ಏರ್ ಪ್ರಾನ್ಸ್ ವಿಮಾನ ಕಾರ್ಗತ್ತಲೆಯನ್ನು ಸೀಳಿಕೊಂಡು, ಮುಂಬಯಿಯ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಪಶ್ಚಿಮಾಭಿಮುಖವಾಗಿ ಹಾರಿದಾಗ ಮಧ್ಯರಾತ್ರಿ ಹನ್ನೆರಡು ಗಂಟೆ ಇಪ್ಪತ್ತೈದು ನಿಮಿಷ. ಆಗ ಫ್ರಾನ್ಸಿನಲ್ಲಿ ರಾತ್ರೆ ಏಳೂ ಐವತ್ತೈದು. ನಮ್ಮ ವಿಮಾನ ಪ್ರಾನ್ಸ್ ಕಾಲಮಾನ ಪ್ರಕಾರ, ಬೆಳಗ್ಗಿನ ಐದೂವರೆಗೆ ಪ್ಯಾರಿಸ್ಸಿನ ಡಿಗಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರಬೇಕು. ಅಂದರೆ ಕಗ್ಗತ್ತಲ ಆಕಾಶದಲ್ಲಿ ಹತ್ತು ಗಂಟೆಗಳ ಸುದೀರ್ಘ ಹಾರಾಟ. ವಿಮಾನ ಪ್ರಯಾಣವೂ ಕೂಡಾ ಬೋರಾಗಬಹುದು ಎಂಬ ವಾಸ್ತವ ನನಗೆ ಅರಿವಾದದ್ದೇ ಆಗ.
ಆಕಾಶದಲ್ಲಿ ಹತ್ತು ಗಂಟೆಗಳು
ವಿಮಾನದ ಸೀಟುಗಳಲ್ಲಿ ಒರಗಿ ನಿದ್ದೆಮಾಡುವುದು ಅಷ್ಟು, ಸುಲಭವಲ್ಲ. ಸೆಮಿಲಕ್ಸುರಿ ಬಸ್ಸಿನಂತಹ ನೆಟ್ಟನೆಯ ಸೀಟುಗಳು. ಇಕಾನಮಿ ಕ್ಲಾಸ್ ಆದುದರಿಂದ ಕೈ ಕಾಲುಗಳಿಗೆ ತುಂಬಾ ಸ್ವಾತಂತ್ರ್ಯ ಕೊಡಲು ಸಾಧ್ಯವಿರಲಿಲ್ಲ. ನಿದ್ದೆ ಬಂದರೆ ಪಕ್ಕದವರ ಮೇಲೆ ಬೀಳುವ ಸಂಭವ. ನಮ್ಮ ಪಕ್ಕದವರು ಬಿಳಿಯರಾಗಿದ್ವರಂತೂ ನಾವು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಭಾರತೀಯರೆಂದರೆ ಶಿಸ್ತಿಲ್ಲದ ಕುರಿಮಂದೆಗಳು ಎಂದೇ ಭಾವಿಸಿರುವ ಬಿಳಿಯರ ಮೇಲೆಲ್ಲಾದರೂ ತೂಕಡಿಸಿ ವಾಲಿದರೆ, ನಮ್ಮನ್ನು ಬಾರ್ಬೇರಿಯನ್ಸ್ (ಬರ್ಬರರು) ಎಂದು ಕರೆದೇ ಬಿಟ್ಟಾರು.
ವಿಮಾನದೊಳಗೆ ಗಗನಸಖಿಯರು ರಾತ್ರಿಯೂಟ ಕೊಡಲು ತೊಡಗಿದ್ವರು. ಹೊರಗೆ ಏನೂ ಕಾಣದ ಕಾರ್ಗತ್ತಲೆ. ಒಳಗೆ ಈ ಗಗನ ಸಖಿಯರು ತೀರಾ ಯಾಂತ್ರಿಕವಾಗಿ ಊಟ ನೀಡುತ್ತಿದ್ವರು. ಅವರನ್ನು ನೋಡಿ ನನ್ನ ಪಕ್ಕದಲ್ಲಿ ಕೂತಿದ್ವ ಡಾ| ದಿಲೀಪ್ ಮುಖರ್ಜಿ” ಸಿಡುಕಿದ. “ತಥ್! ಈ ಹಾಳು ವಿಮಾನದಲ್ಲಿ ಬರಲೇ ಬಾರದಿತ್ತು. ಏರಿಂಡಿಯಾ ಮತ್ತು ಏರ್ಪ್ರಾನ್ಸ್ ಈ ವಿಷಯದಲ್ಲಿ ಒಂದೇ. ಮೊದಲೇ ಮಧ್ಯವಯಸ್ಸು ಜಾರಿದ ಹೆಣ್ಣುಗಳು. ಕೊನೆಯ ಪಕ್ಷ ಊಟ ಕೊಡುವಾಗಾದರೂ ಒಂದು ನಗು ಬೇಡವೇ
ಮದ್ರಾಸಿನಿಂದ ಮಂಗಳೂರಿಗೆ ನಾನು ಹಾರಿದ್ದ ಇಂಡಿಯನ್ ಏರ್ಲೈನ್ಸಿನ ಗಗನ ಸಖಿಯರ ವೇಷಭೂಷಣ, ಮುಖ ಆಕರ್ಷಣವಾಗಿರಲಿಲ್ಲ. ಸೇವೆಯನ್ನು ಕರ್ತವ್ಯ ಎಂದಷ್ಟೇ ನಿಭಾಯಿಸಿಬಿಡುವ ವರ್ಗಕ್ಕೆ ಸೇರಿದವರು ಅವರು. ಆದರೆ ಅವರಲ್ಲಿ ಹರೆಯಕ್ಷ್ಕೆ ಸಹಜವಾದ ಉತ್ಸಾಹ ಇತ್ತು. ಮಂಗಳೂರಿನಿಂದ ಮುಂಬಯಿಗೆ ಬಂದ ಜೆಟ್ ಏರ್ವೇಸ್ನಲ್ಲಿ ಸೊನಾಲಿ, ಮಾರ್ಟಿನಾ ಮುಂತಾದ ಬೆಡಗಿಯರು, ಉತ್ಸಾಹಕ್ಕೆ ಜೀವ ಮೂಡಿ ಸೌಂದರ್ಯ ತುಂಬಿ ಓಡಾಡುತ್ತಿದೆ- ಯೇನೋ, ಎಂಬ ಭಾವವನ್ನು ಮೂಡಿಸಿ ವಿಮಾನ ಪ್ರಯಾಣ ಇಷ್ಟು ಬೇಗ ಮುಗಿದೇಬಿಟ್ಟಿತಲ್ಲಾ ಎಂಬ ವಿಷಾದ
ಮೂಡಿಸಿದ್ವರು. ಏರ್ಪ್ರಾನ್ಸಿನ ಗಗನಸಖಿಯರಲ್ಲಿ ಉತ್ಸಾಹ, ಯೌವ್ವನ, ವಿನಯ ಯಾವುದೂ ಇರಲಿಲ್ಲ.ನಮಗೆ ಬೇಕಾದುದನ್ನು ಬೇಕೆಂದು ಕೇಳಿದರೆ ವಿಚಿತ್ರವಾಗಿ ನಮ್ಮನ್ನು ನೋಡಿ ಮುಖ ಗಂಟಿಕ್ಕುವ ಈ ಸಿಡುಕಿಯರು, ನಿದ್ವೆಗಣ್ಣಿನ ಪ್ರಯಾಣವನ್ನು ಬಹುದೊಡ್ಡ ಶಿಕ್ಷೆಯನ್ನಾಗಿ ಪರಿವರ್ತಿಸಿಬಿಟ್ಟರು.ಬೋರ್ಡಂ ಸಹಿಸಲು ಅಸಾಧ್ಯವಾಗಿ ಪಕ್ಕದಲ್ಲಿದ್ದ ಡಾ| ಮುಖರ್ಜೀಯನ್ನು ಮಾತಿಗೆಳೆದೆ.
ಇಲ್ಲಿ ಟಿ.ವಿ. ಮಾನೀಟರಲ್ಲಿ ಅಹಮದಾಬಾದ್, ಕರಾಚಿ, ತೆಹರಾನ್ ಎಂದೆಲ್ಲಾ ನಮ್ಮ” ಗಮನದ ಹಾದಿಯ ಚಿತ್ರ ಬರುತ್ತಿದೆ. ಹಗಲಾಗಿರುತ್ತಿದ್ದರೆ ಎಂತಹ ಸೌಂದರ್ಯ ಸವಿಯಬಹುದಿತ್ತು ಅಲ್ಲವಾ?” ಅದಕ್ಕವನು “ಅಯ್ಯೋ, ಏನು ಮಾತೂಂತ ಹೇಳುತ್ತಿದ್ದಿ ನೀನು? ನನಗೆ ಈ ಹಾದಿಯೆಂದರೆ ಮಹಾಬೋರು. ಅಂದ ಹಾಗೆ ಎಲ್ಲಿಗೆ ಹೊರಟವ ನೀನು? ನಿನ್ನ ಜತೆ ಯಾರೆಲ್ಲಾ ಇದ್ದಾರೆ?” ಎಂದು ಪ್ರಶ್ನಿಸಿದ.
ನಾನವನಿಗೆ ಹೆಬ್ಬಾರ್, ಎಲ್ಯಾನ್, ಗುರು ಮತ್ತು ಅನಿತಾರನ್ನು ತೋರಿಸಿ “ನಾವು ಐವರು ಸದೃಕ್ಕೆ ಒಂದು ವಾರ ಪ್ಯಾರಿಸ್ಸಿಗೆ ಫ್ರೆಂಚ್ ಕಲಿಕೆಗಾಗಿ ಹೋಗುತ್ತಿದ್ದೇವೆ. ಆ ಬಳಿಕ ತುಲೋಸ್ ಪ್ರಾಂತ್ಯದಲ್ಲಿ ರೋಟರಿ ಸಮೂಹ ಅಧಯನ ವಿನಿಮಯ ಕಾರ್ಯಕ್ಷ್ರಮ ಪ್ರಕಾರ ಒಂದು ತಿಂಗಳು ಸಂಚರಿಸಿ ಫ್ರೆಂಚ್ ಸಂಸ್ಕೃತಿ ದರ್ಶನ ನೂಡಲಿಕ್ಕಿದೆ” ಎಂದೆ. ಅದಕ್ಕವನು “ನಿಮ್ಮದು ಒಳ್ಳೆಯ ಪ್ರೊಂಗ್ರಾಮು ಮಾರಾಯ. ನೀನು ಅದೃಷ್ಟವಂತ. ಈಗ ಪ್ಯಾರಿಸ್ಸಿನಲ್ಲಿ ಹಿಮ ಬೀಳುತ್ತಿಲ್ಲ. ನಾನು ಸ್ಟಾಕ್‍ಹೋಮಿಗೆ ಹೋಗಬೇಕು. ಅಲ್ಲಿ ಐಸು ಬೀಳುವುದು ಇನ್ನೂ ನಿಂತಿಲ್ಲ ಗೊತ್ತಾ? ಮೈನಸ್ ನಾಲ್ಕು ಡಿಗ್ರಿಯ ಕೊರೆಯುವ ಚಳಿಯಲ್ಲಿ ಏಗಬೇಕು ನಾನು” ಎಂದು ಗೊಣಗಿದ.
ಸ್ವೀಡನ್ನಿನ ರಾಜಧಾನಿ ಸ್ಟಾಕ್‍ಹೋಮಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ವೈದ್ಯನಾಗಿರುವ ಮುಖರ್ಜಿಗೆ ಐವತ್ತೈದು ವರ್ಷ. ಅವನೆಂದೋ ಸ್ವೀಡಿಷ್ ಪ್ರಜೆಯಾಗಿ ಹೋಗಿದ್ದಾನೆ. ಯಾರನ್ನೋ ಮದುವೆಯಾಗಿದ್ವವ ಅವಳೊಡನೆ ಏಗಲಾರದೆ ಹತ್ತು ವರ್ಷಗಳ ಹಿಂದೆ ಘಟಸ್ಫೋಟ ಮಾಡಿಕೊಂಡಿದ್ವ. ಮುಂಬಯಿಯಲ್ಲಿ ಅವನ ತಂಗಿ ಮತ್ತು ತಂಗಿಯ ಗಂಡ ಬಿಟ್ಟರೆ, ತನ್ನವರೆಂದು ಹೇಳಿಕೊಳ್ಳಲು ಅವನಿಗೆ ಬೇರಾರೂ ಇರಲಿಲ್ಲ. ತಂಗಿಯ ಮೇಲಣ ವಾತ್ಸಲ್ಕದಿಂದ ವರ್ಷಕ್ಕೊಮ್ಮೆ ಸ್ವೀಡನ್ನಿನಿಂದ ಮುಂಬಯಿಗೆ ಹಾರಿ ಎರಡು ವಾರ ಇಲ್ಲಿದ್ದು, ಯಾಂತ್ರಿಕ ಜೀವನದ ಏಕತಾನತೆಯನ್ನು ನೀಗಿಸಿ ಮತ್ತೆ ಹಿಂದಕ್ಕೆ ಹಾರುತ್ತಿದ್ವ.
“ಭಾರತದಲ್ಲೇ ಯಾಕೆ ನಿಂತುಬಿಡಬಾರದು ನೀನು?”
