ಒಂದು ವೃತ್ತದಲ್ಲಿ ಮಕ್ಕಳು ಒಂದುಗೂಡಿ ಆಡುತ್ತಿದ್ದರು ಒಮ್ಮೆ ‘ದಡ’ ಎಂದು ಪಾದವೆತ್ತಿ ವೃತ್ತದ ಹೊರಗೆ, ‘ನದಿ’ ಎಂದು ಪಾದವೆತ್ತಿ ವೃತ್ತದ ಒಳಗೆ ಧುಮುಕುತ್ತಿದ್ದರು.
ಇದು ನೋಡುತ್ತಾ ನಿಂತಿದ್ದ ಗುರುಗಳು ಶಿಷ್ಯನಿಗೆ ಹೇಳಿದರು
‘ನದಿ’ ಎಂದಾಗ ಧುಮಕಿ ಮುಳಗಿ ಸಾಹಸ ಸಾಧನೆಯಲ್ಲಿ ತೊಡಗುವುದು. ‘ದಡ’ ಎಂದಾಗ ಈಜಿ ತೇಲಿಬಂದು ದಡದ ಗುರಿ ಮುಟ್ಟುವುದು ಅಲ್ಲವೇ ಶಿಷ್ಯ ಅಂದರು.
“ಹೌದು ಗುರುಗಳೇ! ಇದು ಗುರುಗಳು ನಿಂತು ಆಡಿಸುವ ಬಾಳಿನ ಆಟ” ಎಂದು ಶಿಷ್ಯ ಧನ್ಯತೆ ಅರ್ಪಿಸಿದ.
*****








