‘ಎಲ್ಲಿಗೆ ಹೋಗುತಿದ್ದೀ ಮಗು?’ ಎಂದು ಮೊಮ್ಮಗನನ್ನು ಅಜ್ಜಿ ಕೇಳಿದಳು.
‘ನಾನು ಕನಸಿನ ಲೋಕಕ್ಕೆ ಹೋಗುತ್ತಿರುವೆ’ ಎಂದ.
‘ಏನು ಕೆಲಸ ಅಲ್ಲಿ?’ ಎಂದಳು ಅಜ್ಜಿ
‘ಕನಸು ಓಡಿ ಹೋಗದೆ ಹಾಗೆ ಕಾಲಿಗೆ ಗೊಲಸುಕಟ್ಟಿ ಬರುವೆ’ ಎಂದ.
ಬುದ್ಧಿವಂತ ಮೊಮ್ಮಗನ ಉತ್ತರ ಕೇಳಿ ಅಜ್ಜಿ ಬೆರಗಾಗಿ ಹೊರಡಲು ಅನುವಾದಳು. ಅಜ್ಜಿ ಹೊರಟದ್ದು ನೋಡಿ, ಮೊಮ್ಮಗ ಕೇಳಿದ, ‘ಅಜ್ಜಿ ಎಲ್ಲಿಗೆ ಹೊರಟಿರಿ?’ ಎಂದು.
‘ದನದ ಕೊಟ್ಟಿಗೆಗೆ’
‘ಯಾಕೆ ಹೋಗುತ್ತೀರಿ?’ ಎಂದ
‘ದನವನ್ನು ಕಟ್ಟಿ ಹಾಕಲು’
‘ಏಕೆ ಕಟ್ಟಿ ಹಾಕುತ್ತೀರಿ’ ಅಂದ ಅಜ್ಜಿಯೊಡನೆ
‘ಅದು ಕನಸಿನ ಲೋಕಕ್ಕೆ ಓಡಿ ಹೋಗದಿರಲೆಂದು ಕಟ್ಟಿ ಬರುವೆ’ ಎಂದಳು.
‘ಅಜ್ಜಿಯ ಜಾಣ್ಮೆ, ಮೊಮ್ಮಗನ ಜಾಣ್ಮಗೆ ಢಿಕ್ಕಿ ಹೊಡೆಯಿತು.
*****








