ಸಮುದ್ರ ನೀರು ಲವಣಾಂಶಗಳಿಂದ ಕೂಡಿದ್ದರಿಂದ ಕುಡಿಯಲು ಯೋಗ್ಯವಲ್ಲ ವೆಂಬುದು ಎಲ್ಲರಿಗೂ ಗೊತ್ತಾದ ವಿಷಯ. ನೀರಿನ ಬರವನ್ನು ನೀಗಿಸಲು ಇನ್ನೊಂದು ದಿಕ್ಕಿನ ಪ್ರಯೋಗದ ಪ್ರತಿಫಲವೇ ಸಮುದ್ರನೀರನ್ನು ಕುಡಿಯಲು ಯೋಗ್ಯವನ್ನಾಗಿ ಮಾಡುವುದು.
ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಮುದ್ರದ ನೀರನ್ನು ಅಣು ಶಕ್ತಿಯಿಂದ ನಿರ್ಲವಣೀಕರಿಸಲು (ಡಿಸ್‌ರೈನೇಷನ್) ಹೊರಟಿದ್ದಾರೆ. ಅಣು ಶಕ್ತಿಯಿಂದ ನೀರನ್ನು ತಯಾರಿಸುವದಕ್ಕೆ ಸಮಾಲೋಚಿಸಲು ವಿಶ್ವದ ವಿಜ್ಞಾನಿಗಳು “ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ” ಅಡಿಯಲ್ಲಿ ಸೇರಿ ಅಪಾಯವಿಲ್ಲವೇ ನೀರನ್ನು ಪಡೆಯಬಹುದೆಂದು ತೀರ್ಮಾನಕ್ಕೆ ಬಂದರು. ಕ್ರಿ.ಶ. 1900 ರಿಂದ 1995 ರ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆಗೆ 3 ಪಟ್ಟು ಹೆಚ್ಚಾದರೆ ನೀರಿನ ಸಮಸ್ಯೆ ಅರು ಪಟ್ಟು ಹೆಚ್ಚಾಗಲಿದೆ. ಈ ಕಾರಣ ಕುಡಿವ ನೀರಿನ ಅಗತ್ಯ ಹೆಚ್ಚಿದಂತೆ ವಿಜ್ಞಾನಿಗಳ ಪ್ರಯೋಗಗಳು ಹೆಚ್ಚಾಗಿವೆ. ಈ ಸಮುದ್ರದ ನೀರನ್ನು ನಿರ್ಮಲೀಕರಣಗೊಳಿಸಲು ಕಲ್ಲಿದ್ದಲು, ಅನಿಲ ಮತ್ತು ತೈಲಗಳನ್ನು ಸದ್ಯ ಬೆಳೆಸಲಾಗುತ್ತದೆಯಾದರು ಪ್ರಮಾಣ ಜನಸಂಖ್ಯೆಗನುಗುಣವಾಗಿಲ್ಲ
ವಿಶ್ವದಾದ್ಯಂತ ಈಗಾಗಲೇ ಸು. 400 ನ್ಯೂಕ್ಲಿಯರ್ ರಿಯಾಕ್ಟರುಗಳಿಂದ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ- ಯಾದರೂ ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಕಾರ್ಯ ಅಷ್ಟೇನೂ ನಡೆದಿಲ್ಲ ಜಪಾನ್ ಮತ್ತು ಭಾರತದಲ್ಲಿ ಸಮುದ್ರದ ನೀರನ್ನು ಅಣುಸ್ಥಾವರಗಳಿಂದ ಶುದ್ಧೀಕರಿಸಲಾಗುತ್ತದೆ. ಮುಂಬೈನಲ್ಲಿರುವ ಬಾಬಾ ಅಣು ಸಂಶೋಧನಾ ಕೇಂದ್ರವು ಈ ಸಾಧನೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. “ಕಲ್ಟಾಕಂ ಸ್ಥಾವರದಲ್ಲಿ 50,000 ಕ್ಯೂಬಿಕ್ ಮೀಟರಿನಷ್ಟು ನೀರನ್ನು ಪ್ರತಿದಿನ ಅಣುಶಕ್ತಿಯಿಂದ ಸಂಸ್ಕರಿಸಿ ಕುಡಿವ ನೀರನ್ನಾಗಿ ಸಂಸ್ಕರಿಸಲಾಗುತ್ತದೆ. ಇದರಿಂದಾಗಿ ಅಂದಾಜು 5 ಲಕ್ಷ ಜನರು ಅ ನೀರನ್ನು ಕುಡಿದಂತಾಗಿದೆ. ಅಣುಸ್ಥಾವರ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ಅಣುಶಕ್ತಿಯ ನೀರು ಆವಿಯಾಗಲು ಉಪಯೋಗಿಸಿಕೊಳ್ಳುತ್ತದೆಯೇ ಹೊರತು ನೀರಿನ ಮೂಲಕ ಯಾವುದೇ ವಿಕಿರಣ ಹಾದುಹೋಗುವುದಿಲ್ಲ ಮಾತ್ರವಲ್ಲ ಈ ನೀರಿನಿಂದ ಯಾವುದೇ ಅಪಾಯವಿಲ್ಲವೆಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯ ಪ್ರಮಾಣಕ್ಕೆ ಇದೊಂದು ಸಣ್ಣ
ಉತ್ತರವನ್ನು ನೀಡುತ್ತದೆ.
