ಯಕ್ಷಗಾನದ ಜಾಗತೀಕರಣವೆಂದರೆ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಪಸರಿಸುವುದು ಎಂದರ್ಥ. ಜಾಗತೀಕರಣದಿಂದ ಯಕ್ಷಗಾನಕ್ಕೆ ತೊಂದರೆಯಾಗಿರುವುದು ನಿಜ. ಇದಕ್ಕೆ ಪರಿಹಾರ ಯಕ್ಷಗಾನವನ್ನು ಜಾಗತೀಕರಣಗೊಳಿಸುವುದು.
ಎಲ್ಲಾ ಉತ್ಪನ್ನಗಳಿಗೆ [product] ಒಂದು ಬೆಲೆಯಿದೆ. ಉತ್ಪನ್ನಗಳ ಉದ್ದೇಶ ಮಾರಾಟ. [price] ಬೆಲೆ ಇರದ ಯಾವುದೇ ವಸ್ತುವಿಗೆ ಬೆಲೆ ಬರುವಂತೆ ಮಾಡಲು ಸಾಧ್ಯವಿದೆ. ವಸ್ತುವಿಗೆ ಉಪಯೋಗವನ್ನು ಉಂಟುಮಾಡಿದಾಗ ಅದೊಂದು ಉತ್ಪನ್ನವೆನಿಸುತ್ತದೆ. ಎಲ್ಲಾ ಉತ್ಪನನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ನಿರ್ಣಯವಾಗುತ್ತದೆ ಎಂದು ಜಾಗತೀಕರಣ ಪರಿಕಲ್ಪನೆಯು ಭಾವಿಸುತ್ತದೆ.
ಕೋಷ್ಟಕ 10 : ಜಾಗತೀಕರಣ ಪರಿಕಲ್ಪನೆ
ಜಾಗತೀಕರಣ ಪರಿಕಲ್ಪನೆಯ ಪ್ರಕಾರ
*ವಸ್ತು-ಸೇವೆಗಳಿಗೆ ಉಪಯುಕ್ತತೆಯನ್ನು ನಿರ್ಮಾಣ ಮಾಡಿದಾಗ ಅವುಗಳಿಗೆ ಬೇಡಿಕೆ [demand] ಸೃಷ್ಟಿಯಾಗುತ್ತದೆ.
*ವಸ್ತು-ಸೇವೆಗಳನ್ನು ಉತ್ಪನ್ನನಗಳನ್ನಾಗಿ [Products] ರೂಪಾಂತರಿಸಿದಾಗ ಉಪಯುಕ್ತತೆ [utility]ನಿರ್ಮಾಣವಾಗುತ್ತದೆ.
*ವಸ್ತು-ಸೇವೆಗಳನ್ನು ಉತ್ಪನ್ನಗಳನ್ನಾಗಿ ರೂಪಾಂತರಿಸುವುದು ಉತ್ಪಾದನೆ ಅಥವಾ ಪೂರೈಕೆ ಎನಿಸುತ್ತದೆ.
*ಉತ್ಪಾದಕ [producer] ಉತ್ಪನ್ನವನ್ನು ಮಾರುಕಟ್ಟೆಗೆ [Market] ಬಿಡುಗಡೆ ಮಾಡುತ್ತಾನೆ. *ಅನುಭೋಗಿ[consumer] ತನಗೆ ಉಪಯೋಗ [use] ಇರುವ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಕೊಳ್ಳುತ್ತಾನೆ.
*ಪೂರೈಕೆ ಮತ್ತು ಬೇಡಿಕೆ ಉತ್ಪನ್ನದ ಬೆಲೆಯನ್ನು ನಿರ್ಧರಿಸುತ್ತವೆ.
*ಗರಿಷ್ಠ ಲಾಭ ಗಳಿಸುವುದು ಉತ್ಪಾದಕನ ಉದ್ದೇಶ. ಗರಿಷ್ಠ ತೃಪ್ತಿಗಳಿಸುವುದು ಅನುಭೋಗಿಯ ಉದ್ದೇಶ.
*ನಿಯಂತ್ರಣ ರಹಿತ ವ್ಯವಸ್ಥೆಯಲ್ಲಿ ಇವೆರಡೂ ಉದ್ದೇಶಗಳನ್ನು ಸುಲಭವಾಗಿ ಸಾಧಿಸಬಹುದು.
