ಮೂಲದಲ್ಲಿ ಆದಿಮಾನವನು ಬೇಟೆಯಾಡಿ ಪ್ರಾಣಿ, ಪಕ್ಷಿಗಳನ್ನು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಗೆಡ್ಡ ಗೆಣಸು, ಬೇರು, ಸಸ್ಯ ಹಾಗೂ ಹಣ್ಣುಗಳನ್ನು ತಿಂದು ಜೀವಿಸುತ್ತಿದ್ದ ಕ್ರಿ.ಪೂ. ೯೦೦೦ ವೇಳೆಗೆ ಮಧ್ಯಪೂರ್ವ ಪ್ರಾಂತ್ಯಗಳ ಜನರು ಬೇಸಾಯದಿಂದ ಆಹಾರ ಧಾನ್ಯಗಳನ್ನು ಬೆಳೆಯುವ ಪದ್ಧತಿಯನ್ನು ಕಲಿತುಕೊಂಡರು. ಆಗ ಅಲೆಮಾರಿತನ ತಪ್ಪಿತು. ಗೋಧಿ, ಆಕ್ಕಿ, ಮೆಕ್ಕೆಜೋಳ, ಬಾರ್ಲಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು.
ಆಲೆಮಾರಿತನ ಕೊನೆಗೊಂಡಾಗ ಗುಂಪು ಗುಂಪುಗಳಲ್ಲಿ ಸೇರಿ ಹಳ್ಳಿಗಳನ್ನು ಸೃಷ್ಟಿಸಿಕೊಂಡರು. ನಂತರ ಬೇಸಾಯವು ಪ್ರಪಂಚದ ಇತರ ಭಾಗಗಳಿಗೆ ಹರಡಿತು.
*****
ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು