Navy man ತನ್ನ ಹೆಂಡತಿಗೆ ಬರೆದ ಪತ್ರ

ಎಲ್ಲಾ ಥೇಟ್ ನಿನ್ನ ಹಾಗೆಯೇ ಇವಳು
ಸೊಂಟ ಹೊಟ್ಟೆಯ ಸುತ್ತಳತೆ ಬಿಟ್ಟರೆ –
ಇರಲಿ ಬಿಡು ನನ್ನ ಮಕ್ಕಳಿಗೆ ಅಮ್ಮ ಅಲ್ಲವೆ ನೀನು.

ಮಾತು ಕಡಿಮೆ ಮೌನಿ
ಯಾವತ್ತೂ ಕಣ್ಣಂಚಿನ ನಗೆಯವಳು –
ಹೋಗಲಿ ಬಿಡು ನನ್ನ ಕಿರಿಕಿರಿಗೆ ಕೆಂಡವಾಗುವಿಯಲ್ಲವೇ,

ಮಿನಿ ಮಿಡಿ ಸಾಕು
ಕಾಸ್ಮೆಟಿಕ್ಸ್ ಇಲ್ಲದಿದ್ದರೂ ನಡೆಯುತ್ತದೆ ಹೂ ನಗು –
ಇರಲಿ ಬಿಡು ಪಾರ್ಟಿಗಳಿಗೆ ಹೋಗುವವಳಲ್ಲವೇ ನೀನು.

ಊಟ ಬೇಡವೆ ಬೇಡ
ನೆಮ್ಮದಿಗೆ ಬಿಟ್ಟರೆ ಸಾಕೆಂದು ನಗೆಯಾಡುತ್ತಾಳೆ
ಹೋಗಲಿ ಬಿಡು, ತಿಂದುಂಡು ತಿರುಗಾಡಬೇಕಲ್ಲವೇ ನೀನು.

ಕೋಪ ತಾಪ ಎಳ್ಳಷ್ಟೂ ಇಲ್ಲ
ಸುಂದರಾಂಗಿ ಡಮ್ಮಿಗೆ,
ಓದಿ ಅಳಬೇಡ ಬಿಡು, ಬರುವೆ ಡುಮ್ಮೀ ಬಳಿಗೆ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾತ್ರಿಕ
Next post ಗಂಡು ಹೆಣ್ಣು

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…