ಯಕ್ಷಗಾನದ ಜಾಗತೀಕರಣಕರಣಕ್ಕೆ ಅದನ್ನೊಂದು ಪ್ರಾಡಕ್ಟಾಗಿ ಪರಿವರ್ತಿಸಬೇಕು. ಆದರೆ ಸಾಂಪ್ರದಾಯಿಕ ಕಲೆಯೊಂದನ್ನು ಪ್ರಾಡಕ್ಟಾಗಿ ಪರಿವರ್ತಿಸುವುದೆ?
ಯಾಕಾಗಬಾರದು? ಮಹರ್ಷಿ ಮಹೇಶಯೋಗಿಗಳ ಅತೀಂದ್ರಿಯ ಧ್ಯಾನ, ರವಿಶಂಕರರ ಸುದರ್ಶನ ಕ್ರಿಯಾಯೋಗ ಇತ್ಯಾದಿಗಳು ವಿಶ್ವಮಾರುಕಟ್ಟೆಯಲ್ಲಿ ಎಂದೋ ಪ್ರಾಡಕ್ಟು ಗಳಾಗಿ ಹೋಗಿವೆ. ಅದಕ್ಕೂ ಮೊದಲೇ ಭಾರತದ ಯೋಗ, ಧ್ಯಾನ, ಪ್ರಾಣಾಯಾಮ, ರೇಖಿಗಳು ವಿಶ್ವ ಮಾರುಕಟ್ಟೆಯಲ್ಲಿ ಸ್ಥಾನ ಕಂಡುಕೊಂಡಿವೆ. ಅಂದ ಮೇಲೆ ಯಕ್ಷಗಾನ ಜಾಗತೀಕರಣಗೊಳ್ಳಲು ಏನು ಅಡ್ಡಿ? ಅಡ್ಡಿಯೇನಿಲ್ಲ. ಆದರೆ ಯಕ್ಷಗಾನಕ್ಕೆ ಮಾರುಕಟ್ಟೆ ನಿರ್ಮಾಣ ಮಾಡುವುದು ಹೇಗೆ? ಅದುವೇ ದೊಡ್ಡ ಸಮಸ್ಯೆ.
ಮಾರುಕಟ್ಟೆ ಸಿದ್ಧಿಂತದ [Market theory] ಒಂದು ವಸ್ತು- ಸೇವೆಗೆ ಬೆಲೆ ಬರಬೇಕಾದರೆ ಅದಕ್ಕೆ ಬೇಡಿಕೆ ಇರಬೇಕು. ಮತ್ತು ಅದನ್ನು ಉತ್ಪನ್ನವಾಗಿ ಪರಿವರ್ತಿಸುವವರೂ ಇರಬೇಕು.
ಮಾರುಕಟ್ಟೆ ಸಿದ್ಧಾಂತದ ಪ್ರಕಾರ ಉತ್ಪನ್ನದ ಬೆಲೆಯು ಅದರ ಬೇಡಿಕೆ ಮತ್ತು ಪೂರೈಕೆ ಗಳಿಂದ ನಿರ್ಧಾರವಾಗುತ್ತದೆ. ಅನುಭೋಗಿಗಳಲ್ಲಿ ಕೊಳ್ಳುವ ಮನಸ್ಸು ಮತ್ತು ಸಾಮರ್ಥ್ಯಯ ಇದ್ದಾಗ ಬೇಡಿಕೆ ಸೃಷ್ಟಿಯಾಗುತ್ತದೆ. ಕೊಳ್ಳುವ ಮನಸ್ಸು ಬರಬೇಕಾದರೆ ಅನುಭೋಗಿಗೇ ಉತ್ಪನ್ನದ ಉಪಯುಕ್ತತೆ ತಿಳಿದಿರಬೇಕು. ಉಪಯುಕ್ತತೆಯನ್ನು ಸೃಷ್ಟಿಸಿ ಅನುಭೋಗಿಗೆ ತಿಳಿವಳಿಕೆಯನ್ನು ಪ್ರಚಾರ, ಜಾಹೀರಾತುಗಳ ಮೂಲಕ ಉತ್ಪಾದಕ ತಿಳಿಸಬೇಕು.
