಟು ದೂರದವರೆಗೆ ಕಣ್ಣು ಹಿಗ್ಗಿಸಿ ನೋಡಲು...

ನಕ್ಕುಬಿಡು

ನಕ್ಕು ಬಿಡು ಗೆಳತಿ ಅಂಜದಿರು ಅಳುಕದಿರು ನಿರಾಶೆಯಲಿ ಧೃತಿಗೆಡದಿರು ಕಂಗೆಡದಿರು, ಕಷ್ಟಗಳೆದುರು. ಜೀವನವಲ್ಲ ಹೂವಿನ ಹಾಸಿಗೆ ನೋವು ನಲಿವುಗಳ ಒಸಗೆ ತಾಳಿದವನು ಬಾಳಿಯಾನು ಮನನವಾಗಲಿ ಮುತ್ತಿನಂತಹ ಮಾತು. ತಾಳು ತಾಳು ಧೈರ್‍ಯ ತಾಳು ಧೈರ್‍ಯವೇ...

ದೃಷ್ಟಿ

ಸೀತೆಯ ವೈಭವೀಕರಿಸಿದರು ಅವಳ ಪತಿಭಕ್ತಿಗಾಗಿ ಎಲ್ಲೂ ವೈಭವೀಕರಿಸಲಿಲ್ಲ ಅವಳ ಧೀಃಶಕ್ತಿಗಾಗಿ ಪರಿತ್ಯಕ್ತ ಹೆಣ್ಣೊಬ್ಬಳು ಒಬ್ಬಂಟಿಗಳಾಗಿ ಮಕ್ಕಳ ಬೆಳೆಸಿದ ಅವಳ ಆತ್ಮಶಕ್ತಿಗಾಗಿ! ತರಲಿಲ್ಲವೇ ಗಾಂಧಾರಿ ಕುರುರಾಜನಲಿ ಮಾನಸಿಕ ಸಮಸ್ಥಿತಿ? ಉಕ್ಕಿಸಲಿಲ್ಲವೇ ದ್ರೌಪದಿ ಪಾಂಡುಪುತ್ರರಲ್ಲಿ ಶಕ್ತಿಯ ವಾರಿಧಿ?...

ಏಕಾಂಗಿ

ಎಲ್ಲಿದ್ದರೇನು ಹೇಗಿದ್ದರೂ ಏಕಾಂಗಿ ನಾನು ಮುಚ್ಚಿಡಲಾರೆನು, ಬಿಚ್ಚಿಡಲಾರೆನು ಭಾವನೆಗಳ ಮಹಾಪೂರ ಕುಳಿತಿರಲಿ ಮಲಗಿರಲಿ ಬಂದು ಮುತ್ತುವಿರಿ ಒಗಟಾಗಿ ನಿಂದು ಬರುವಿರೇಕೆ ಮನದ ಗೂಡಿನೊಳಗೆ ಕುಣಿಯುವಿರೇಕೆ ಪರದೆಯೊಳಗೆ ಕಾಡುವಿರೇಕೆ ಕನಸುಗಳ ಕತ್ತರಿಸುವಿರೇಕೆ. ಜಡವಾಗಿ ಶಿಲೆಯಾಗಬಾರದೆ ನಾನು...

ಸೃಷ್ಟಿಕರ್‍ತ

ಸದಾ ಉತ್ಸವ ಜಗದೊಳಗೆ- ಉಳುವ, ಬಿತ್ತುವ, ಟಿಸಿಲೊಡೆಯುವ ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ! ಹಸಿರು ತೋರಣ, ಋತುಗಳ ಮೆರವಣಿಗೆ, ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ, ಸೂರ್‍ಯನ ಬಿಸಿ, ಚಂದಿರನ ತಂಪು ಹೇಗೆ...

ವಿಸ್ಮಯ

ಯಾರೋ ಬರೆದ ಕವನ ಕಾಡಿತ್ತು ಎಡೆಬಿಡೆದೆನ್ನ ಮನ ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ ಬೆನ್ನು ಹತ್ತಿದ ನಕ್ಷತ್ರಿಕನಂತೆ ಕಣ್ಣಾಡಿಸಿದೆ ಅರ್ಥವಾಗಲಿಲ್ಲ ನವ್ಯವೋ ನವೋದಯವೋ ಏನೋ ತೋಚಿದ್ದು ಗೀಚಿದ್ದು ಭಟ್ಟಿ ಇಳಿಸಿದ್ದಾರೆ. ಓದಿದೆ ಒಂದಲ್ಲ ಹತ್ತಾರು ಸಲ...

ಹಕ್ಕಿ ಮತ್ತು ಗಿಡುಗ

ಹಕ್ಕಿಯೊಂದು ಹಾರುತ್ತಿತ್ತು. ಮೇಲೆ ಮೇಲೆ ಏರುತ್ತಿತ್ತು ಇಹವ ಮರೆತು ನಲಿಯುತ್ತಿತ್ತು ಸ್ವಚ್ಛಂದವಾಗಿ ತೇಲುತ್ತಿತ್ತು. ಗಿಡುಗನೊಂದು ನೋಡುತ್ತಿತ್ತು ಹಿಡಿಯಲೆಂದು ಹೊಂಚುತ್ತಿತ್ತು ಹಿಂದೆ ಹಿಂದೆ ಅಲೆಯುತ್ತಿತ್ತು ಮೇಲೆರಗಲು ಕಾಯುತ್ತಿತ್ತು. ಹಕ್ಕಿಗಿಲ್ಲ ಇಹದ ಗೊಡವೆ ಮರೆತ ಮೇಲೆ ತನ್ನ...