“ಭಾರತದಲ್ಲಿ? ” ಅವನು ನನ್ನನ್ನು ವಿಚಿತ್ರವಾಗಿ ನೋಡಿದ. “ನಿನ್ನ ಭಾರತದಲ್ಲಿ ಬದುಕೋದಕ್ಕೆ ಸಾಧ್ಯವೇ ಇಲ್ಲ. ನಿನ್ನ ದೇಶದ ರೋಡು, ಚರಂಡಿ, ರೈಲು, ದೀಪ, ನದಿ, ನೀರು, ಗಾಳಿ ಹೇಗಿವೆ ಹೇಳು? ಹೋಗಲಿ, ಯಾವ ಕ್ಷಣದಲ್ಲಿ, ಯಾರು ಯಾವ ಕ್ಷುಲ್ಲಕ ಕಾರಣಕ್ಕೆ ನಿನ್ನನ್ನು ಕೊಂದು ಹಾಕುತ್ತಾರೋ ಹೇಳಲು ಸಾಧೃ ಉಂಟಾ? ಸೌಂದರರ್ಯ ಪ್ರಜ್ಞೆ ಶಿಸ್ತು, ನಿಷ್ಟೆ, ಪ್ರೀತಿ, ಬದುಕಿಗೊಂದು ಅರ್ಥ ಏನಿದೆ ಹೇಳು ನಿನ್ನ ದೇಶದಲ್ಲಿ?”
ಭಾರತದಲ್ಲೇ ಹುಟ್ಟಿ ಬೆಳೆದ ಈತನಿಗೆ ಈಗ ಭಾರತ ತನ್ನ ದೇಶವೇ ಅಲ್ಲ. ನನಗೆ ತೀರಾ ಕಸಿವಿಸಿಯಾಯಿತು. “ಏನು ದಿಲೀಪ್ ನೀನು ಹೇಳುತ್ತಿರುವುದು? ಮೂಲತಃ ಭಾರತೀಯನಾದ ನೀನೂ ಹೀಗನ್ನೋದಾ?”
ಆವನು ರೇಗಿದ. ” ಹೌದಯ್ಯಾ, ನಾನು ಹೇಳಿದ್ದರಲ್ಲಿ ಒಂಮ ತಪ್ಪು ಇದ್ದರೆ ಹೇಳು. ನಮ್ಮ ಒಲೆಯ ಕೆಂಡ ಅಂತ ಮಡಿಲಲ್ಲಿ ಕಟ್ಟಿಕೊಳ್ಳಲು ಆಗುತ್ತದಾ? ನನ್ನದೂ ಅಂತ ಹೆಮ್ಮೆಪಡಲಿಕ್ಕೆ ಏನು ಉಳಿಸಿದ್ದಾರೆ ಹೇಳು ಭಾರತದಲ್ಲಿ? ನಾನೀಗ ಆರೇಳು ಕೋಟಿ ರೂಪಾಯಿಗಳ ಒಡೆಯ. ಅದನ್ನು ಭಾರತಕ್ಕೆ ತಂದರೆ ಅರ್ಧಾಂಶಕ್ಕಿಂತ ಹೆಚ್ಚು ತೆರಿಗೆಗೇ ಹೋಗುತ್ತದೆ. ನಿನ್ನ ದೇಶದಲ್ಲಿ ತೆರಿಗೆ ತೆರೋದೂ ಕೂಡಾ ಒಂದು ಆಪಾತ್ರದಾನ! ಯಾರ್ಯಾರೋ ಯಾವ್ಯಾವುದೋ ಪ್ರೋಗಾಂ ಹೆಸರಲ್ಲಿ ತೆರಿಗೆ ಹಣ ತಿಂದು ತೇಗುತ್ತಾರೆ. ಎಂಥಾ ಹಗರಣವಾದರೂ ಪಾಪಿಗಳಿಗೆ ಶಿಕ್ಷೆಯಾಗುವುದಿಲ್ಲ. ಆವರು ಪ್ರಭಾವಶಾಲೀ ನಾಯಕ್ಷರಾಗಿ ಬೆಳೆಯುತ್ತಾರೆ. ನಿನ್ನ ದೇಶಕ್ಕೆ ಭವಿಷ್ಯವೆಂಬುದೇ ಇಲ್ಲ.ಅಂತಹ ದೇಶಕ್ಕೆ ಬಂದು ಖಾಯಂ ನಿಲ್ಲಲು ನನಗೆ ಮನಸ್ಸಿಲ್ಲ.”
“ಈಗೇನೋ ಸರಿ ಮಾರಾಯ. ನಿನ್ನ ತೀರಾ ವೃದ್ಧಾಪ್ಯದಲ್ಲಿ ಒಂಟಿ ಭಾಳು ಹೇಗಿರಬಹುದೆಂದು ಯೋಚಿಸಿದ್ದೀಯಾ?”
” ಬೆಟರ್ ದ್ಯಾನ್ ಇನ್ ಇಂಡಿಯಾ ಪ್ರಾನ್ಸ್ ಸುತ್ತಿದ ಬಳಿಕ ಸ್ವೀಡನ್ನಿಗೆ ಬಂದು ನೋಡು. ಇಡೀ ಯುರೋಪಿನಲ್ಲೇ ನಮ್ಮದು ಬೆಸ್ಟ್ ಸೋಶಿಯಲ್ ಸೆಕ್ಯುರಿಟಿ ಸಿಸ್ಟಂ. ಎಂತೆಂತಹಾ ಹಾಸ್ಪಿಟಲ್ಸ್ ಮತ್ತು ಎಡ್ವಾನ್ಸ್ಡ್ ಟ್ರೀಟ್‌ಮೆಂಟ್. ಹಣ ಆಸ್ತಿ ಇರುವ ವೃದ್ಧ ಯಾವಾಗ ಸಾಯುತ್ತಾನೋ ಎಂದು ಕಾದು ಕೂರುವ ರಣಹದ್ದುಗಳದ್ದೇ ಕಾರುಬಾರು ನಿನ್ನ ದೇಶದಲ್ಲಿ. ಆಸ್ತಿಗಾಗಿ ಕೊಂದಾರು ಕೂಡಾ. ಸ್ವೀಡನ್ನಿನಲ್ಲಿ ಹಾಗಾಗಲು ಸಾಧ್ಯವೇ ಇಲ್ಲ.”
ನಾನವನನ್ನು ಇನ್ನಷ್ಟು ಮಾತಿಗೆಳೆದೆ. “ಅಲ್ಲ ಮುಖಜಿ೯… ನೀನು ಒಬ್ಬಂಟಿ. ಎಷ್ಟೋ ಕೋಟಿ ಇದೆ ಅಂತಿ. ಆ ಹಣದಿಂದ ನಿನಗೇನು ಉಪಯೋಗ? ನಿನಗೆ ಯಾವ ತೊಂದರೆಯಾದರೂ ನಿನ್ನ ಸೋಶಿಯಲ್ ಸೆಕ್ಕುರಿಟಿ ಉಂಟಲ್ಲಾ? ಮತ್ಯಾಕೆ ಈ ಹಣ?”
“ಆಂದರೆ ಅದನ್ನು ನಿನ್ನ ಸರಕಾರಕ್ಕೆ ಕೊಡಬೇಕು ಅನ್ನುತ್ತೀಯೊ? ಕಷ್ಟಪಟ್ಟು ದುಡಿದು, ತೆರಿಗೆಕಟ್ಟಿ, ಉಳಿಸಿದ ಹಣ ಕಣಯ್ಯ ಅದು. ಸ್ವೀಡನ್ನಿನಲ್ಲಿ ಸಂಪಾದಿಸಿದ ಆ ಡುಡ್ಡು ಅಲ್ಲೇ ಯಾವುದಾದರೂ ಚಾಲಿರಿಟೇಬಲ್ ಸಂಸ್ಥೆಗೆ ಕೊಟ್ಟುಬಿಡುತ್ತೇನೆ.”
“ಭಾರತದಲ್ಲಿರೋ ಚಾಲಿರಿಟೇಬಲ್ ಸಂಸ್ಥೆಗಳಿಗಾದರೂ ಕೊಡಭಾರದಾ?” ಮುಖರ್ಜಿ ಸಿಡುಕಿದ. “ನೀನೊಳ್ಳೆ ಆಸಾಮಿ ಕಣಯ್ಯ. ಭಾರತದ ಬಗ್ಗೆ ರೋಸಿಹೋಗಿದ್ದೇನೆ. ನನಗೆ ನಿನ್ನ ದೇಶದ ಯಾವುದೇ ಜನರ ಮೇಲೆ, ಸಂಸ್ಥೆಗಳ ಬಗ್ಗೆ ವಿಶ್ವಾಸವೇ ಉಳಿದಿಲ್ಲ. ನನ್ನ ಅನುಭವಗಳನ್ನು ಹೇಳುತ್ತಾ ಹೋದರೆ ಆದೇ ಒಂದು ಕಂತೆಯಾಗುತ್ತದೆ. ನಿನಗ್ಯಾಕೆ ಅವೆಲ್ಲ? ಹಣ ಉಂಟೆಂದು ಯಾರಿಗಾದರೂ ಕೊಡಲು ಬರುವುದಿಲ್ಲ. ದಾನದಿಂದ ಸಂತೃಪ್ತಿ ಸಿಗಬೇಕು.. ಆದಕ್ಕೆ ಸ್ವೀಡನ್ನನಲ್ಲೇ ನನ್ನ ಹಣ ಬಳಕೆಯಾಗಬೇಕು.”
ಭಾರತದ ಬಗ್ಗೆ ಪರಕೀಯರು ಯಾರಾದರೂ ಹೀಗೆ ಹೇಳಿದರೆ ನಾವೇನಾದರೂ ಇದಿರೇಟು ಹಾಕಬಹುದು. ಆಥವಾ ಕೋಪ ಬಂದಂತೆ ನಟಿಸಬಹುದು. ಒಬ್ಬ ಭಾರತೀಯನೇ ಹೇಳುವಾಗ, ಅದೂ ತನ್ನ ಅನುಭವಗಳ ಆಧಾರದಲ್ಲಿ ಸತ್ಕವನ್ನೇ ನುಡಿಯುವಾಗ, ಆದನ್ನು ಅಲ್ಲಗಳೆಯುವುದು ಹೇಗೆ? ಆದುದರಿಂದ ಇನ್ನಷ್ಟು ಕೆದಕದಿರುವುದೇ ಮೇಲೆಂದು ಸುಮ್ಮನಾದೆ.
ಪ್ಯಾರಿಸ್ಸಿನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದ ನೆಲವನ್ನು ನಮ್ಮ ವಿಮಾನ ಸ್ಪರ್ಶಿಸಿದಾಗ ಸರಿಯಾಗಿ ಬೆಳಗಿನ ಜಾವ ಐದೂವರೆ. ಮುಂಬಯಿಯಿಂದ 7026ಕಿ.ಮೀ. ದೂರವನ್ನು ಒಂದೇ ಹಾರಿಗೆ ಹಾರಿ ಬಂದಿದ್ದೆವು ನಾವು! ಇದೀಗ ವಿದೇಶವೊಂದರ ನೆಲವನ್ನು ಮೊದಲ ಬಾರಿಗೆ ನಮ್ಮ ಪಾದಗಳು ಸ್ಪರ್ಶಿಸುತ್ತಿವೆ. ಐದು ವರ್ಷಗಳ ಹಿಂದೆ ಪಾಕಿಸ್ಥಾನದ ಗಡಿಯನ್ನು ನೋಡುವ ಕುತೂಹಲದಿಂದ ರಾಜಸ್ಥಾನದ ಜೈಸಲ್ಮೇರ‍್ವರೆಗೆ ಹೋಗಿದ್ದೆ ಅದರಾಚೆ ಹೋಗಲು ಗುರುತುಚೀಟಿ ಇಲ್ಲದ ಕಾರಣ ನನಗೆ ಅನುಮತಿ ಸಿಕ್ಕಿರಲ್ಲಿಲ್ಲ. ಈಗ ಪಾಸ್‌ಪೋರ್ಟು ಮತ್ತು ವೀಸಾಸಿಕ್ಕ ಮೇಲೆ, ಯಾವ ದೊಣೆ ನಾಯಕ್ಷನ ಅಪ್ಪಣೆಯ ಅಗತ್ಕವಿಲ್ಲದೆ ಕರಾಚಿ, ತೆಹರಾನ್, ಇಸ್ತಾಂಬೂಲ್, ಆಲ್ಫ್ ಹಾರಿ ಬಂದಿದ್ವೆ!
ಭಾವಪುಳಕಿತನಾಗಿ ವಿಮಾನದಿಂದಿಳಿದು ಜಗಮಗಿಸುವ ವಿದ್ಯುದ್ದೀಪಗಳ ಮಾಯಾಲೋಕದಂತಿರುವ ವಿಮಾನನಿಲ್ದಾಣದಲ್ಲಿ ಇತರ ಪ್ರಯಾಣಿಕರೊಡನೆ ಸಾಲಾಗಿ ಇಮಿಗ್ರೇಶನ್ ತಪಾಸಣೆಗಾಗಿ ನಿಂತೆ.
ಯುರೋಪಿನಲ್ಲಿ ಬಿಳಿಯರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಕರಿಯರನ್ನು ಮಾತ್ರ ಸಂಶಯದ ಕಣ್ಣುಗಳು ದೃಷ್ಟಿಸುತ್ತಿರುತ್ತವೆ ಎನ್ನುವುದು ವಿಮಾನ ನಿಲ್ದಾಣದಲ್ಲಿ ನಮ್ಮ ಗಮನಕ್ಕೆ ಬಂತು. ನಮ್ಮೆದುರಿದ್ವ ಬಿಳಿಯರು ಸರಸರನೆ ಹೊರಗೆ ಹೋದರೆ ತಪಾಸಣಾ ಆಧಿಕಾರಿ ನಮ್ಮನ್ನ ಕೈಬೀಸಿ ಕರೆದ. ಕಡುನೀಲಿ ಯೂನಿಫಾರಮ್ಮನಲ್ಲಿದ್ವ ಕೆಂಪು ಮೋರೆಯ ಆ ಚೆಲುವನ ಮುಖದಲ್ಲಿ ನಗುವಿರಲಿಲ್ಲ. ನಾವು ಇಂಗ್ತೀಷಿನಲ್ಲಿ ಹೇಳಿದ್ದು ಅವನಿಗೆ ಏನೇನೂ ಅರ್ಥವಾಗಲಿಲ್ಲ. ಇಂಗ್ಲೀಷ್ ಇಂಟನ್ಯಾಶನಲ್ ಲ್ಯಾಂಗ್ವೇಜ್ ಎಂಬ ನನ್ನ ಭ್ರಮೆ ಆ ಕೃಣಕ್ಕೆ ಹರಿಯಿತು. ಅದು ವಿಶ್ವದ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದು. ಅಲ್ಲಿನ ತಪಾಸಣಾ ಅಧಿಕಾರಿಗೇ ಇಂಗ್ಲಿಂಷ್ ಬರುವುದಿಲ್ಲ. ಇನ್ನು ತುಲೋಸಿನ ಸಾಮಾಜಿಕರಿಗೆ ಇಂಗ್ಲೀಷ್ ಬರಲು ಸಾಧ್ಯವೇ ಇಲ್ಲ. ಭಾಷೆ ಗೊತ್ತಿಲ್ಲದ ದೇಶದಲ್ಲಿ
ನಲುವತ್ತು ದಿನ ಬದುಕಬೇಕು!