ಉತ್ಪನನಕ್ಕೆ ಉಪಯುಕ್ತತೆಯನ್ನು ಸೃಷ್ಟಿಸುವುದು ಹೇಗೆ? ಅದಕ್ಕೆ ರೂಪ ಪರಿಷ್ಕರಣ, ಸ್ಥಾನಪಲ್ಲಟ ಅಥವಾ ಕಾಲದ ಪರಿಗಣನೆ ಮುಖ್ಯವಾಗುತ್ತದೆ.
ರೂಪ ಪರಿಷ್ಕೃತ ಉಪಯುಕ್ತತೆ : ಬಾಹ್ಯ ಸ್ವರೂಪ ಬದಲಾವಣೆಯಿಂದ ವಸ್ತು ವನ್ನು ಉಪಯೋಗಕಾರಕವಾಗಿ ಪರಿವರ್ತಿಸುವುದು. ಉದಾ : ಕಲ್ಲನ್ನು ಮೂರ್ತಿ ಯನ್ನಾಗಿ ರೂಪಾಂತರಿಸುವುದು. ಮರದ ತುಂಡನ್ನು ಪೀಠವನಾನಗಿಸುವುದು.
ಸ್ಥಾನ ಪಲ್ಲಟ ಉಪಯುಕ್ತತೆ : ವಸ್ತುವಿನ ಸ್ಥಾನಾಂತರ ಮಾಡಿ ಅದಕ್ಕೆ ಉಪಯೋಗ ವನ್ನು ಕಲ್ಪಿಸುವುದು. ಉದಾ : ನದಿ ದಂಡೆಯ ಮಳಲನ್ನು ಕಟ್ಟಡ ನಿರ್ಮಾಣಕ್ಕೆ ಸಾಗಿಸುವುದು, ನದಿಗೆ ಕಿಂಡಿ ಅಣೆಕಟ್ಟು ಕಟ್ಟಿ ಕುಡಿಯುವ ನೀರಿನ ಪೂರೈಕೆ.
ಕಾಲಾನುಸಾರ ಉಪಯುಕ್ತತೆ : ವಸ್ತುವಿಗೆ ಯಾವ ಸಮಯದಲ್ಲಿ ಉಪಯೋಗವಿದೆ ಎಂಬುದನ್ನು ಪರಿಗಣಿಸಿ ಆಗ ಉತ್ಪಾದನೆ ಮಾಡಿ ಬೇಡಿಕೆ ಸೃಷ್ಟಿಸುವುದು. ಉದಾ: ಮಳೆಗಾಲದ ಆರಂಭದಲ್ಲಿ ಛತ್ರಿಗಳ ಉತ್ಪಾದನೆದ ಚಳಿಗಾಲದ ಆರಂಭದಲ್ಲಿ ಕಂಬಳಿ ಉತ್ಪಾದನೆ.
ಉಪಯುಕ್ತತೆಯ [utility] ನಿರ್ಮಾಣವು ಉತ್ಪನ್ನದ ಬೇಡಿಕೆಗೆ ಕಾರಣವಾಗುತ್ತದೆ. ಅದರೊಂದಿಗೆ ಉತ್ಪನ್ನದ ಗುಣಮಟ್ಟವೂ ಮುಖ್ಯವಾಗುತ್ತದೆ.
ಯಕ್ಷಗಾನವನ್ನು ಒಂದು ಪ್ರಾಡಕ್ಟಾಗಿ ಎರಡು ರೀತಿಗಳಲ್ಲಿ ಮಾಡಬಹುದು. ಮೊದಲನೆಯದು ಸಜೀವ ಪ್ರದರ್ಶನ [Live show] ಎರಡನೆಯದು ದಾಖಲೀಕೃತ ಪ್ರದರ್ಶನ [ Recorded show].
