ಮಳಿ ಬಂತೇ ರಮಣಿ

ಮಳಿ ಬಂತೇ ರಮಣಿ ಮಾಯದ್ದೊಂದು ||ಪ||

ಮಳಿ ಬಂತೇ ರಮಣಿ
ಬೆಳಗು ಮೀರಿತೆ ನಳಿನಲೋಚನೆ
ಮಳಿ ಬಂದಿತು ಛಳಿ ಬಿದ್ದಿತು
ಕಳೆದೋರಿತು ಇಳಿಸ್ಥಳದೊಳು
ಜಲಜಮುಖಿ ಪ್ರಳಯ ಸೂಚನೆ ಇದು ||೧||

ನಾವು ಬರುವ ಹಾದಿ ತಪ್ಪಿ ಸುವಿಚಾರದೋರದೆ
ತೊಯ್ಯದ ಗೊನಿ ತಪ್ಪಲಮನಿ
ಮಾಯದ ಧ್ವನಿ ನ್ಯಾಯದ ಹನಿ
ಆಯಾಸವ ಪಡುತಿಹ ಪರಿ
ಸುಯೋಗವ ನೋಡದೆ ಬಲು ||೨||

ಶಿಶುನಾಳಧೀಶನ ದಯದಿ ಕರಸಿಕೊಂಡಿತೇ
ಭಸಿತ ಋಣವು ನಿಶಿಕಿರಣವು
ದೆಸೆಗೆಡದಾತ್ಮಾನಂದದಿ
ವಿಷಯ ಸಂಭೋಗ ಫಲದಿ
ಹುಸಿಗಾಣದೆ ತುಸು ತುಸು ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಹಣ ಹಿಡಿದುದು ಕಾಣದೆ?
Next post ಆಶಾಢ ನಿಬ್ಬಣ ಸೂಶ್ಯಾಡಿ ಬಂತು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…