ಇಂಗೀಷ್ ಬಾರದ ಆ ಅಧಿಕಾರಿ ಪ್ರೆಂಚ್ನಲ್ಲಿ ಅದೇನನ್ನೋ ಹೇಳಿದ. ಅದು ನಮಗೆ ಅರ್ಥವಾಗಲಿಲ್ಲ. ನಾಲ್ಕೈದು ನಿಮಿಷ ಹೆಣಗಾಡಿದ ಹೆಬ್ಬಾರರು ನಮ್ಮೆಲ್ಲರ ದಾಖಲೆ ಪತ್ರಗಳಿದ್ದ ಫೈಲನ್ನು ಆವನಿಗೆ ನೀಡಿ ‘ತುಲೋಸ್ ರೋಟರಿ ಪ್ರೋಗ್ರಾಂ’ ಎಂದು ಬಿಡಿಸಿ ಬಿಡಿಸಿ ಹೇಳಿದರು. ಅವನು ಅದನ್ನು ತಿರುವಿ ಹಾಕಿದ. ಅದರಲ್ಲಿರುವುದು ಅವನಿಗೆ ಅರ್ಥವೇ ಆಗದ ಇಂಗ್ಲೀಷ್ ದಾಖಲೆ ಪತ್ರಗಳು. ಒಂದೆರಡನ್ನು ನೋಡಿದ ಬಳಿಕ ಅವನದನ್ನು ಹಿಂದಿರುಗಿಸಬಹುದಿತ್ತು. ಅದಕ್ಕವನ ಆಧಿಕಾರಿ ದರ್ಪ ಬಿಡಲಿಲ್ಲ. ಅವನು ಮತ್ತೂ ಕೈ ಹಾಕಿ ಹಾಳೆ ತಿರುಗಿಸಿದಾಗ ಗುಂಡುಸೂಚಿಯೊಂದು ಅವನಿಗೆ ಚುಚ್ಚಿತು. ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯಲ್ಲಿ ಭಾರತದ ಗುಂಡುಸೂಜಿಯಿಂದ ಬಲವಾಗಿ ಚುಚ್ಚಸಿಕೊಂಡ ಆತ ಫೈಲನ್ನು ಹಿಂದಿರುಗಿಸಿ, ನಮ್ಮೆಲ್ಲರ ಪಾಸ್‌ಪೋರ್ಟ್ ನೋಡಿ, ಶೆಂಗನ್ ವೀಸಾದ ಮೇಲೆ ಸೀಲು ಗುದ್ಲಿ ಮುಂದಕ್ಕೋಗುವಂತೆ ಕೈ ಸನ್ನೆ ಮಾಡಿದ. ಬಾಡಿ ಲ್ಯಾಂಗ್ವೇಜೆ ನಿಜವಾದ ವಿಶ್ವ ಭಾಷೆ!
ಗುಂಡುಸೊಜಿಯಿಂದ ಚುಚ್ಚಿಸಿಕೊಂಡಾಗಿನ ಅವನ ಹುಳ್ಳಗಿನ ಮುಖವನ್ನು ನೆನಪಿಸಿಕೊಂಡು ವಿದೇಶೀ
ನೆಲದಲ್ಲಿ ಮುಕ್ತವಾಗಿ ನಕ್ಕೆವು.
ಆದರೆ ಎಲಾಲಿನ್ ನಗುವಂತಿರಲಿಲ್ಲ. ರೋಟರಿ ಸಂಸ್ಥೆ ನಮಗೆಲ್ಲರಿಗೆ ಕೋಟಿಗೆ ಸಿಕ್ಕಿಸುವಂತಹಾ ಸುಂದರವಾದ ನಾಮಫಲಕ ಮಾಡಿಕೊಟ್ಟಿತ್ತು. ಅದರಲ್ಲಿ ಹೆಸರು ವಿಳಾಸ ಮತ್ತು ಇತರ ವಿವರಗಳಿದ್ವವು. ನಮ್ಮ ಕಡುನೀಲಿ ಬಣ್ಣದ ಸೂಟಿನ ಮೇಲೆ ಚಿನ್ನದ ಬಣ್ಣದ ನಾಮಫಲಕ ಎದ್ದು ಕಾಣುತ್ತಿತ್ತು. ಎಲ್ಕಾನ್ ಗಡಿಬಿಡಿಯಲ್ಲಿ ಅದನ್ನೆಲ್ಲೋ ಕಳಕೊಂಡಿದ್ದಳು. ವಿಮಾನದುದ್ದಕ್ಕೂ ನಾಲ್ಕೈದು ಬಾರಿ ಓಡಾಡಿ ಹುಡುಕಿದರೂ ಅದು ಆವಳಿಗೆ ಸಿಕ್ಕಿರಲ್ಲಿಲ್ಲ. ಕೊನೆಗೆ ‘ಮಾಹಿತಿ’ ಎಂಬ ನಾಮಫಲಕ ಹಾಕಿಕೊಂಡು ಕೂತಿದ್ದ ನೀಲಿ ಸಮವಸ್ತ್ರದ ಅಧಿಕಾರಿಯ ಬಳಿಗೆ ಹೋಗಿ, ತಾನು ಕಳೆದುಕೊಂಡದ್ದು ಏನನ್ನು ಎಂದು ಬಹಳ ಕಷ್ಟಪಟ್ಟು ಮನವರಿಕೆ ಮಾಡಿದಳು. “ವಿದೇಶೀಯರು ಬಹಳ ಪ್ರಾಮುಣಿಕರು. ನನಗದು ಖಂಡಿತಾ ಸಿಕ್ಕೇ ಸಿಗುತ್ತೆ” ಎಂದು ನಮ್ಮಲ್ಲಿ ಹೇಳಿಕೊಂಡಳು. ಅದು ಅವಳ ನಂಬಿಕೆ ಮಾತ್ರವಾಗಿತ್ತು. ಗೌರವದ, ಪ್ರತಿಷ್ಠೆಯ ಸಂಕೇತವಾಗಿದ್ದ ಅದನ್ನು ಅವಳು ಶಾಶ್ವತವಾಗಿ ಕಳಕೊಂಡುಬಿಟ್ಟಿದ್ವಳು.
ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಲ್ಲಿ ನಾವು ಮೊದಲಿಗೆ ಮಾಡಿದ ಕೆಲಸವೆಂದರೆ ನಮಗಾಗಿ ಕಾಯ್ದರಿಸಲಾಗಿದ್ದ ಹೋಟೇಲಿನ ಅನ್ವೇಷಣೆ. ಅದು ಪ್ಯಾರಿಸ್ಸ್ ವಿಶ್ವವಿದ್ಯಾಯ ಬಳಿಯ ಹೋಟೆಲ್ ಸೇಂಟ್ ಮಿಷೇಲ್. ನಿಲ್ದಾಣದಿಂದ ಲಕ್ಸೆಂಬರ್ಗ್ ವರೆಗೆ ಮೆಟ್ರೋ ರೈಲಲ್ಲಿ ಪ್ರಯಾಣ ಮಾಡಿದೆವು. ಚಲಿಸುವ ಮೆಟ್ಟಲುಗಳು, ಟಿಕೆಟ್ಟು ತೋರಿಸಿದರಷ್ಟೇ ತೆರೆದುಕೊಳ್ಳುವ ಗೇಟುಗಳು, ತಾನಾಗಿಯೇ ಮುಚ್ಚಿ ತೆರೆದುಕೊಳ್ಳು,ವ ಬೋಗಿಯ ಬಾಗಿಲುಗಳು, ವೈಭವಪೂರ್ಣವಾದ ಭೂಗತ ರೈಲು ನಿಲ್ದಾಣಗಳು, ನಮೂನೆವಾರೀ ಬಣ್ಣದ, ಎತ್ತರದ, ಗಾತ್ರದ ಜನರು. ಭಾರದ ಲಗ್ಗೇಜುಗಳೊಡನೆ ನಿಲ್ದಾಣದಿಂದ ಒಂದು ಕಿಲೋಮೀಟರು ದೂರದ ಹೋಟೇಲು ಮುಟ್ಟುವಾಗ ಸುಸ್ತೋ ಸುಸ್ತು. ಐದು
ಡಿಗ್ರಿ ಸೆಲ್ಪಿಯಸ್ ಚಳಿಯಲ್ಲೂ ನಮ್ಮ ಮಹಿಳಾ ಮಣಿಯರಿಬ್ಬರೂ ಬೆವರಿದ್ವರು. ಕೊನೆಗೂ ಹೋಟೇಲ್ ಸೇಂಟ್ ಮಿಷೇಲಿನ ಎರಡನೇ ಮಹಡಿಯಲ್ಲಿ ಹೆಬ್ಬಾರರಿಗೆ ಸಿಂಗಲ್, ಅದರ ಪಕ್ಕದಲ್ಲಿ ನಮ್ಮ ಮಹಿಳಾ ಮಣಿಯರಿಗೆ ಹಾಗೂ ಮೂರನೇ ಮಹಡಿಯಲ್ಲಿ ನನಗೆ ಮತ್ತು ಗುರುವಿಗೆ ಡಬ್ಬಲ್ ರೂಮು ದೊರೆತವು. ನಮ್ಮ ಲಗ್ಗೇಜನ್ನು ರೂಮಲ್ಲಿ ಡಂಪ್ ಮಾಡಿ, ಥಳ ಥಳ ಹೊಳೆಯುವ ಬಾತ್ರೂಮಲ್ಲಿ ಬೆಚ್ಚನೆಯ ಶವರ್ಭಾತ್ ಮಾಡಿ ಪ್ರಯಾಣದ ಸುಸ್ತು ಕಳೆಯಲು ನಿದ್ದೆಯ ಮೊರೆಹೊಕ್ಕೆವು.
ಹಲಿಗೆ ಬಳಪವ ಪಿಡಿಯದೊಂದಗ್ಗಳಿಕೆ
ಸಂಜೆ ಬೀದಿ ಸುತ್ತಲು ಹೊರಟೆವು. ನಮ್ಮ ಹೋಟೆಲ್ ಇದ್ದುದು ಪ್ಯಾರಿಸ್ ವಿಶ್ವವಿದ್ಯಾಯದ ಹಿಂಬದಿಯಲ್ವಿ ವಿಶ್ವವಿದ್ಯಾಲಯಕ್ಷ್ಕೊಂದು ಪ್ರದಕ್ಷಿಣೆ ಬಂದು ಒಳಹೊಕ್ಕೆವು. ಒಳಗೆ ವಿಕ್ಟರ್ ಹ್ಯೂಗೋನ ಪ್ರತಿಮೆ. ಆಲ್ಲಲ್ಲಿ ಮಾತುಕತೆಯಲ್ಲಿ ಮೈಮರೆತಿರುವ ಜೋಡಿಗಳು. ಸಂಜೆಯಾದುದರಿಂದ ಅಧ್ಯಾಪಕರಾಲಿರೂ ಸಿಗಲಿಲ್ಲ. ವಿಶ್ವವಿದ್ಯಾಲಯವನ್ನು ಇನ್ನೊಂದು ದಿನ ನೋಡಿದರಾಯಿತೆಂದು ಹೊರ ಬಂದು ನಾಳೆಯಿಂದ ನಾವುಫ್ರೆಂಚ್ ಕಲಿಯಲಿಕ್ಕಿರುವ ಬರ್ಲಿಟ್ಜ್ ಸ್ಕೂಲ್ ಎಲ್ಲಿದೆ ಎಂದು ಹುಡುಕುತ್ತಾ ಹೊರಟೆವು.
ವಿಶ್ವದ ಪ್ರಮುಖ ಭಾಷೆಗಳಲ್ಲಿ ಆಸಕ್ತರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ನೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಸ್ಥೆ ಈ ಬರ್ಲಿಟ್ಜ್ ಸ್ಕೂಲ್. ನಮ್ಮ ಹೋಟೆಲ್ಲಿದ ಕೇವಲ ಎರಡು ಫರ್ಲಾಂಗು ದೂರದಲ್ಲಿತ್ತದು. ನಾಲ್ಕುಆಂತಸ್ತುಗಳ ಸುಂದರ ವಿನ್ಯಾಸದ ಬರ್ಲಿಟ್ಜ್ ಕಟ್ಟಡದ ಬೃಹತ್ ಪ್ರವೇಶದ್ವಾರ ಮುಚ್ಚಿತ್ತು. ಹೊರಗೆ ಕಾವಲುಗಾರರು ಯಾರೂ ಇರಲಿಲ್ಲ. ಅದನ್ನು ಹೇಗೆ ತೆರೆಯೋದು ಅಂತ ಯೋಚಿಸಿದಾಗ ಗೋಡೆಯಲ್ಲಿದ್ವ ಬಟನ್ ನಮ್ಮ ದೃಷ್ಟಿಗೆ ಬಿತ್ತು. ಆದು ಕಾಲಿಂಗ್ ಬೆಲ್ಲಿರಬಹುದೆಂದು ಗುರು ಅದನ್ನು ಒತ್ತಿ, ‘ಆಲಿಬಾಬಾ ಮತ್ತು ನಲ್ವತ್ತು ಕಳ್ಳರ’ ನಾಟಕದ ಕಳ್ಳರು ಗುಹೆಯ ಬಾಗಿಲು ತೆರೆದುಕೊಳ್ಳಲು ಉಚ್ಚರಿಸುವ ಮಂತ್ರವನ್ನು ಹೇಳಿದ. “ಖೋಲ್ ಜಾ ಶಿಂ ಶಿಂ”. ಏನಾಶ್ವರ್ಯ? ಬಾಗಿಲು ತೆರೆದುಕೊಂಡಿತು! ಮುಂದೆ ಬರ್ಲಿಟ್ಜ್‌ನಲ್ಲಿ ಏಳುದಿನ ಪಾಠ ಹೇಳಿಸಿಕೊಳ್ಳಲು ಬರುವಾಗ ಬಾಗಿಲ ಮುಂದೆ ನಿಂತು ಬಟನ್ ಒತ್ತಿ “ಖೋಲ್ ಜಾ ಶಿಂ ತಿಂ” ಎಂದು ಹೇಳುವುದು ನಮ್ಮ ಪರಿಪಾಠವಾಗಿಬಿಟ್ಟತು.