1. ಸಜೀವ ಪ್ರದರ್ಶನ : ಯಕ್ಷಗಾನದ ಅತ್ಯುತ್ತಮ ಕಲಾವಿದರನ್ನು ಆಯ್ದು ಒಂದು ಗಂಟೆ ಎರಡು ಗಂಟೆಗಳ ಕಥಾಪ್ರಸಂಗಗಳನ್ನು ರಂಗಕ್ಕೆ ತರುವುದು. ಅಂಥ ಪ್ರಸಂಗಗಳಲ್ಲಿ ನೃತ್ಯ ಮತ್ತು ಅಭಿನಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರಬೇಕು. ಕಥೆಯ ಓಟಕ್ಕೆ ಬೇಕಾದಷ್ಟೇ ಮಾತು ಮತ್ತು ಕಿರು ಸಂಭಾಷಣೆಗಳಿರಬೇಕು. ಅಂತಹ 23 ತಂಡಗಳು ಸಿದ್ಧಗೊಳ್ಳಬೇಕು. ಅಗತ್ಯ ಬಿದ್ದಾಗ ಕಾಲನಿಗದಿತ ಉಪಯುಕ್ತತೆ, ಅಗತ್ಯಬಿದ್ದಲ್ಲಿ ಸ್ಥಾನಪಲ್ಲಟ ಉಪಯುಕ್ತತೆ, ಪ್ರದರ್ಶನ ನೀಡಲು ತಂಡಗಳಿಗೆ ಸಾಧ್ಯವಾಗಬೇಕು. ಅಂತಹ ಪ್ರದರ್ಶನಗಳಿಗೆ ಮುನ್ನನ, ಹಿಂದೆ ಕಥಾನುಸಾರ ಇದ್ದಂತೆ, ಕನ್ನಡ-ಇಂಗ್ಲೀಷ್-ಹಿಂದಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ಕಥಾ ಸಾರಾಂಶ ನೀಡಬೇಕು. ಪ್ರದರ್ಶನದ ಬಳಿಕ ಕಲಾವಿದರೊಡನೆ ಪ್ರೇಕಕರಿಗೆ ಮುಕ್ತ ಸಂವಾದಕ್ಕೆ ಆಸ್ಪದವಿರಬೇಕು. ಕಲೆಕಲಾವಿದರ ಬೆಳವಣಿಗೆಗೆ ಇದು ತೀರಾ ಅಗತ್ಯ. ಇಂತಹ ಸೀಮಿತ ಅವಧಿಯ ಪ್ರದರ್ಶನವನ್ನು ಕ್ರಿಕೆಟ್ಟ್ ವಲ್ಡ್ರ್ ಕಪ್, ಐಪಿಎಲ್ ಫೈನಲ್, ಕಾಮನ್‌ವೆಲ್ತ್ ಕ್ರೀಡಾಕೂಟ ಸಂದರ್ಭದಲ್ಲಿ ಮಾಡಲು ಅವಕಾಶ ಕಲ್ಪಿಸಿಕೊಳ್ಳಬೇಕು. ಯಕ್ಷಗಾನ ಹವ್ಯಾಸಿ ಕಲಾವಿದರಾದ ಡಾ. ವೀರಪ್ಪ ಮೊಯ್ಲಯಿಯವರು ಮತ್ತು ಆಸ್ಕರ್ ಫೆರ್ನಾಂಡೀಸರು ಕೇಂದ್ರ ಮಂತ್ರಿ ಮಂಡಲದಲ್ಲಿದ್ದಾರೆ. ಯಕ್ಷಗಾನ ಚೆನ್ನಾಗಿ ಬಲ್ಲ ಡಿ.ವಿ. ಸದಾನಂದ ಗೌಡರು ಮತ್ತು ನಳಿನ್‌ಕುಮಾರ್ ಕಟೀಲು ರಾಜ್ಯಕ್ಕೂಕೇಂದ್ರಕ್ಕೂ ಕೊಂಡಿಯ ಸ್ಥಾನದಲ್ಲಿದ್ದಾರೆ. ಇವರನ್ನು ಬಳಸಿಕೊಂಡು ಯಕ್ಷಗಾನದ ಅಕಾಡೆಮಿ ಕಾಲ ನಿಗಧಿತ ಸಜೀವ ಯಕ ಪ್ರದರ್ಶನಕ್ಕೆ ಸಮರ್ಥ ತಂಡಗಳನ್ನು ನಿರ್ಮಿಸಿ ಅವಕ್ಕೆ ಅವಕಾಶ ಲಭ್ಯ ವಾಗುವಂತೆ ಮಾಡಬೇಕಿದೆ, ಯತ್ನಿಸಬೇಕಿದೆ.