ಹವೆಯಿಂದ ನೀರು
ಜಗತ್ತಿನಲ್ಲಿ ಜನಸಂಖ್ಯಾಸ್ಫೋಟದ ಸಮಸ್ಯೆ ಮೊದಲನೆಯದ್ದಾದರೆ ಎರಡನೆಯದ್ದು ಕುಡಿಯುವ ನೀರಿನದ್ದು ಭೂಮಿಯ ಮೇಲೆ ಶೇ. 75 ರಷ್ಟು ನೀರು ಇದ್ದರೂ ಕುಡಿಯಲು ಯೋಗ್ಯವಾಗಿಲ್ಲ ಈ ನೀರಿನಲ್ಲಿ ಅನೇಕ ಲವಣಗಳು ಕರಗಿದ್ಭು ಉಪ್ಪಿನ ಅಂಶ ಇರುತ್ತದೆ. ಈ ಕಾರಣವಾಗಿ ಅಣುಶಕ್ತಿಯಿಂದ ನೀರನ್ನು ತಯಾರಿಸುವ, ಸಮುದ್ರದ ನೀರನ್ನು ಸರಿಸ್ಕರಿಸಿ ಸಿಹಿನೀರನ್ನು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇದೆ. ಅದಾಗ್ಯೂ ಸಮಸ್ಯೆಗೆ ಪೂರ್ಣ ಉತ್ತರ ಸಿಕ್ಕಿಲ್ಲ ಅದಾಗ್ಯೂ ವಿಜ್ಞಾನಿಗಳು ಕುಡಿಯಲು ಯೋಗ್ಯವಾದ ನೀರನ್ನು ಉತ್ಪಾದಿಸುವ ಪ್ರಯತ್ನಗಳನ್ನು ಅಲ್ಲಲ್ಲಿ ಮಾಡುತ್ತಲೇ ಇದ್ದಾರೆ. ಇದೀಗ ವಾತಾವರಣದ ತಿಳಿಯಾದ ಹವೆಯಿಂದ ನೀರನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ವಾಷಿಂಗ್‌ಟನ್‌ನಲ್ಲಿರುವ ವಾಟರ ಮಾಸ್ಟರ್ ಟೆಕ್ನಾಲಜಿಸ್ ಕಂಪನಿಯವರು ಅಭಿವೃದ್ಧಿಪಡಿಸಿದ್ಧಾರೆ.
ಈ Airwell 200 Technology ಯು ಪ್ರಂಪಂಚದ ಯಾವುದೇ ಭಾಗದಲ್ಲಿಯ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದೆಂದು ವಿಜ್ಞಾನಿಗಳ ಅಭಿಪ್ರಾಯ. ಮೋಡದಿಂದ ಕೆಳಕ್ಕೆ ಬಿದ್ದ ನೀರು ಭೂಮಿಯ ಲವಣಾಂಶಗಳಿಂದ, ಬ್ಯಾಕ್ಸಿರಿಯಾಗಳಿಂದ ಕೂಡಿ ಕುಡಿಯಲು ಅಷ್ಟೇನೂ ಯೋಗ್ಯವಾಗಲಾರದು. ಈ ಶುದ್ದವಾದ ವಾಯುವನ್ನು ಸಂಗ್ರಹಿಸಿ H2Oದ ಸಂಸ್ಕಾರ ನೀಡಿ ನೀರನ್ನಾಗಿ ಮಾರ್ಪಡಿಸಲಾಗುತ್ತದೆ. ಸುತ್ತಲಿನ ಹವೆಯಿಂದ ದಿನವೊಂದಕ್ಕೆ ಈಗಾಗಾಲೇ 20 ಲೀಟರ್ ಶುದ್ಧವಾದ ನೀರನ್ನು ತಯಾರಿಸಲಾಗುತ್ತದೆ. ಕ್ಯಾಂಟಬರಿ ವಿಶ್ವವಿದ್ಯಾನಿಲಯದ ಸಹಾಯದಿಂದ ವೆಸ್ಟ್‌ಮಾಸ್ಟರ್ ಕಂಪನಿಯು ಈ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿ ಜಗತ್ತಿನಾದ್ಯಂತ ‘ಯಂತ್ರ’ವನ್ನು ಬಿಡುಗಡೆ ಮಾಡಿಲಿದೆ. ಆಗ ಬರಗಾಲ ಪ್ರದೇಶದ ನೀರಿನ ಭವಣೆಯಲ್ಲಿ ಬೇಯುತ್ತಿರುವ ಜನತೆಗೆ ಒಂದಿಷ್ಟು ನೆಮ್ಮದಿ ಸಿಗಬಹುದೇನೋ?
*****