ಬರ್ಲಿಟ್ಜ್‌ನ ನಿರ್ದೇಶಕಿ ಒಬ್ಬಳು ಎತ್ತರದ ಇತಾಲಿಯನ್ ಮಹಿಳೆ. ಅವಳ ವಿಚಿತ್ರ ಹೆಸರನ್ನು ಎಷ್ಟು ಯತ್ನಿಸಿದರೂ ನನ್ನ ಸ್ಮೃತಿ ಪಟಲದಲ್ಲಿ ದಾಖಲಿಸಲು ಸಾಧ್ಯವಾಗಲೇ ಇಲ್ಲ. ನಮ್ಮನ್ನು ಕಂಡಕೂಡಲೇ “ಎನೆದರ್ ಇಂಡಿಯನ್ ಟೀಂ! ಇನ್ನೊಂದು ತಂಡ ಬಂದು ಮೂರು ದಿನಗಳಾದವು. ನಿಮಗೆ ಸೇಂಟ್ ಮಿಷೇಲ್ ಹೋಟೆಲ್ನಲ್ಲಿ ರೂಮು ಬುಕ್ಕು ಆಗಿದೆ. ಬೆಳಗ್ಗಿನ ತಿಂಡಿ .ಅಲ್ಲೇ..ಮಧ್ಯಾಹ್ನದ ಮತ್ತು ಸಂಜೆಯ ಊಟದ ಕೂಪನ್ನುಗಳು ರೆಡಿಯಾಗಿವೆ. ನಿಮಗೆ ಮೂರು ರೆಸ್ಟುರಾಗಳ ವಿಳಾಸ ನೀಡುತ್ತಿದ್ದೇನೆ. ಒಂದು ಫ್ರೆಂಚ್, ಇನ್ನೊಂದು ಇತಾಲಿಯನ್, ಮತ್ತೊಂದು ಚೈನೀಸ್. ನೀವು
ಈ ಮೂರರಲ್ಲಿ ಯಾವುದಕ್ಕೆ ಬೇಕಾದರೂ ಹೋಗಬಹುದು. ಮಧ್ಯಾಹ್ನದ ಊಟಕ್ಕೆ 50ಪ್ರಾಂಕು (ರೂ.350)ಮತ್ತು ಸಂಜೆ ಊಟಕ್ಕೆ 100ಪ್ರಾಂಕು (ರೂ.700) ಖರ್ಚು ನಿಮಗೆ ಮಾಡಲು ಅವಕಾಶವಿದೆ. ಆದರೆ ಈ ಮೂರು ರೆಸ್ಟುರಾ ಬಿಟ್ಟು ಬೇರೆಲ್ಲೂ ನೀಪು ಈ ಕೂಪನ್ಗಳನ್ನು ಬಳಸುವಂತಿಲ್ಲ. ನಾಳೆಯಿಂದ ನಿಮ್ಮ ಫ್ರೆಂಚ್‌ಕಲಿಕೆ ಆರಂಭ. ಬೆಳಗ್ಗೆ ಎಂಟೂವರೆಯಿಂದ ಸಂಜೆ ಆರೂವರೆವರೆಗೆ. ಮಧ್ಯಾಹ್ನ ಅರ್ಧಗಂಟೆ ಊಟಕ್ಕೆ ಬಿಡುವಿರುತ್ತದೆ. ಬೆಳಗೊಮ್ಮೆ ಮತ್ತು ಸಂಜೆ ಆರಕ್ಕೊಮ್ಮೆ ನೀವು ಹಾಜರಿ ಪುಸ್ತಕದಲ್ಲಿ ಸಹಿ ಮಾಡಬೇಗುತ್ತದೆ. ನಮ್ಮಲ್ಲಿ ಒಂದು ಪೀರಿಯಡ್ಡು ಅಂದರೆ ನಲುವತ್ತು ನಿಮಿಷಗಳು ಮಾತ್ರ. ಒಂದು ಪೀರಿಯಡ್ಡಿನಿಂದ ಇನ್ನೊಂದರ ನಡುವೆ ಐದು ನಿಮಿಷಗಳ ವಿರಾಮವಿರುತ್ತದೆ. ನಿಮಗೆ ಕಾಫಿ, ಚಾ, ಕೋಲಾ, ಸಿಗರೇಟು ಬೇಕಿದ್ವರೆ ಇದರೊಳಗೇ ಸಿಗುತ್ತವೆ. ರೇಟು ನೋಡಿ ಅಷ್ಟು ಹಣ ಹಾಕಿ ನಿಮಗೇನು ಬೇಕೋ ಆದಕ್ಕೆ ಸಂಬಂಧಿಸಿದ ಬಟನ್ ಒತ್ತಿದರೆ ಸಾಕು. ನಿಮಗೆ ಏನು ಸಮಸ್ಯೆ ಇದ್ದರೂ ನಮಗೆ ತಿಳಿಸಿ” ಎಂದು ಪಟಪಟನೆ ಇಂಗ್ಲೀಷಿನಲ್ಲಿ ಹೇಳಿದಳು.
ಫ್ರೆಂಚ್ ಭಾಷೆಗೆ ಅದರದೇ ಆದ ಸೊಗಡು ಇದೆ. ಹಾಗೆ ನೋಡಿದರೆ ಇಡೀ ಯುರೋಪಿಗೆ ಇರೋದು ಒಂದೇ ಲಿಪಿ. ಅದು ರೋಮನ್ ಲಿಪಿ. ಅಂದರೆ ಫ್ರೆಂಚ್‌ಗಾಗಲೀ, ಇಂಗ್ಲೀಷ್‌ಗಾಲೀ ಸ್ವಂತ ಲಿಪಿಯೆಂಬುದಿಲ್ಲ. ಭಾರತದಲ್ಲಿ ಇಂಗ್ಲೀಷ್ ಕಲಿತವರಿಗೆ ಯುರೋಪಿನ ಯಾವುದೇ ಸ್ವಳಕ್ಕೆ ಹೋಗಿ ಬರಲು ಕಷ್ಟವಿಲ್ಲ. ಏಕೆಂದರೆ ನಾವೆಲ್ಲಾ ಇಂಗ್ಲೀಷ್ ಕಲಿತಿರುವುದು ರೋಮನ್ ಲಿಪಿಯಲ್ಲೇ .ತಾನೆ.? ಅದರೆ ಇಂಗ್ಲೀಷ್ ಪ್ರಭಾವದಿಂದ ಅದೇ ರೀತಿಯ ಉಚ್ಚಾರಣೆ ಮಾಡಿದರೆ ನಾವು ಬೇಸ್ತು ಬೀಳುತ್ತೇವೆ. ಫ್ರೆಂಚ್ ಕಲಿಯುವವರಿಗೆ ಉಚ್ಚಾರ, ಲಿಂಗಭೇದ ಮತ್ತು ಸ್ಪೆಲ್ಲಿಂಗ್ ಇವು ಮೂರು ತೊಡಕುಗಳು ಎದುರಾಗುತ್ತವೆ. ಉದಾಹರಣೆಗೆ ಫ್ರೆಂಚ್ನಲ್ಲಿ “ಕೆಸ್ಕ್ಯು ಸೆ” ಅಂದರೆ ‘ಆದು ಏನು’ ಎಂದರ್ಥ. ಇದನ್ನು ಫ್ರೆಂಚಿನಲ್ಲಿ ಬರೆಯುವ ಕ್ರಮ ಹೀಗೆ : Quest ce que c’ est.. ಕೆಸ್ ಕ್ಯು ಸೆ ಎಂದು ಕೇಳಲು ಎಷ್ಟೊಂದು ಸ್ಪೆಲ್ಲಿಂಗ್ ದುಂದುವೆಚ್ಚ ಆಗಿದೆ ನೋಡಿ. ವ್ಯಕ್ಷ್ತಿಗಳ ಹೆಸರಲ್ಲೂ ಇದೇ ಕತೆ. ಕಳೆದ ಬಾರಿ ಪ್ರಾನ್ಸಿನಿಂದ ನಮ್ಮ ಜಿಲ್ಲೆಗೆ ಬಂದಿದ್ವ ಪ್ರೆಂಚ್ ತಂಡದ ನಾಯಕ್ಷನ ಹೆಸರನ್ನು ಬರೆಯುವುದು ಹೀಗೆ. JEAN BOUILLAD.. ನಮ್ಮ ಜಿಲ್ಲೆಯಾದ್ಯಂತ ಈ ನಾಯಕ್ಷನನ್ನು ಜೀನ್ ಬೊಲ್ಲಾಡ್ ಎಂದೇ ಪರಿಚಯಿಸಲಾಗುತ್ತಿತ್ತು. ಆತ ಹಾಗೆ ಪರಿಚಯಿಸಿದಾಗ ‘ನಮಸ್ತೇ” ಎಂದು ನಕ್ಕು ಕೈ ಮುಗಿಯುತ್ತಿದ್ವ. ಪ್ರಾನ್ಸಿಗೆ ಹೋದ ಬಳಿಕ ಗೊತ್ತಾಯಿತು ಅವನ ಹೆಸರು ಜುವಾನ್ ಬುಯೋ ಎಂದು!
ಪ್ರಾನ್ಸಿನಲ್ಲಿ ಉಚ್ಛಾರಣಾ ವೃತ್ಯಾಸದಿಂದ ನಾವು ನಗೆಪಾಟಲಿಗೀಡಾದ ಕೆಲವು ಪದಗಳ ಸ್ವಾಂಪಲ್ಸ್
ಹೀಗಿದೆ:
ಬರೆಯುವ ರೀತಿ ನಮ್ಮ ಉಚ್ಛಾರ ಫ್ರೆಂಚರ ಉಚ್ಛಾರ
AUGUST COMTE ಆಗಸ್ಟ್ ಕಾಮ್ಟೆ ಯುಗುಸ್ತ್ ಕೋಂತ್
AUREVOIR ಆ ರಿವೋಯೆರ್ ಅವ್ವ
JACQUES GUIBERT. ಜಾಕ್ಟಿಸ್ ಗಿಬರ್ಟ್ ಜಾಕ್ ಗಿಬೇ
LAUSANNE ಲಾಸ್ನೇ ಲ್ಯುಸಾನ್
MAZAMT ಮಜಾಮೆತ್ ಮಾಂಪಿಲಿಯೋ
MONTPELLIER ಮೋಂತ್ ಪೆಲಿಯರ್ ಮಾಂಪಿಲಿಯೋ
PERPIGNAN ಪರ್ಪಿನ್ಯಾನ್ ಪರ್ಪಿನ್ಯಾ
ಕೆಲವು ರಾಷ್ಟ್ರಗಳ ಹೆಸರನ್ನು ಫ್ರೆಂಚಲ್ಲಿ ಹೇಳುವುದು ಇನ್ನೂ ಗಮ್ಮತ್ತು. ಉದಾಹರಣೆಗೆ
ಭಾರತ L’NDE ಲಾಂಡ
ಪೊಂಲೆಂಡ್ L’POLOGNE ಲಾಪೊಲೋನ್
ಅಮೇರಿಕಾದ ಸಂಯುಕ್ತ ಸಂಸ್ಥಾನ: LES ESTATA UNIS ಲೆಜಾಟಜೂನಿ
ಇಂತಹ ಸಂದರ್ಭಗಳಲ್ಲಿ ನಾವು ಬೆಸ್ತು ಬೀಳದೆ ಇನ್ನೇನಾಗಬೇಕು?