2. ದಾಖಲೀಕೃತ ಪ್ರದರ್ಶನ : ಸಜೀವ ಪ್ರದರ್ಶನವನ್ನು ಸಿ.ಡಿ. ರೂಪಕ್ಕಿಳಿಸುವುದು ದಾಖಲೀಕೃತ ಪ್ರದರ್ಶನ. ರಾಜ್ಯ ಸರಕಾರ ಯಕ್ಷಗಾನಕ್ಕೊಂದು ವೆಬ್‌ಸೈಟ್ ಆರಂಭಿಸಿ ಅದರಲ್ಲಿ ಸಿ.ಡಿ.ಗಳ ಬಗ್ಗೆ ಮಾಹಿತಿ ನೀಡಬೇಕು. ಸಿ.ಡಿ.ಗಳನ್ನು ವಿಶ್ವದ ಎಲ್ಲಾ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಇಡಬೇಕು. ಅಂತಹ ಸಿ.ಡಿ.ಗಳಲ್ಲಿನ ಕನ್ನಡ ಸಂಭಾಷಣೆಗಳನ್ನು ಆಂಗ್ಲಭಾಷೆಗೆ ಡಬ್ ಮಾಡುವುದು ಸೂಕ್ತ. ಅಥವಾ ಇಂಗ್ಲೀಷಲ್ಲಿ ಕ್ಯಾಪ್‌ಷನ್ ನೀಡಿದರೂ ಆಗಬಹುದು. ಕಾಲಕ್ರಮೇಣ ಅಂತಹ ಸಿಡಿಗಳನ್ನು ವಿಶ್ವದ ಪ್ರಮುಖ ಭಾಷೆಗಳಾದ ಹಿಂದಿ, ಚೈನೀಸ್, ಫ್ರೆಂಚ್, ಸ್ಪಾನಿಷ್, ಜರ್ಮನ್, ರಶಿಯನ್ ಮತ್ತು ಜಪಾನೀಸ್ ಭಾಷೆಗಳಿಗೆ ಡಬ್ ಮಾಡಬೇಕು. ಇದು ಸ್ವಲ್ಪ ಸಮಯವನ್ನು ಬೇಡುವ ಕಾರ್ಯ. ಆದರೆ ಖಂಡಿತವಾಗಿಯೂ ಅಸಾಧ್ಯವಾದುದಲ್ಲ.
ಇದುವೇ ಯಕ್ಷಗಾನದ ಜಾಗತೀಕರಣ. ಇದನ್ನು ಸಾಧಿಸಲು ತುಂಬಾ ಬಂಡವಾಳದ ಅಗತ್ಯವಿದೆ. ಸಮರ್ಥ ಕಲಾವಿದರನ್ನು ರೂಪಿಸಲು ಒಂದು ಸಾಂಸ್ಥಿಕ ರಚನೆಯ ಅಗತ್ಯವೂ ಇದೆ.
1. ಸಾಂಸ್ಥಿಕ ರಚನೆ : ಪ್ರಥಮವಾಗಿ ಲಭ್ಯವಿರುವ ಅತ್ಯುತ್ತಮ ಯಕ್ಷಗಾನ ಕಲಾವಿದ ರನ್ನು ಶಿಕ್ಷಕರನಾನಗಿ ಮಾಡಿ ಕೇರಳದ ಕಲಾಮಂಡಲಂ ಮಾದರಿಯ ಸಂಸ್ಥೆಯೊಂದನ್ನು ಅಥವಾ ಯಕ್ಷಗಾನ ವಿಶ್ವವಿದ್ಯಾಲಯವನ್ನು ಕರ್ನಾಟಕದಲ್ಲಿ ಹುಟ್ಟು ಹಾಕಬೇಕು. ಅವರು ಸರಳ ಬಹುಮತದ ಆಧಾರದಲ್ಲಿ ಯಕ್ಷಗಾನ ಸಂವಿಧಾನ ವೊಂದನ್ನು ರೂಪಿಸಬೇಕು. ಆ ಬಳಿಕ ಒಂದು ಗಂಟೆ, ಎರಡು ಗಂಟೆ, ಮೂರು ಗಂಟೆ ಅವಧಿಯ ಯಕ್ಷಪ್ರಸಂಗಗಳನ್ನು ರೂಪಿಸಿ ಕಲಾವಿದರನ್ನು ಆಯ್ಕೆ ಮಾಡಿ, ಸಜೀವ ಪ್ರದರ್ಶನ ಮಾಡಿಸಲು ಸನ್ನದ್ಧ ಸ್ಥಿತಿ ಯಲ್ಲಿರಿಸಬೇಕು. ಅವುಗಳ ದಾಖಲೀಕೃತ ಪ್ರದರ್ಶನಗಳಿಗೂ ಭೂಮಿಕೆ ಸಿದ್ಧಪಡಿಸಬೇಕು. ಈ ಕಾರ್ಯದಲ್ಲಿ ಯಕ್ಷಗಾನ ಅಕಾಡೆಮಿ ಯಕ್ಷ ಕಲಾಮಂಡಲ ಅಥವಾ ಯಕ್ಷಗಾನ ವಿಶ್ವವಿದ್ಯಾಲಯದೊಡನೆ ಕೈ ಜೋಡಿಸಬೇಕು.
