ಸಖಿ ಬೆಣ್ಣೆಮಾರುವ ನೀನಾರೆ

ಸಖಿ ಬೆಣ್ಣೆಮಾರುವ ನೀನಾರೆ
ನಾನು ನಿಂತೇನಿ ಒದರಿ ||ಪ||

ಬೆಣ್ಣೆಮಾರುವ ಆರ್ಭಾಟದೊಳಗೆ
ನನ್ನ ಬಿಟ್ಟು ನೀ ವ್ಯಾಪಾರ ಮಾಡತಿ
ನಿಮ್ಮ ವ್ಯವಹಾರವು ಎನಗೆ ಸಾಕೆ
ನಾನು ನಿಂತೇನಿ ಓದರಿ ||೧||

ಎಳಗಂದಿನ ಎಮ್ಮೆ ಬೆಣ್ಣೀನ
ಏನ ತುಟ್ಟಿ ಮಾರತಿ ನೀನ
ಅಡಕಿಬೆಟ್ಟದಷ್ಟು ಬೆಣ್ಣೀನ ಹಚ್ಚಿ
ಸೇರು ಪಾವಿನಷ್ಟು ಕಾಣೀ ಕಟ್ಟಿ
ಎಡಗೈ ಮ್ಯಾಲ್ಮಾಡಿ ತೂಗುವ ನಾರಿ
ನಾನು ನಿಂತೇನಿ ಒದರಿ ||೨||

ನರಿಯಂತಾಳು ಬಂದಿತು ಬಿರಿ
ನಿಮ್ಮ ರೊಕ್ಕವ ನಾವು ತುಗೋಬಾರದಿತ್ತರಿ
ಶಿಶುನಾಳ ಸದರಿಗೆ ಕೈಮುಗಿದೇವರಿ
ಬಿಟ್ಟುಬಿಡರಿ ಕೈಸೆರಿ ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೂಗುತಿದೆ ನಿಜ ಬೈಲಲಿ ಜೋಕಾಲಿ
Next post ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…