ಫ್ರೆಂಚ್‌ನಲ್ಲಿ ಇನ್ನೊಂದು ದೊಡ್ಡ ಸಮಸ್ಯೆ ಲಿಂಗಕ್ಕೆ ಸಂಬಂಧಿಸಿದ್ದು. ನಾಮಪದಕ್ಕೆ ಮೊದಲು ಅದು ಪುಲ್ಲಿಂಗವಾದರೆ LE (ಲ) ಆಥವಾ strIಲಿಂಗವಾದರೆ LA (ಲಾ) ಎಂಬ ಪದವನ್ನು ಸೇರಿಸಬೇಕು. ಬಹುವಚನವಾದರೆ LES (ಲಿ) ಪದ ಜೋಡಣೆಯಾಗಬೇಕು. ಕನ್ನಡದ ನಪುಂಸಕ ಲಿಂಗ ಫ್ರೆಂಚ್‌ನಲ್ಲಿಲ್ಲ. ಹಾಗಾಗಿ ದೊಡ್ಡ ಸಮಸ್ಯೆ. ಒಂದು ವಾಕ್ಯ ಮಾಡಹೊರಟಾಗ ಮೇಜು, ಬಾಗಿಲು ಇತ್ಯಾದಿ ಪದಗಳು ಬಂದುಬಿಟ್ಟರೆ ಅವುಗಳ ಲಿಂಗ ಪರೀಕ್ಷೆ ಬಹುದೊಡ್ಡ ತಲೆನೋವು. ನಮ್ಮ ಹಿಂದಿಯಲ್ಲೂ ಇದೇ ಸಮಸ್ಯೆ ನಮಗೆ ಎದುರಾಗುತ್ತದೆ. ಒಟ್ಟಿನಲ್ಲಿ ಲಿಂಗ ಸಂಬಂಧೀ ಸಮಸ್ಯೆಯಾವತ್ತೂ ಜಟಿಲವಾದುದೇ ಆಗಿರುತ್ತದೆ.! ಫ್ರೆಂಚು ಕಲಿಕೆಯ ಸಂದರ್ಭದಲ್ಲಿ ಭಾರತೀಯ ಭಾಷೆಗಳಿಗೂ ಫ್ರೆಂಚಿಗೂ ಕೆಲವು ಸಾದೃಶ್ಯಗಳಿದ್ದುದು ನಮ್ಮ ಗಮನಕ್ಕೆಬಂತು. ಫ್ರೆಂಚರು ತಂದೆಯನ್ನು “ಪಪೃ’ ಮತ್ತು ತಾಯಿಯನ್ನು ‘ಮಮ್ಮ’ ಎಂದು ಸಂಬೋಧಿಸುತ್ತಾರೆ. ನಮ್ಮ ಆನನಾಸು ಫ್ರೆಂಚಲ್ಲೂ ಆನನಾಸೇ. ಕನ್ನಡಕವು ಲುನೇತ್ತವಾಗಿ ನಮಗೆ ನೇತ್ರವನ್ನು ನೆನಪಿಸುತ್ತದೆ. ನೀವು?’ ಎಂಬ ಪ್ರಶ್ನಾರ್ಥಕ ಪದ ಫ್ರೆಂಚಲ್ಲಿ “ಎವು? ಎಂದಾಗುತ್ತದೆ. ಸುಪ್ರಭಾತವನ್ನು “ಬೋನ್ಸೂರ್” ಎನ್ನುವಾಗ ನಮ್ಮ ಕಿವಿಯಲ್ಲಿ ನಮಸ್ಕಾರ ಪ್ರತಿಧ್ವನಿತವಾಗುತ್ತದೆ. ದೂ(ಎರಡು), ಕ್ಯಥ್ರ್ಯ (ನಾಲ್ಕು),ಸೆತ್ತ್(ಏಳು)-ಇತ್ಯಾದಿಗಳು ಹಿಂದಿಯನ್ನೇ ನೆನಪಿಗೆ ತರುತ್ತವೆ. ಹಿಂದಿಯ ಹಾಗೆ ಫ್ರೆಂಚಿಗೂ ಸ್ವಂತ ಲಿಪಿಯೆಂಬುವುದಿಲ್ಲ. ಮಾತು ಮಾತಿಗೆ ‘ವಲಾ'(ಒಳ್ಳೆಯದು), ದಕೋ(ಸರಿ) ಎನ್ನವುದು, ಫ್ರೆಂಚರ ಕೆಲಪು ಉದ್ಗಾರಗಳು-ವಿವಿ(ಹೌಮ ಹೌದು),ಅಂ…., ಓ ಲಲಾ (ಅಯ್ಯ್ಯೋ) ಭಾರತೀಯ ಭಾಷೆಗಳನ್ನೇ ನೆನಪಿಗೆ ತರುತ್ತವೆ.
ಆನಂತಮೂರ್ತಿಯವರ ‘ಆವಸ್ಥೆ’ ಕಾದಂಬರಿ ಓದಿದವರಿಗೆ ಅದರಲ್ಲಿ ಬರುವ ಮಹೇಶ್ವರಯ್ಯ ಆಗಾಗ ‘ಬೋಂ’ ಎಂದು ಉದ್ಗಾರ ತೆಗೆಯುವ ನೆನಪಿರಬಹುದು. ‘ಬೋಂ’ ಎಂದು ಆಗಾಗ ಹೇಳುವುದು ಫ್ರೆಂಚರದೊಂದು ಅಭ್ಯಾಸ. ನಮ್ಮಲ್ಲಿ ಕೆಲವರು ವಯಸ್ಸಾದವರು ‘ರಾಮಾ’ ಎಂದೋ, ಕೃಷ್ಟಾ’ಎಂದೋ ಹೇಳುವ ಹಾಗೆ. ಮಾತಿನಲ್ಲಿ ಬೇಡಿಕೆಯ ಸಂದರ್ಭಗಳಿದ್ವರೆ ಸಿಲ್ಟುಪ್ಲೇ( Will You Please) ಎಂದು ಸೇರಿಸುತ್ತಾರೆ. ಫ್ರೆಂಚಿನಲ್ಲಿ ಬಾಟಲಿಗೆ ಬುತಾಯಿ ಮತ್ತು ಮದುವೆಯಾಗದ ಹೆಣ್ಣಿಗೆ ಮದ್‌ಮಗೇಲ್ ಅನ್ನುತ್ತಾರೆ. ಆವೆರಡೂ ಅಚ್ಚ ತುಳು ಶಬ್ಬದ ಹಾಗೆ ಕೇಳಿಸುತ್ತವೆ
ಬರ್ಲಿಟ್ಜ್ ನ ಐದು ದಿನಗಳ ನಮ್ಮ ಫ್ರೆಂಚ್ ಕಲಿಕೆಯ ಅವಧಿಯಲ್ಲಿ ಏಳು ಮಂದಿ ತರಗತಿಗಳನ್ನು ತೆಗೆದುಕೊಂಡಿದ್ದರು. ಅವರಲ್ಲಿ ನಮಗೆ ತುಂಬಾ ಆತ್ಮೀಯರಾದವರು ರೂಪೆ, ಇಸಾಬೆಲ್ಲಾ, ಏಂಜೆಲಾ ಮತ್ತು ಕ್ರಿಸ್ತೀನಾ. ರೂಪೆ ಮೂಲತಃ ನ್ಯೂಜಿಲೆಂಡಿನವ. ಹಾಗಾಗಿ ಇಂಗ್ಲೀಷ್ ಬಲ್ಲವನಾಗಿದ್ವ. ಇಪ್ಪತ್ತಾರರ ಹರೆಯದ ಇವನನ್ನು ನೋಡಿದರೆ ಥೇಟ್ ಸರ್ಕಸ್ ಬಪೂನನಂತೆ. ಚೌಕುಳಿ ಚೌಕುಳಿ ಶರ್ಟು, ವಿಚಿತ್ರ ಗಡ್ಡ ಮೀಸೆಗಳ ಸಣಕಲ ರೂಪೆಯನ್ನು ಕಂಡಾಗ ಈತನಿಗೆ ಮುಖ ತೊಳೆಯುಪುದು ಕೂಡಾ ಒಂದು ಸಾಪ್ತಾಹಿಕ ಕಾರ್ಯಕ್ಷ್ರಮವಿರಬಹುದೇ ಅನ್ನುವ ಸಂಶಯ ಮೂಡುತ್ತದೆ.
ತರಗತಿಯಲ್ಲಿ ಆಗಾಗ ಸಿಳ್ಳು, ಹಾಕುತ್ತಾ ಕಾಲು ಅಲ್ಲಾಡಿಸುತ್ತಾ. ಆತ ಪಾಠ ಹೇಳಿಕೊಡುತ್ತದ್ದುದೇ ಒಂದು ಮೋಜು.
ಬಹಳ ಸೀರಿಯಸ್ಸಾಗಿ ನಮಗೆ ಫ್ರೆಂಚ್ ಪಾಠ ಹೇಳಿಕೊಡುತ್ತಿದ್ವ ಇಸಬೆಲ್ಲಾಳಿಗೆ ಹೆಚ್ಚೆಂದರೆ ಇಪ್ಪತ್ತೇಳು ವರ್ಷ. ಪರಿಪೂರ್ಣ ಆರೋಗ್ಯದಿಂದ ನಳನಳಿಸುವ ದೇಹಕಾಂತಿಯ ಇಸಬೆಲ್ಲಾ ಮೂಲತಃ ಪೋರ್ಚುಗಲ್ಲಿನವಳು. ಆವಳಿಗೆ ಫ್ರೆಂಚ್, ಪೋರ್ಚ್‌ಗೀಸ್ ಮತ್ತು ಸ್ಫಾನಿಷ್ ಭಾಷೆಗಳ ಮೇಲೆ ಪ್ರಭುತ್ವವಿತ್ತು. ಇಂಗ್ಲಿಂಷ್ ಮಾತ್ರ ಬರುತ್ತಿರಲಿಲ್ಲ. ಆದರೆ ಐದು ದಿನಗಳಲ್ಲೂ ಅವಳು ನಕ್ಕದ್ದನ್ನು ನಾವು ಕಂಡಿರಲಿಲ್ಲ.ಅನ್ಯಭಾಷೆ, ಹೊಸ ಪರಿಸರ, ಫ್ರೆಂಚ್ ಆಹಾರಕ್ಕೆ ಹೊಂದಿಕೊಳ್ಳಲಾಗದ ಸ್ಥಿತಿ, ಬಿಡುವಿಲ್ಲದ ಪಾಠ ಪಟ್ಟಿಗಳಿಂದಾಗಿ ನಮಗೆ ಒಮ್ಮೊಮ್ಮೆ ಯಾಕಾಗಿ ಇಲ್ಲಿಗೆ ಬಂದೆವೋ ಎಂದೆನಿಸುತ್ತಿತ್ತು. ಆದರ ಮೇಲೆ ಸ್ಟ್ರಿಕ್ಟಾಗಿ ಪಾಠ ಹೇಳುವ ಇಸಾಬೆಲ್ಲ! ರೂಪೆಯ ತರಗತಿಯಲ್ಲಿ ಹಾಸ್ಯ ಚಟಾಕಿಗಳು
ಸಾಕಷ್ಟಿದ್ದವು. ಇವಳ ತರಗತಿಯಲ್ಲಿ ಇವಳೊಂದು ವೇಳೆ ಹಾಸ್ಕ ಚಟಾಕಿ ಹಾರಿಸಿದರೂ ಅದು ಯಾರಿಗೆ ಅರ್ಥವಾದೀತು?
ಕೊನೆಯ ದಿನ ಈಕೆ ನಮಗೆ ಕೆಲವು ಪ್ರಶ್ನೋತ್ತರಗಳನ್ನು ಕಲಿಸಿದಳು. ಫ್ರೆಂಚಲ್ಲಿ “ನಿನ್ನೆ ಹೇಗೆ ಕಳೆದೆ’ ಎಂಬ ಪ್ರಶ್ನೆ ಮತ್ತು ಆದಕ್ಕೆ ಫ್ರೆಂಚಲ್ಲೇ ಹೇಗೆ’ಉತ್ತರಿಸುವುದು ಎನ್ನುವುದನ್ನು ತಿಳಿಸಿದಳು ಹೆಬ್ಬಾರರು “ಲಕ್ಸೆಂಬರ್ಗ್ ಗಾರ್ಡನ್ನಿಗೆ”, ಆನಿತಾ ಮತ್ತು ಎಲಾಲಿನ್ “ಸಿಟಿ ಸಂದರ್ಶನಕ್ಕೆ” ಮತ್ತು ಗುರು”ಆಂಟಿ ಮನೆಗೆ ಹೋಗಿ ಕಳೆದೆವು” ಎಂದು ಫ್ರೆಂಚಲ್ಲೇ ಉತ್ತರಿಸಿದರು. ಕೊನೆಯದಾಗಿ ನಾನು ನಿಧಾನವಾಗಿ ಫ್ರೆಂಚಲ್ಲಿ “ನಿನ್ನೆ ನಾನು ಇಸಬೆಲ್ಲಾಳೋಡನೆ ದಿನಕಳೆದೆ” ಎಂದುಬಿಟ್ಟೆ. ಮೊದಲೇ ಕೆಂಪು ಕೆಂಪಾಗಿರುವ ಆಕೆಯ ಮುಖ ಮತ್ತಷ್ಟುಕೆಂಪಾಯಿತು. ತರಗತಿಯಲ್ಲಿ ಪೂರ್ಣ ನಿಶ್ಶಬ್ದ. ಮರುಕ್ಷಣ ಕಟ್ಟೆಯೊಡೆದು ಪ್ರವಾಹ ನುಗ್ಗಿ ಬಂದಂತೆ ಮನಸಾರೆ ನಕ್ಕಳು. ಅದೆಷ್ಟು ದಿನದ ದುಗುಡವಿತ್ತೋ ಆಕೆಯಲ್ಲಿ ಕೊನೆಗೆ “ಹೀಗೆ ನನ್ನಲ್ಲಿ ಹೇಳುವ ಧೈರ್ಯ ಯಾರೂ ಈವರೆಗೆ ತೋರಿಸಿಲ್ಲ” ಎಂದು ಫ್ರೆಂಚಲ್ಲಿ ನಿಧಾನವಾಗಿ ಆಕೆ ಹೇಳಿದಾಗ ನಾವೆಲ್ಲ ನಕ್ಕೆವು.
