Home / ಬಾಲ ಚಿಲುಮೆ / ಕಥೆ / ಯುಧಿಷ್ಠಿರನ ಕಥೆ

ಯುಧಿಷ್ಠಿರನ ಕಥೆ

ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು. ಗಾಯಕ್ಕೆ ಎನೋ ಅಪಥ್ಯವಾಗಿ, ಅದು ಕೀವು ಕಟ್ಟಿಕೊಂಡು ವಾಸಿಯಾಗುವುದೇ ಅಸಾಧ್ಯವಾಗಿ, ಕೊನೆಗೆ ಹೇಗೆ ಹೇಗೋ ವಾಸಿಯಾಯಿತು.
ಒಂದು ಸಲ ಅವನಿದ್ದ ದೇಶದಲ್ಲೆ ಕ್ಷಾಮವು ಬರಲು, ಅವನು ದೇಶಾಂತರ ಹೋಗಿ ಒಬ್ಬ “ರಾಜನ ಬಳಿ ಸೇವಕನಾದನು. ಆ ರಾಜನು ಅವನ ಹಣೆಯಲ್ಲಿರುವ ಭಾರಿಯ ಕಲೆಯನ್ನು ನೋಡಿ “ಇವನು ವೀರಪುರುಷನಿರಬೇಕು. ಇವನ ಹಣೆಯ ಮೇಲಿನ ಕಲೆಯು ಮಖಾಮಖಿ ಯುದ್ಧಮಾಡಿದಾಗ ಆದದ್ದು ಇರಬೇಕು.” ಎಂದುಕೊಂಡು ಅವನಿಗೆ ಬೇಕಾದ ಮಾನ ಮರ್ಯಾದೆಗಳನ್ನು ಮಾಡಿ ರಾಜಪುತ್ರರ ಬಳಿ ಇಟ್ಟುಕೊಂಡಿದ್ದನು.
ಒ೦ದು ದಿನ ಅರಸನು ವೀರ ಸಂಭಾವನೆಯನ್ನು ಕೊಡಲು ಎಲ್ಲರನ್ನೂ ಕರೆಸಿದನು. ಆನೆ ಕುದುರೆ ಮೊದಲಾದುವುಗಳೂ ವೀರ ಪುರುಷರೂ ಬಂದು ನಿಂತಿದ್ದರು. ಆಗ ಅಗಸನು ಕುಂಬಾರನನ್ನು ಕರೆದು, “ಎಲೈ ರಾಜಪುತ್ರ, ನಿನ್ನ ಹೆಸರೇನು? ನೀನು ಯಾವ  ಜಾತಿಯವನು? ಯಾವ ಯುದ್ಧದಲ್ಲಿ ಏಟು ತಿಂದು ನಿನಗೆ ಈ ಹಣೆಯು ಹೀಗಾಯಿತು?” ಎಂಡು ಕೇಳಿದನು. ಕುಂಬಾರನು “ದೇವ, ಇದು ಶಸ್ತ್ರದ ಗಾಯವಲ್ಲ. ಯುಧಿಸ್ಠಿರನೆಂಬ ಕುಂಬಾರನು ನಾನು. ನಮ್ಮ ಮನೆಯಲ್ಲಿ ಎಷ್ಟೋ ಓಡುಗಳು ಇದ್ದವು. ಒಂದು ದಿನ ನಾನು ಓಡಿಬರುತ್ತಾ ಒಂದು ಓಡಿನ ಮೇಲೆ ಬಿದ್ದೆನು. ಅದು ತಗಲಿ ಇಷ್ಟು ಗಾಯವಾಯಿತು” ಎಂದು
ಹೇಳಿದನು.
ರಾಜನು ಅದನ್ನು ಕೇಳಿ. “ಮೋಸವಾಯಿತು,” ಎಂದು ಕೊಂಡು ಮೊದಲು ಇವನನ್ನು ಹೊರಕ್ಕೆ ತಳ್ಳಿ ಎಂದನು. ಕುಂಬಾರನು, “ಅರಸಾ, ತಡೆ, ತಡೆ, ಯುದ್ಧ ಬರಲಿ, ನನ್ನ ಕೈ ತೋರಿಸುವೆನು.” ಎನ್ನಲು ಅರಸನು ಹೇಳಿದನು: “ಆಹಾ, ಅಲ್ಲವೇ? ನೀನು ಸರ್ವ ಗುಣ ಸಂಪನ್ನನು. ಆದರೂ ನಮಗೆ ಬೇಡ, ಕೇಳಲಿಲ್ಲವೇ?”
ಶೂರನೆ ಅಹುದು, ಸುಂದರನಹುದು, ಪಂಡಿತನಹುದು ॥
ಆದರು ಮಗನೆ, ನಿನ್ನವರಾನೆಯ ಕೊಂದವರಲ್ಲಾ ॥ ೨೦ ॥
ಕುಂಬಾರನು “ಅದು ಹೇಗೆ?” ಎನ್ನಲು : ಅರಸನು ಹೇಳಿದನು:-
*****
ನರಿಯ ಮರಿಯ ಕಥೆ ಓದಿ.
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...