ಒಡಲಲ್ಲೊಂದು ಕುಡಿ
ಚಿಗುರಲಿಲ್ಲವೆಂದೇಕೆ
ಹಲುಬುವಿರಿ, ಕುಡಿ
ಗಾಗಿ ಹಂಬಲಿಸಿ ಕೊರಗಿ
ಸೊರಗಿ ಬಾಳನ್ನೇಕೆ
ವ್ಯರ್ಥಗೊಳಿಸಿ ಶೂನ್ಯ
ವನ್ನಾಗಿಸುವಿರಿ
ನಿಮ್ಮದೇನು ರಘುವಂಶ
ಸೂರ್ಯವಂಶವೇ
ಕುಲದೀಪಕನಿಲ್ಲದೆ
ವಂಶ ಅಳಿಯತೆನಲು
ಒಡಲು ಬರಿದಾಗಿಸಿದ
ಆ ದೈವಕೆ ಸಡ್ಡು ಹೊಡೆದು
ನಿಮ್ಮ ಹೃದಯವನ್ನೊಮ್ಮೆ
ವಿಶಾಲಗೊಳಿಸಿ
ಮಮತೆ
ಮರೀಚಿಕೆಯಾಗಿರುವ ಕಂದಮ್ಮಗಳತ್ತ
ದೃಷ್ಠಿಹಾಯಿಸಿ, ತರುವಿಲ್ಲದ ಲತೆಗಳಿಗೆ
ಆಶ್ರಯವಾಗಿ ಬರಿದಾದ ಮಡಿಲ ತುಂಬಿಸಿಕೊಳ್ಳಿ
ಒಡಲು ಬರಿದಾದರೇನು
ಮಡಿಲು ಬರಿದೇ
ಯಾರದೋ ತಪ್ಪಿಗೆ
ಬಲಿಯಾಗಿ ಪರಿತಪಿಸುವ
ಕಂದನಿಗೆ, ಶಾಪವಾಗಿರುವ
ಬಾಳಿಗೆ ವರನೀಡಿ
ಯಾರ ಮನೆಯ ಅಂಗಳದ
ಹೂವೋ ಎಂದು ಜಿಗುಪ್ಸೆ
ತೋರದೆ ಕರೆದೊಯ್ಯಿರಿ ನಿಮ್ಮರ ಮನೆಗೆ
*****
Related Post
ಸಣ್ಣ ಕತೆ
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ನಿರಾಳ
ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ಬಾಳ ಚಕ್ರ ನಿಲ್ಲಲಿಲ್ಲ
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…