ಶ್ರೀಮತಿಯು ಕುಮಾರಿಯಾದ ಪ್ರಸಂಗವು
ಒಂದೇ ದಿನ ಮೂರು ಪೀರಿಯಡ್ಡುಗಳನ್ನು ತೆಗೆಮಕೊಂಡ ಕ್ರಿಸ್ತೀನಾ ವಾವು”ಮರೆಯಲಾಗದ ಇನ್ನೊಬ್ಬ ಹುಡುಗಿ. ಇಪ್ಪತ್ತನಾಲ್ಕು-ಇಪ್ಪತ್ತೈದರ ಹರೆಯದ ಕ್ರಿಸ್ತೀನಾ ನಮಗೆ ಪಾಠ ಮಾಡಿದ್ದಕ್ಕಿಂತಲೂ ನಮ್ಮಿಂದ ಭಾರತದ ಬಗ್ಗೆ ತಿಳಿದುಕೊಂಡದ್ದೇ ಹೆಚ್ಚು. ಅವಳು ಕೆನಡಾದಲ್ಲಿ ಎರಡು ವರ್ಷ ಇದ್ವವಳಾದುದರಿಂದ ಇಂಗ್ಲೀಷ್ ಚೆನ್ನಾಗಿ ಮಾತನಾಡುತ್ತಿದ್ವಳು. ಇಡೀ ತೋಳು ಮುಚ್ಚುವ ಬಿಳಿ ಶರ್ಟು, ಪಾದದ ವರೆಗೂ ಬರುವ ಗ್ರೇ ಕಲರನ ಪ್ಯಾರಚೂಟು ಲಂಗ, ಇಳಿಬಿಟ್ಟ ಉದ್ವನೆಯ ಕಪ್ಪು ಕೂದಲಿನ ಕ್ರಿಸ್ತೀನಾ ಪಕ್ಕನೆ ನೋಡಿದರೆ ಭಾರತದ ಹೆಣ್ಣಿರಬೇಕೆಂಬ ಸಂಶಯ ಮೂಡಬೇಕು. ಹೆಬ್ಬಾರರಂತೂ ಅವಳನ್ನು ನೋಡಿ”ನಿನ್ನನ್ನು ಕಂಡಾಗ ನನ್ನ ಮಗಳು ಸ್ವಾತಿಯ ನೆನಪಾಯ್ತು. ಥೇಟ್
ನಿನ್ನ ಹಾಗೆ ಅವಳು ಬಣ್ಣವೊಂದನ್ನು ಬಿಟ್ಟು” ಎಂದದ್ದು ಅವಳಲ್ಲಿ ನಮ್ಮೆಲ್ಲರ ಬಗ್ಗೆ ಆತ್ಮೀಯತೆ ಮೂಡಿಸಿತು. ನಮ್ಮನ್ನು ಪ್ಯಾರಿಸ್ಸಿನಲ್ಲಿ ಮಾತಾಡಿಸುವ ದಿಕ್ಕೇ ಇರಲಿಲ್ಲ. ಈಗ ಕ್ರಿಸ್ತೀನಾ ದೊರೆತಾಗ ನಾವೆಲ್ಲರೂ ನಮ್ಮನಮ್ಮ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ, ಭಾರತದ ಬಗ್ಗೆ ಸಾಕಷ್ಟು ಕೊರೆದೆವು.
ಫ್ರೆಂಚಲ್ಲಿ ಆಏವಾಹಿತೆಯರನ್ನು ಮದ್ಮಗೇಲ್ ಎಂದೂ, ವಿವಾಹಿತೆಯರನ್ನು ಮದಾಂ ಎಂದೂ ಕರೆಯುವುದು ವಾಡಿಕೆ. ಕ್ರಿಸ್ತೀನಾ ಎಳೆ ಹುಡುಗಿಯಂತೆ ಕಾಣುತ್ತಿದ್ದುದರಿಂದ ಅವಳು ಅವಿವಾಹಿತಳಿರಬೇಕೆನ್ನುವುದು ನಮ್ಮ ಎಣಿಕೆಯಾಗಿತ್ತು; ಆದರೂ ತಮಾಷೆಗೆಂದು ಆಕೆಯನ್ನು ಮದಾಂ ಎಂದು ಸಂಭೋಧಿಸಿದೆವು. ಆಗವಳು ನಗುತ್ತಾ “ನಾನು ಎರಡು ತಿಂಗಳ ಹಿಂದಿನವರೆಗೂ ಮದಾಂ ಆಗಿದ್ವೆ. ಈಗ ನಾನು ಮದಾಂ ಆಲ್ಲ, ಮದ್ಮಗೇಲ್” ಅಂದಳು.
ನಮಗೆ ಪರಮಾಶ್ಚರ್ಯವಾಯಿತು. ಕುಮಾರಿಯರು ಶ್ರೀಮತಿಯರಾಗುತ್ತಾರೆ. ಶ್ರೀಮತಿಯರಾದವರು ಕುಮಾರಿಯರಾಗುವುದೆಂದರೇನು?” ನೀನು ಹೇಳಿದ್ದು ನಮಗೆ ಅರ್ಥವಾಗಲಿಲ್ಲ” ಎಂದೆವು. ನಮ್ಮ ಸಂಶಯವನ್ನು ನಿವಾರಿಸಲು ಅವಳೆಂದಳು . “ಹೌದು, ಇತ್ತೀಚಿನವರೆಗೂ ನಾನು ಒಬ್ಬನೊಟ್ಟಿಗೆ ಬದುಕುತ್ತಿದ್ದೆ. ಅವನೊಡನಿರುವಾಗ ನಾನು ಮದಾಂ ಆಗಿದ್ದೆ. ಈಗ ನಾವಿಬ್ಬರೂ ಬೇರೆ ಬೇರೆಯಾಗಿದ್ದೇವೆ. ಆದುದರಿಂದ ನಾನೀಗ ಮದ್ಮಗೇಲ್ ಆಗಿದ್ದೇನೆ.”
ಶ್ರೀಮತಿಯರೂ ಕೂಡಾ ಮನಸ್ಸು ಮಾಡಿದರೆ ಕುಮಾರಿಯರಾಗಲು ಪ್ರಾನ್ಸಿನಲ್ಲಿ ಸಾಧೃ!
ಹೆಬ್ಬಾರರು ವಿಷಯವನ್ನು ಅಲ್ಲಿಗೆ ಬಿಡಲಿಲ್ಲ. “ನೀವು ಬೇರೆಯಾಗುವುದಕ್ಕೇನು ಕಾರಣ?
ನನ್ನ ಪ್ರಶ್ನೆಯನ್ನು ಆಧಿಕಪ್ರಸಂಗಿತನ ಎಂದು ಭಾವಿಸಬೇಡ. ನಮಗೆಲ್ಲಾ ನಿಮ್ಮ ದೇಶದ ಸಂಸ್ಕೃತಿ ತಿಳಿಯುವ ಆಗಾಧ ಕುತೂಹಲವಿದೆ. ಆದಕ್ಕಾಗಿ ಕೇಳಿದೆ.”
“ಯಾಕೆಂದರೆ ನಾನು ಅವನನ್ನು ಮದುವೆಯಾಗಬಯಸಿದೆ. ಅವನಿಗದು ಇಷ್ಟವಿರಲಿಲ್ಲ.. ಆದಕ್ಕೂ ಕಾರಣವಿದೆ. ಇಲ್ಲಿ ನಾವು ನಮ್ಮ ಇಷ್ಟ ಬಂದವದಿಗೆ ಇಷ್ಟ ಬಂದಷ್ಟು ಕಾಲ ಇಷ್ಠ, ಬಂದ ಹಾಗೆ ಇರಬಹುದು. ನಿಮ್ಮ ದೇಶದ ಹಾಗೆ ಮದುವೆ ಇಲ್ಲಿ ಕಡ್ಡಾಯವಲ್ಲ. ಮದುವೆಯಾಗದೆ ಒಟ್ಟಿಗೆ ಇರುವವರು ಯಾವಾಗ ಬೇಕಾದರೂ ಪ್ರತ್ಯೇಕವಾಗಬಹುದು. ಆದಕ್ಕೆ ಯಾವ ಅಡ್ಡಿಯೂ ಇರುವುದಿಲ್ಲ. ಆದರೆ ಮದುವೆಯಾದವರು ಡೈವೋರ್ಸು ಮಾಡಬೇಕಾದರೆ ಕಾನೂನು ಕಟ್ಟಳೆಯನ್ನು
ಅನುಸರಿಸಬೇಕು. ಆದು ತುಂಬಾ ತೊಡಕಿನ ವಿಷಯ. ಅದಕ್ಕೇ ಅವನು ಮದುವೆಯ ಪ್ರಸ್ತಾಪ ಎತ್ತಿದಾಗ ನನ್ನನ್ನೇ ಬಿಟ್ಟುಬಿಟ್ಟ”
“ಈಗ ಅವನೆಲ್ಲಿದ್ದಾನೆ?” ನಾವೆಲ್ಲಾ ಒಟ್ಟಿಗೆ ಕೇಳಿದೆವು
“ಇಲ್ಲೇ ಪ್ಯಾರಿಸ್ಸಿನಲ್ಲೇ, ಆವನಿಗೆ ಇನ್ನೊಬ್ಬಳು ಸಿಕ್ಕಿದ್ದಾಳೆ. ಅವಳು ಮದುವೆಯ ಪ್ರಸ್ತಾಪ ಎತ್ತುವವರೆಗೆ ಅವನು ಅವಳ ಕೈ ಬಿಡಲಾರ. ಈ ವಿಷಯದಲ್ಲಿ ನೀವು ಭಾರತೀಯರು ಸುಖಿಗಳು:. ನಿಮಗಿಷ್ಟವಾದವರನ್ನು ಮದುವೆಯಾಗಿ ಸುಖಸಂಸಾರ ನಡೆಸುತ್ತೀರಿ ಸಾಯುವವರೆಗೂ. ಇಲ್ಲಿ ಹಾಗಿರುವುದು ಬಹುದೊಡ್ಡ ಸಾಧನೆ.”
ಭಾರತದಲ್ಲಿ ತಮಗಿಷ್ಟವಾದವರನ್ನೇ ಮದುವೆಯಾಗುವ ಭಾಗ್ಯ ಅದೆಷ್ಟು ಮಂದಿಗಿರುತ್ತದೆ? ದೇಹವನ್ನು ಒಬ್ಬರಿಗೆ, ಮನಸ್ಸನ್ನು ಇನ್ನೊಬ್ಬರಿಗೆ ಕೊಟ್ಟು ಹೇಗೋ ಬದುಕು ಸಾಗಿಸುವ ಆದೆಷ್ಟು. ಮಂದಿ ನಿಮ್ಮಲ್ಲಿಲ್ಲ? ಯಾರಾದರೂ ತಮಗಿಷ್ಟ ಬಂದವರನ್ನು ಮದುವೆಯಾಗಿ ಸುಖವಾಗಿರಲು ಹೊರಟರೆ ಅವರಿಗೆ ಅದೆಷ್ಟು ಅಡ್ಡಿ ಆತಂಕಗಳು? ಪ್ರೇಮಕ್ಕಾಗಿ ಆದೆಷ್ಟು ಜೀವಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ?
ಆದರೂ ಭಾರತದ ಸಾಮಾಜಿಕ ಜೀವನದ ಬಗ್ಗೆ ಅವಳಲ್ಲಿ ಒಳ್ಳೆಯ ಅಭಿಪ್ರಾಯವೇ ಇರಲಿ ಎಂದು ಸುಮ್ಮನಾದೆವು. ಆದರೆ ಹೆಬ್ಬಾರರು ಒಂದು ಪ್ರಶ್ನೆಯನ್ನು ಎಸೆದೇ ಬಿಟ್ಟರು. “ಮುಂದೇನು: ಮಾಡುತ್ತಿಯಾ? ” ಅದಕ್ಕವಳು ” ಕೆನಡಾಕ್ಕೆ ಮತ್ತೆ ಹೋಗುತ್ತೇನೆ. ಆಗ ಇವನು ಕಣ್ಣಿಗೆ ಬೀಳುವುಧು ತಪ್ಪುತ್ತದೆ. ಇನ್ನು ಯಾರ ಜತೆಯೂ ಇರುವುದಿಲ್ಲ. ಆಗುವುದಿದ್ವರೆ ಮದುವೆ ಮಾತ್ರ. ಪ್ರೀತಿಯೇ ಇಲ್ಲದ ಜೀವನಕ್ಕೆ ಅರ್ಥವೇ ಇಲ್ಲ ಎನ್ನುವುದು ನನಗೀಗ ಮನದಟ್ಟಾಗಿದೆ ” ಎಂದಳು.
ಅವಳು ಪಾಠ ಮುಗಿಸಿ ಹೊರಟಾಗ ಹಣೆಗೆ ಬಿಂದಿ ಇಟ್ಟು ಕೈಗೆ ರಕ್ಷೆ ಕಟ್ಟಿ ಆದರ ಆರ್ಥ ವಿವರಿಸಿದಾಗ ಅವಳಿಗೆ ತುಂಬಾ ಖುಷಿಯಾಯಿತು. “ನನಗೆ ಇಂತಹ ಪ್ರೀತಿ ಹೊಸದು” ಎಂದಳು: ಆಕೆ ಪ್ರಾಮಾಣಿಕ ಸ್ವರದಲ್ಲಿ. ಹೆಬ್ಬಾರರು ಆವಳ ತಲೆ ಮೇಲೆ ಕೈ ಇರಿಸಿ “ನಿನ್ನನ್ನು ಮಗಳೆಂದೇ ತಿಳಿದು.. ಆಶೀರ್ವದಿಸುತ್ತಿದ್ದೇನೆ. ನಿನಗೆ ಶೀಘ್ರ ಮದುವೆಯಾಗಲಿ” ಎಂದರು. ಮದುವೆ ಚಪ್ಪಠದಲ್ಲಿ ಹೆಣ್ಣಿಳಿಸಿಕೊಡುವ ಕನ್ಯಾಪಿತೃನಂತಿತ್ತು ಆಗ ಅವರ ಮುಖಭಾವ! ಆ ಕ್ಷಣದಲ್ಲಿ ಕ್ರಿಸ್ತೀನಾಳ ಕಣ್ಣಲ್ಲಿ ನೀರು ಜಿನುಗಿತು. ವಿಶ್ವದ ಅತಿ ದುಬಾರಿ ನಗರದಲ್ಲಿ, ವಿಲಾಸೋನ್ಮತ್ತತೆಯೇ ಜೀವನದ ಏಕೈಕ
ಉದ್ದೇಶವೆಂಬಂತಿರುವ ಪ್ಯಾರಿಸ್ಸಿನಲ್ಲಿ, ಇಂತಹಾ ಒಂದು ಭಾವುಕ ಕ್ಷಣ ನಮಗೆದುರಾಗಬಹುದೆಂಬ ಕಲ್ಪನೆ ಆವರೆಗೂ ಬಂದಿರಲಿಲ್ಲ,
ನಮಗೆ ಫ್ರೆಂಚ್ ಕಲಿಸಿದವರಲ್ಲಿ ನಾವೆಲ್ಲಾ ಅತ್ಕಂತ ಹೆಚ್ಚು ಮೆಚ್ಚಿಕೊಂಡದ್ದು ಕುಳ್ಳಿ ಏಂಜೆಲಾಳನ್ನು. ನಮ್ಮೈವರಿಗಿಂತಲೂ ವಯಸ್ಸಿನಲ್ಲಿ ಚಿಕ್ಕವಳಾದ ಅವಳಿಗೆ ನಮ್ಮನ್ನು ನಿಭಾಯಿಸುವುದು ಕಷ್ಪವಾದೀತೆಂದು ನಾನು ಭಾವಿಸಿದ್ದೆ. ಆದರೆ ಅವಳು ಆಪ್ಪಟ ಮೇಡ೦! ಅವಳಿಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಕಷ್ಟಪಟ್ಟು ಅರ್ಥಮಾಡಿಕೊ೦ಡರೂ, ಉತ್ತರ ಕೊಡಲು ಆವಳಿಗಾಗುತ್ತಿರಲಿಲ್ಲ. ಕೆಂಪು ಕೆಂಪು ರಸಭರಿತ ಟೋಮೆಟೋದಂತಿದ್ವ ಏಂಜೆಲಾಳದು ಸದಾ ನಗುಮುಖ. ಅವಳು ಪಾಠ ಮಾಡುತ್ತಿದ್ವ ಕ್ರಮ ತುಂಬಾ ವಿಶಿಷ್ಟವಾದುದು. ನಾವೇ ಪರಸ್ಪರ ಪ್ರಶ್ನೆ ಹಾಕಿಕೊ೦ಡು ನಾವೇ ಉತ್ತರಿಸುವ೦ತೆ ಆಕೆ ಮಾಡಿಬಿಡುತ್ತಿದ್ವಳು. ಫ್ರೆಂಚರು ‘ರ’ ಅಕ್ಷರವನ್ನು ಉಚ್ಚರಿಸುವಾಗ ‘ಹ’ಎಂದೇ ಕೇಳಿಸುತ್ತದೆ. ನಮ್ಮಲ್ಲಿ ಸಣ್ಣವನಾದ ಗುರುವನ್ನು ಉದ್ದೇಶಿಸಿ ಆವಳು ಆಗಾಗ ‘ಊನ್ ಕ್ವಿಶ್ಚಿಯೋನ್ ಗುಹೂ “(ಒಂದು ಪ್ರಶ್ನೆ ಕೇಳು ಗುರು) ಎಂದು ಹೇಳುತ್ತಿದ್ದುದೇ ಒಂದು ಸೊಗಸು. ಪ್ರವಾಸದುದ್ದಕ್ಕೂ ಗುರುವನ್ನು ಛೇಡಿಸ ನಮಗಿದೊಂದು ಅಸ್ತ್ರ ಸಿಕ್ಕಿಯೇ ಬಿಟ್ಟಿತು.
ಮುಂದೆ ತುಲೋಸಿನಲ್ಲಿ ನಾವು ನಮ್ಮ ಪರಿಚಯ ಭಾಷಣವನ್ನು ಫ್ರೆಂಚಿನಲ್ಲಿ ಮಾಡಬೇಕಾದುದು ಹೇಗೆಂಬುದನ್ನು ಈಕೆ ನಮಗೆ ಹೇಳಿಕೊಟ್ಟಳು. ಮಂಗಳೂರು ರಾಮಚಂವ್ರರ ಸಹಾಯದಿಂದ ನಾನು ಸಿದ್ಭಪಡಿಸಿದ್ವ ತರ್ಜುಮೆಯನ್ನು ಓದಿ ಹೇಳುವಾಗ ಆವಳಿಗೆ ತುಂಬಾ ಸಂತೋಷವಾಯಿತು. “ಎಷ್ಟೊಂದು ಪ್ರಯತ್ನಪಟ್ಟಿದ್ದಿ ನೀನು” ಎ೦ದು ಮೆಚ್ಚುಗೆ ಸೂಚಿಸಿದಳು. ಮು೦ದೆ ಪ್ರವಾಸದುದ್ದಕ್ಕೂ ಏಂಜೆಲಾ ಹೇಳಿಕೊಟ್ಟದ್ದು ನಮ್ಮ ಉಪಕಾರಕ್ಕೆ ಬ೦ತು. ನಮಗೆ ಗೊತ್ತಿದ್ವ ಅಲ್ಪ ಸ್ವಲ್ಪ ಫ್ರೆಂಚು ನಮಗೆ ಅಪಾರ ಸ್ನೇಹಿತರನ್ನು ದೊರಕಿಸಿಕೊಟ್ಟಿತು. ಪ್ಯಾರಿಸ್ಸು ಬಿಡುವಾಗ ಏಂಜೆಲಾಳಿಗೆ ಬಿ೦ದಿ, ರಕ್ಷೆ ಮತ್ತು ಭಾರತದ ಧ್ವಜದೊಡನೆ ಇನ್ನಿತರ ಉಡುಗೊರೆಗಳನ್ನು ನೀಡಿ ಅವಳೊಡನೆ ಒಂದು ಫೋಟೋ ಹೊಡೆಸಿಕೊಂಡೆವು. ಭಾರತೀಯರ ಈ ಭಾವುಕತೆ ಏಂಜೆಲಾಳಿಗೆ ಅಪರಿಮಿತ ಆನಂದವನ್ನುಂಟುಮಾಡಿತು
ಫ್ರೆಂಚ್ ಹಪ್ಪಳದ ಸವಿ
ಬರ್ಲಿಟ್ಜ್ ಸಂಸ್ಥೆ ನಮಗೆ ಮಧ್ಯಾಹ್ನ ಮತ್ತು ರಾತ್ರಿಯೂಟಕ್ಕೆ ಮೂರು ರೆಸ್ಟುರಾಗಳನ್ನು ತೋರಿಸಿತ್ತಷ್ಟೇ? ಅವುಗಳಲ್ಲಿ ನಮಗೆ ಹಿಡಿಸಿದ್ದು ಚೈನೀ ರೈಸ್ಟುರಾ ಮಾತ್ರ. ಅಲ್ಲಿ ಫ್ರೈಡ್ ರೈಸ್ ದೊರೆಯುತ್ತಿದ್ದುದೇ ಅದಕ್ಕೆ ಕಾರಣ. ಆದು ಭಾರತದ ಬಸುಮತಿ ಆಕ್ಕಿಯಿಂದ ಮಾಡಿದ್ದು! ಆ ರೆಸ್ಟುರಾದ ಮಾಲಿಕ ಒಬ್ಬ ಥಾಯಿ. ಯಾವಾಗಲೂ ನೀಲಿಕೋಟು ಧರಿಸಿ ಕಂಪು ಟೈಕಟ್ಟಿ ಸರಸರ ನಡೆಯುವ ತೆಳ್ಳನೆಯ ಚುರುಕಿನ ಈತ ಕಪ್ಪಪಟ್ಟು ನಮ್ಮ ಇಂಗ್ಲೀಷ್ ಅರ್ಥಮಾಡಿಕೊಳ್ಳುತ್ತಿದ್ದ ಮತ್ತು
ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದ. ನಮ್ಮ ತಂಡದಲ್ಲಿ ನನಗೆ ಮತ್ತು ಹೆಬ್ಬಾರರಿಗೆ ಸಸ್ಯಾಹಾರವೇ ಆಗಬೇಕು. ಅವನಿಗೆ ಸಸ್ವಾಹಾರದ ಅರ್ಥಮಾಡಿಸಲು ಸ್ವಲ್ಪ ಕಷ್ಟವೇ ಆಯಿತು. ಕೊನೆಗೆ ನೋ ಫಿಶ್, ನೋ ಮೀಟ್ ಎಂದಾಗ ಅವನಿಗೆ ಗೊತ್ತಾಯಿತು. ಅವನ ಕೋಟಿನ ಮೇಲೆಲ್ಲಾ ವಿವಿಧ ಮಾದರಿಯ ಪದಕಗಳು ಮತ್ತು ಬ್ಯಾಜುಗಳು. “ನೀನು ಸೇನೆ- ಯಲ್ಲಿದ್ದೆಯಾ?” ಎಂದಾಗ ಆತ ನಕ್ಕು “ಇಲ್ಲ, ಇಲ್ಲ. ಇದು ನನ್ನ ಸೇವೆಗೆ ಮೆಚ್ಚಿ ನಿಮ್ಮಂತಹವರು ಕೊಟ್ಟಿದ್ದು” ಎಂದ.
ಮೂಲತಃ ಏಶಿಯನ್ ಆದ ಆತನಿಗೆ ನಮ್ಮ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ ಇತ್ತು. ನಮಗೆ ಒಗ್ಗುವ ಊಟ. ನೀಡಲು ಆತ ಇನ್ನಿಲ್ಲದ ಯತ್ನ ಮಾಡುತ್ತಿದ್ದ. ಯಾವುದೋ ಎಣ್ಣೆಯಲ್ಲಿ ಕರಿದ ಅನ್ನ, ಹದವಾಗಿ ಬೇಯಿಸಿದ ಬೀನ್ಸ್, ಬಟಾಟೆ ಮತ್ತು ಟೊಮೇಟೊ, ಸೋಯಾ ಹಾಲು, ಆಫ್ರಿಕನ್ ರಾಷ್ಟ್ರಗಳಿಂದ ತರಿಸಿದ ಬಾಳೆಹಣ್ಣು, ಮಾವಿನ ಹಣ್ಣು ಮತ್ತು ಪಪ್ಪಾಯಿ, ತೆಂಗಿನ ಕಾಯ್ ಐಸ್‍ಕ್ರೀಂ ಕೊಟ್ಟು ನಮ್ಮ ಆರೋಗ್ಯ ಸಂರಕ್ಷಿಸುತ್ತಿದ್ದ ಏನನ್ನು ಕೇಳಿದರೂ ನಗುತ್ತಾ ಆತ ‘ನೋಪ್ರಾಬ್ಲಂ’ ಅನ್ನೋದು ಒಂದು ಸೊಗಸಾದರೆ, ಬಾಳೆಹಣ್ಣನ್ನು ನಾಜೂಕಾಗಿ ಚಕ್ರಾಕಾರವಾಗಿ ಆತ ತುಂಡರಿಸುವಾಗ “ಕಟ್ಕಟ್ಕಟ್’ ಎಂದು ವೇಗವಾಗಿ ಹೇಳುತ್ತಿದ್ದುದು ಇನ್ನೊಂದು ಸೊಗಸು. ಆದರೆ ಆಲ್ಲಿ ಬಾಳೆಹಣ್ಣೊಂದಕ್ಕೆ ಐದು ಫ್ರಾಂಕುಗಳು (ಮೂವತ್ತೈದು ರೂಪಾಯಿ). ಮಾವಿನ ಹಣ್ಣಿಗೆ ಹತ್ತು ಪ್ರಾಂಕುಗಳು (ಎಪ್ಪತ್ತು
ರೂಪಾಯಿ). ” ಇದ್ಯಾಕೆ ಇಷ್ಟೊಂದು ರೇಟು” ಎಂದು ಕೇಳಿದಾಗ ಆತ “ರೆಸ್ಟುರಾಗಳಲ್ಲಿ ಹಾಗೆ. ನಿಮಗೆ ಸೂಪರ್ ಮಾರ್ಕೆಟ್ಟುಗಳಲ್ಲಿ ಒಂದು ಫ್ರಾಂಕಿಗೊಂದು ಮಾವಿನ ಹಣ್ಣು ದೊರೆಯುತ್ತದೆ ” ಎಂದು ನಿಜ ನುಡಿದ. ನಮ್ಮ ಟಕ್ಕೆಕೂಪನ್ ಕೊಡುವ ಬದಲು ಹಣವನ್ನೇ ನೀಡುತ್ತಿದ್ವರೆ ನಾನು ಹೆಬ್ಬಾರರೊಡನೆ ರೆಸ್ಟುರಾದ ಬದಲು ಸೂಪರ್ ಮಾರ್ಕೆಟ್ಟಿಗೆ ಹೋಗಿಬಿಡುತ್ತಿದ್ದೆ. ಆದರೆ ಆ ಥಾಯಿ ಕೊಟ್ಟ ಈ ಮಾಹಿತಿ ಮುಂದೆ ಕಾಸ್ಮೋಸ್ ಪ್ರವಾಸದ ಸಂದರ್ಧದಲ್ಲಿ ನಮ್ಮ ಪ್ರಯೋಜನಕ್ಕೆ ಬಂತು.