2. ಬಂಡವಾಳ ಕ್ರೋಢೀಕರಣ : ಇದಕ್ಕೆ ಬೇಕಾಗುವ ಬಂಡವಾಳವನ್ನು ಯಕ್ಷಗಾನ ಮೇಳಗಳನ್ನು ಹೊಂದಿರುವ ದೇವಾಲಯಗಳಿಂದ ಮತ್ತು ದಾನಿಗಳಿಂದ ಸಂಗ್ರಹಿಸಬೇಕು. ಭಾರತದ ಬೃಹತ್ ಉದ್ಯಮಿಗಳು ಕಲೆಸಾಹಿತ್ಯಸಾಮಾಜಿಕ ಸೇವೆಗಳಿಗೆಂದೇ ಫೌಂಡೇಶನ್ನು ಗಳನ್ನು ಸ್ಥಾಪಿಸಿವೆ. ಅಂತಹ ಫೌಂಡೇಶನ್ನುಗಳ ನೆರವು ಪಡಕೊಳ್ಳಬೇಕು. ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯಲ್ಲಿ ಸಾಕಷ್ಟು ಹಣವಿದೆ. ಯಕ್ಷಗಾನದ ಉಳಿವಿ ಗಾಗಿ ಒಂದಷ್ಟು ಹಣ ವಿನಿಯೋಗಿಸಿದರೆ ನಿಜಕ್ಕೂ ಅದು ಸಾರ್ಥಕ ಪುಣ್ಯಕಾರ್ಯವಾಗಿ ಮುಜರಾಯಿ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ. ಅದರ ಅಸ್ತಿತ್ವಕ್ಕೆ ಒಂದು ಸಾಮಾಜಿಕ ಬದ್ಧತೆಯ ಸ್ವರೂಪವೂ ದಕ್ಕುತ್ತದೆ.
ಹೀಗೆ ಯಕ್ಷಗಾನದ ಗುಣಮಟ್ಟ ಹೆಚ್ಚಿಸಿ ಅದನ್ನು ಸೇವಾ ಕೇತ್ರದಲ್ಲಿ [Service Sector] ವಿಲೀನಗೊಳಿಸಿ, ಅದರ ಉಪಯುಕ್ತತೆಯನ್ನು ಹೆಚ್ಚಿಸಿ ಜಗತ್ತಿನ ಎಲ್ಲಾ ದೇಶ ಗಳಿಂದ ಅದಕ್ಕೆ ಬೇಡಿಕೆ ಬರುವ ಹಾಗೆ ಮಾಡಲು ಸಾಧ್ಯವಿದೆ. ಇದಕ್ಕೆ ಶಿಕ್ಷಣ ಇಲಾಖೆ, ಆರ್ಥಿಕ ಇಲಾಖೆ, ಮುಜರಾಯಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಒಟ್ಟಾಗಿ ಮುತುವರ್ಜಿ ವಹಿಸಬೇಕಿದೆ. ಇದಕ್ಕೆ ಬೇಕಾದದ್ದು ಸಂಸ್ಕೃತಿಯ ಮೇಲಣ ಪ್ರೀತಿ, ಒಂದಿಷ್ಟು ದುಡಿಮೆ ಮತ್ತು ಪ್ರಾಮಾಣಿಕತೆ ಮಾತ್ರ.
ಅಭ್ಯಾಸಾತ್ಮಕ ಪ್ರಶ್ನೆಗಳು
1. ಯಕ್ಷಗಾನದ ಜಾಗತೀಕರಣವೆಂದರೇನು ?
