ಅದೇ ಯುಗಾದಿ ಹಳೇ ಯುಗಾದಿ
ಹರ್ಷವಿಲ್ಲ! ವರ್ಷ ವರ್ಷದಿ ಯುಗಾದಿ!
ಅದೇ ಚಿಗುರು, ಹಳೇ ಒಗರು, ಹಳತಿನಲ್ಲಿ ಹೊಸತಿದೆ
ಮಾವು, ಬೇವು, ಎಲೆಯು ಉದುರಿ, ಮತ್ತೇ ಅಲ್ಲೇ ಚಿಗರಿದೆ
ಇಳೆಗೆ ಕಳೆಯು, ಹೊಳೆವ ತೋರಣ ಕಣ್ಣಿಗೆ
ಅದೇ ತುಂಬೆ, ಹೊಂಗೆ, ರಂಬೆ, ಕೊಂಬೆ ಚಿಗುರಿದೆ
ಚಿಗರು ಹೂವು, ಕೋಗಿಲೆ ರಾಗದಿ, ನೋವಿದೆ
ಯುಗಾದಿ ಸಾಲ, ಕಣ್ಣ ಮುಂದೆ, ಕುಣಿದಿದೆ
ಅದೇ ತಗಾದಿ, ಕುರಿಯ ಮಂದೆದಿ, ಸಾಗಿದೆ
ನಗುವಿನಲ್ಲಿ ಅಳುವಿದೆ, ಯುಗಾದಿ ಹೋಳಿಗೆ, ಸೊರಗಿದೆ!
ಅದೇ ಬಡತನ, ಹಗೆತನ, ಸಾವು, ನೋವು, ನಿರಂತರ
ಹಳತು ಮರವು, ಹೊಸತು ವರವು, ಯಾತಕೋ
ಪ್ರತಿ ಯುಗಾದಿಯು ನಗೆಯ ಹಬ್ಬದಿ ತಬ್ಬಲಿ
ಜುಟ್ಟಿಗೆ ಮಲ್ಲಿಗೆ ಸಾಗಿದೆ!
ಅದೇ ಚಡ್ಡಿಯು, ಹೊಸತು ಲುಂಗಿಯು
ಬೇವು ಬೆಲ್ಲದಿ, ಬೇಳೆ ಹೂರಣ… ಕಹಿಯಿದೆ!
ಅದೇ ಸೂರ್‍ಯ, ಚಂದ್ರ, ಬಿಸಿಲುಗಾಳಿ, ತಂಗಳೂ
ಕ್ರಾಂತಿಯಿಲ್ಲ, ಬೇಸರ! ಪ್ರತಿ ಯುಗಾದಿ- ಭ್ರಾಂತಿಯು!
*****