ಒಂದು ದಿನ ಅವನ ರೆಸ್ಟುರಾದಲ್ಲಿ ಊಟಕ್ಕೆ ಕೂತಿದ್ದಾಗ, ಬಲಬದಿಯ ಟೇಬಲ್ಲನ್ನು ಆಕ್ರಮಿಸಿದ್ವ ಒಬ್ಬ ಕರಿಯ ಧಡಿಯ ನಮ್ಮ ಗಮನ ಸೆಳೆದ. ಆತ ಕಂಠಪೂರ್ತಿ ಕುಡಿದು ಯಾರ್ಯಾರನ್ನೋ ಬಯ್ಯುತ್ತಿದ್ದ. ಅಂತಹ ಒಂದು ದೃಶ್ಯ ಪ್ಯಾರಿಸ್ಸಿನಲ್ಲಿ ನಮ್ಮ ಕಣ್ಣಿಗೆ ಬಿದ್ದುದು ಅದೇ ಮೊದಲು. ಅವನ ಬೊಬ್ಬೆ ಅತಿಯಾದಾಗ ಥಾಯಿ ಹೋಗಿ ಅವನನ್ನು ನಯವಾಗಿ ಎಬ್ಬಿಸಿದ. ಅತ ಬಿಲ್ಲು ಕೂಡಾ ಕೊಡದೆ ಹೋಗಿಯೇಬಿಟ್ಟ. ಥಾಯಿಯ ಮುಖದಲ್ಲಿ ಸ್ಥಿತಪ್ರಜ್ಞತೆ. “ಹಣ ಕಳ್ಕೊಂಡುಬಿಟ್ಟೆಯಲ್ಲಾ?” ಎಂದು ಕೇಳಿದಾಗ “ಪುಣ್ಯಕ್ಷ್ಕೆ ಹೋಟೆಲು ಸಾಮಾನು ಹಾಳುಮಾಡದೆ ಹೋದನಲ್ಲಾ ಆದೇ ತೃಪ್ತಿ ನನಗೆ. ಪ್ಯಾರಿಸ್ಸಿನಲ್ಲಿ ಆಲ್ಜೀರಿಯನ್ಸ್ ತುಂಬಾ ಇದ್ದಾರೆ. ಒಂದು ಕಾಲದಲ್ಲಿ ಆಲ್ಜೀರಿಯಾ ಪ್ರಾನ್ಸಿನ ವಸಾಹತು ಆಗಿತ್ತು. ಈಗ ಅಲ್ಲಿ ಯಾದವೀಕಲಹ ನಡೆಯುತ್ತಿದೆ. ಅಲ್ಜೀರಿಯನ್ಸ್ ಹಡಗು ಹತ್ತಿ ಇಲ್ಲಿಗೆ ಬಂದುಬಿಡುತ್ತಾರೆ. ಅವರಲ್ಲಿ ತುಂಬಾ ಮಂದಿ ಭಯೋತ್ಪಾದಕರಾಗಿ ಬಿಟ್ಟಿದ್ದಾರೆ. ಪ್ಯಾರಿಸ್ಸಿನಲ್ಲಿ ಮೊದಲು ಶಾಂತಿಯಿತ್ತು. ಈಗ ರಿವಾಲ್ಪರು, ಬಾಂಬು ಎಲ್ಲಾ ಇವೆ. ಇವನನ್ನು ನಾನು ಪೋಲಿಸರಿಗೆ ಒಪ್ಪಿಸಬಹುದಿತ್ತು. ಮುಂದೊಂದು ದಿನ ಇವ ನನ್ನ ರೆಸ್ಟುರಾಕ್ಕೇ ಬಾಂಬು ಹಾಕ್ಯಾನು. ಸುಮ್ಮನೆ ಯಾಕೆ ಈ ತೊಂದರೆ ಎಂದು ಅವನನ್ನು ನಯವಾಗಿಯೇ ಸಾಗಹಾಕಿದೆ” ಎಂದ. ಆ ಕುಡುಕ ಹಣವಿಲ್ಲದ್ದಕ್ಕೆ ಆ ಹೂಟ ಹೂಡಿರಬಹುದೇ ಎಂಬ ಸಂಶಯ ಮಾತ್ರ ಇಂದಿಗೂ ನನ್ನಲ್ಲಿ ಹಾಗೆಯೇ ಉಳಿದಿದೆ.
ಥಾಯಿಯ ರೆಸ್ಟುರಾದ ಹಪ್ಪಳದ ಸವಿಯನ್ನು ಮಾತ್ರ ನಾವ್ಯಾರೂ ಮರೆಯುವಂತೆಯೇ ಇಲ್ಲ. ಪ್ಯಾರಿಸ್ಸಿನಲ್ಲಿ ನಮ್ಮ ಪ್ರಥಮ ರಾತ್ರಿಯಂದು ನಾವು ಭೋಜನಕ್ಕೆ ಹೋದಾಗ, ಥಾಯಿ ಆರಂಭದಲ್ಲಿ ಒಂದು ಪ್ಲೇಟು ತುಂಬಾ ಹಪ್ಪಳ ತಂದಿಟ್ಟ. ಬಹಳ ರುಚಿಕರವಾಗಿದ್ದ ಆ ಹಪ್ಪಳ ಬಹಳಬೇಗ ಖರ್ಚಾಗಿ ಎರಡನೇ ಪ್ಲೇಟು ತರಿಸಿದೆವು. ಊಟದ ಕೊನೆಯಲ್ಲಿ ಆತ ಫ್ರುಟ್ಸಲಾಡ್ ತಂದಿಟ್ಟ. ನಾವೆಲ್ಲಾ ಅದನ್ನು ತಿನ್ನುತ್ತಿದ್ದಂತೆ ” ಯಾವ್ಯಾವ ಹಣ್ಣಿದೆ”ಎಂದು ಹೆಬ್ಬಾರರು ಅವನನ್ನೇ ಕೇಳಿದರು. “ಚೆರ್ರಿ, ಪ್ಪಂ ಮಾವಿನ ಹಣ್ಣು , ಪಪ್ಪಾಯಿ, ಸೇಬು ಮತ್ತು ಆನನಾಸು” ಆಂದ ಅಂತ. ಹೆಬ್ಬಾರರಿಗೆ ಸಂಕಟ್ಟಕ್ಕಿಟ್ಟುಕೊಂಡಿತು. ಹಿಂದೆ ಕಾಶಿಗೆ ಹೋಗಿದ್ದಾಗ ವಿಶ್ವನಾಥನ ಪ್ರೀತ್ಯರ್ಥ ಆನನಾಸನ್ನು ತ್ಕಜಿಸಿ ಬಂದವರು ಅವರು. ಕೊನೆಗೆ ಅವರು ಅನನಾಸು ತುಂಡುಗಳನ್ನು ತೆಗೆದು ಉಳಿದುದನ್ನು ತಿಂದರು.
ಮರುದಿನ ಮಧ್ಯಾಹ್ನ ಇತಾಲಿಯನ್ ರೆಸ್ಟುರಾಕ್ಕೆ ಹೋಗಿ ಸ್ಪೆಷಲ್ ಪಿಝಾಕ್ಕೆ ಆರ್ಡರ್ ಮಾಡಿದೆವು. ಶುದ್ಧ ಸಸ್ಯಾಹಾರಿ ಹೆಬ್ಬಾರರು ‘ನೊಂ ಫಿಶ್, ನೋ ಮೀಟ್’ ಎಂದು ಹೇಳಲು ಮರೆತಿರಲಿಲ್ಲ. ಮೊಟ್ಟೆಯನ್ನು ಇಡೀಕೋಳಿಯೆಂದು ಕರೆಯದೆ ಸಸ್ಯಾಹಾರದ ಸಾಲಿಗೆ ಸೇರಿಸಿದರೆ ನಾನೂ ಶುದ್ಧ ಸಸ್ಕಾಹಾರಿಯೇ! ಹಾಗಾಗಿ ಹೆಬ್ಬಾರರು ‘ನೋ ಫಿಶ್, ನೋ ಮಿಆಟ್’ ಎಂದು ಹೇಳಲು ಮರೆತಲ್ಲಿ ನಾನು ಹೇಳಿಬಿಡುತ್ತಿದ್ದೆ. ಆರ್ಡರ್ ಮಾಡಿದ ಅರ್ಧ ಗಂಟೆಯಲ್ಲಿ ಈರುಳ್ಳಿ ದೋಸೆಯಂತಹ ವಸ್ತು ನಮ್ಮೆದುರು ಬಂತು. ನಾವು ಬಾಯಿ ಚಪ್ಪರಿಸಿ ತಿಂದೆವು. ತಿಂದಾಗಿ ಹೊರಬರುವ ಮೊದಲು ರೆಸ್ಟುರಾದ ಕುಳ್ಳ ಯಜಮಾನನಲ್ಲಿ” “ಇದ್ದ ಶುದ್ಧ ಸಸಾಲಿಹಾರತಾನೆ? “ಎಂದು ಕೇಳಿದೆವು. ಆತ ಆದಕ್ಕೆ “ಇದೇನು
ಸರ್ ಹೀಗೆ ಕೇಳುತ್ತೀರಿ? ಅದರಲ್ಲಿದ್ದದ್ದು ಟೊಮೆಟೋ ಮತ್ತು ನೀರುಳ್ಳಿ ಸರ್. ತಳಭಾಗದಲ್ಲಿ ಸ್ವಲ್ಪ ಮೊಟ್ಟಿಯ ರಸ. ಹಂಡ್ರೆದ್ ಪರ್ಸೆಂಟ್ ವೆಚಿಟೇರಿಯನ್” ಆಂದ! ಮೊಟ್ಟಿಯನ್ನು ಸಸ್ಯಾಹಾರವೆಂಮ ಒಪ್ಪದ ಹೆಬ್ಬಾರರಿಗೆ ಹೇಗಾಗಬೇಡ? ಬರುವಾಗ ಅವರೆಂದರು. ಮೊಟ್ಟೆಯನ್ನು ಹಸಿಯಾಗಿ ತೆಗೆದುಕೊಳ್ಳಲು ನನ್ನಿಂದ ಸಾಧೃವೇ ಇಲ್ಲ. ಪಿಝಾ ಅಥವಾ ಕೇಕ್ನಲ್ಲಿ ಯಾದರೆ ತೊಂದರೆಯಿಲ್ಲ ಇಲ್ಲದಿದ್ದರೆ ಈ ದೇಶದಲ್ಲಿ ಬದುಕೊಂದು ಕಷ್ಟವೆಂದು ಕಾಣುತ್ತದೆ.”
ಆಂದು ಸಂಜೆ ಥಾಯಿಯ ಚೈನೀಸ್ ರೆಸ್ಟುರಾಕ್ಕೆ ಊಟಕ್ಕೆ ಹೋದೆವು. ನಮ್ಮ ವಲಲ ಥಾಯಿ ನಿನ್ನೆ ನೀಡಿದಂತಹದ್ದೇ ಹಪ್ಪಳ ತಟ್ಟೆಯಲ್ಲಿ ತಂದಿಟ್ಟ. ಅದರ ರುಚಿಯನ್ನು ಆಸ್ವಾದಿಸುತ್ತಾ ಹೆಬ್ಬಾರರು ಇಂತಹ ಹಪ್ಪಳ ಭಾರತದಲ್ಲಿ ನಾನು ಈವರೆಗೆ ತಿಂದಿಲ್ಲ. ಏನೇನು ಹಾಕುತ್ತಿ ಇದಕ್ಕೆ?” ಎಂದು ಕೇಳಿಬಿಟ್ಟರು. ಆತ ಏನೇನೋ ಹೇಳಿದ. ಅವುಗಳಲ್ಲಿ ಆಕ್ಷೇಪಾರ್ಹವಾದವುಗಳೇನೂ ಇರಲಿಲ್ಲ. ಕೊನೆಗೆ ಆವನು “ಸ್ಪಲ್ಪ ಸಿಗಡಿ(ಎಟ್ಟಿ) ಹುಡಿ ರುಚಿಗಾಗಿ ಸೇರಿಸುತ್ತೇನೆ” ಎಂದ.
‘ಛೆ! ಇವನಲ್ಲಿ ಕೇಳಿ ಮೋಸವಾಯಿತು” ಎಂದರು ಹೆಬ್ಬಾರರು. ಅಲ್ಲಿಗೆ ನನಗೆ ಮತ್ತು ಹೆಬ್ಬಾರರಿಗೆ ಪ್ಯಾರಿಸ್ಸಿನ ಹಪ್ಪಳದ ಋಣ ಹರಿದುಹೋಯಿತು.!
ನಾವು ಪ್ಯಾರಿನ್ಸ್ ಬಿಡುವ ಮುನ್ನಾದಿನ ಇಸ್ಟು ದಿನ ನಮ್ಮನ್ನು ಸಾಕಿದ ಚೈನೀಸ್ ರೆಸ್ಟುರಾದ ಥಾಯಿಯ ಹೋಟೆಲಲ್ಲಿ ಗ್ರೂಪ್ ಫೋಟೋ ತೆಗೆಯಿಸಿಕೊಂಡೆವು. ನಾವು ಅವನನ್ನು ತುಂಬಾ ಹಚ್ಚಿಕೊಂಡಿದ್ದೆವು. ಆಗಲುವಾಗ ಅವನನ್ನು ಆಪ್ಪಿಕೊಂಡು “ನೀನೊಬ್ಬ ಥಾಯಿ. ಕನ್ನಡದಲ್ಲಿ ‘ತಾಯಿ’ ಅಂದರೆ ಹೊತ್ತು, ಹೆತ್ತು, ಸಾಕಿದವಳು ಎಂದರ್ಥ. ನೀನು ತಾಯಿಯ ಹಾಗೆ ನಮ್ಮನ್ನು ಏಳು ದಿನ ನೋಡಿಕೊಂಡಿದ್ದೀಯಾ. ನಮ್ಮ ದೇಶದಲ್ಲಿ ಊಟ ಕೊಟ್ಟವರಿಗೆ “ಅನ್ನದಾತಾ ಸುಖೀಭವ” ಎಂದು ಹಾರೈಸುತ್ತೇವೆ. ಇದು ನಿನಗೆ ನಮ್ಮೆಲ್ಲರ ಹಾರೈಕೆ” ಆಂದೆ. ನಮ್ಮ ಊಟದ ಬಿಲ್ಲಿನಲ್ಲಿ ನಲ್ಪತ್ತು
ಪ್ರಾಂಕುಗಳು ಉಳಿದಿದ್ದವು. ಅವನ್ನು ಆವನಿಗೇ ಕೊಟ್ಟೆವು. ಕೈಗೆ ರಾಖಿ ಕಟ್ಟಿ, ಭಾರತದ ಧ್ವಜವೊಂದನ್ನು ನೀಡಿದಾಗ ಆವನ ಮುಖದಲ್ಲಿ ಧನ್ಯತಾಭಾವವಿತ್ತು. ಅವನಿಂದ ಬೀಳ್ಕೊಂಡು ಹೊರಗೆ ಬಂದು ರಸ್ತೆಯಂಚಿನಲ್ಲಿ ತಿರುಗಿ ನೋಡಿದರೆ ಆ ಥಾಯಿ ರೆಸ್ಟುರಾದ ಬಾಗಿಲಲ್ಲಿ ನಿಂತು ನಮಗೆ.ಕೈ ಬೀಸುತ್ತಲೇ ಇದ್ದ!
******