2. ಉತ್ಪನ್ನವೊಂದಕ್ಕೆ ಬೇಡಿಕೆ ಬರುವುದು ಹೇಗೆ?
3. ಯಕ್ಷಗಾನವನ್ನು ಒಂದು ಪ್ರಾಡೆಕ್ಟಾಗಿ ಮಾಡುವುದು ಸರಿಯೆ?
4. ಯಕ್ಷಗಾನವನ್ನು ಪ್ರಾಡೆಕ್ಟಾಗಿ ಮಾಡುವುದು ಹೇಗೆ?
5. ಸಜೀವ ಪ್ರದರ್ಶನ ಎಂದರೇನು?
6. ದಾಖಲೀಕೃತ ಪ್ರದರ್ಶನ ಎಂದರೇನು?
7. ಯಕ್ಷಗಾನವನ್ನು ಜಾಗತೀಕರಣಕ್ಕೆ ಯಾವ ಸಾಂಸ್ಥಕ ರಚನೆಯ ಅಗತ್ಯವಿದೆ?
8. ಯಕ್ಷಗಾನದ ಜಾಗತೀಕರಣಕ್ಕೆ ಬಂಡವಾಳವನ್ನು ಕ್ರೋಢೀಕರಿಸುವುದು ಹೇಗೆ?
9. ಯಕ್ಷಗಾನವನ್ನು ಜಾಗತೀಕರಣ ಗೊಳಿಸಬೇಕಾದದ್ದು ಯಾರು?
ಕಠಿಣ ಪದಗಳು
ಉಪಯುಕ್ತತೆ = ಆಸೆಗಳನ್ನು ತೃಪ್ತಿಪಡಿಸುವ ಗುಣ
ಉತ್ಪನನ = ಆಸೆಗಳನ್ನು ತೃಪ್ತಿಪಡಿಸುವ ಸಿದ್ಧವಸ್ತು-ಸೇವೆ.
ಕಾಲಾನುಸಾರ ಉಪಯುಕ್ತತೆ = ನಿರ್ದಿಷ್ಟ ಕಾಲಗಳಲ್ಲಿ ಮಾತ್ರ ಇರುವ ಉಪಯೋಗ
ಜಾಗತೀಕರಣ = ಗುಣಮಟ್ಟವನ್ನು ವಿಶ್ವಮಟ್ಟಕ್ಕೆ ಏರಿಸುವ ಪ್ರಕ್ರಿಯೆ.
ದಾಖಲೀಕೃತ ಪ್ರದರ್ಶನ = ಸಿ.ಡಿ.ಗಳ ಮೂಲಕ ಪ್ರದರ್ಶನ.
ಮುಜರಾಯಿ ಇಲಾಖೆ = ಧಾರ್ಮಿಕದತ್ತಿ ಇಲಾಖೆ.
ರೂಪ ಪರಿಷ್ಕೃತ ಉಪಯುಕ್ತತೆ = ರೂಪ ಬದಲಾವಣೆಯಾದಾಗ ಸೃಷ್ಟಿಯಾಗುವ ಉಪಯೋಗ.
ಯಕ್ಷಕಲಾ ಮಂಡಲ = ಸಾಂಪ್ರದಾಯಿಕ ಯಕ್ಷಗಾನ ಶಿಕಣ ನೀಡಿಕೆಗಾಗಿ ಸೃಷ್ಟಿಯಾಗಬೇಕಾದ ಸಂಸ್ಥೆ.
ಸಜೀವ ಪ್ರದರ್ಶನ = ಕಲಾವಿದರುಗಳು ನೇರವಾಗಿ ನೀಡುವ ಪ್ರದರ್ಶನ.
ಸೇವಾಕೇತ್ರ = ಕೃಷಿ ಮತ್ತು ಕೈಗಾರಿಕಾ ಸಂಬಂಧೀ ಚಟುವಟಿಕೆ ಗಳನ್ನು ಹೊರತು ಪಡಿಸಿದ ಉತ್ಪಾದನಾ ಕೇತ್ರ.
ಸ್ಥಾನಪಲ್ಲಟ ಉಪಯುಕ್ತತೆ = ಸಾಗಾಟದಿಂದ ಸೃಷ್ಟಿಯಾಗುವ ಉಪಯೋಗ.