Home / ಕವನ / ಕವಿತೆ / ಆನಂದವೇ!

ಆನಂದವೇ!

ಗೆಳೆಯರ ಸಮೂಹದೊಳು ನಗುತ ಕೆಲೆಯುತ ಕಾಲ
ಕಳೆದೆನು; ವಿಹಂಗಗಳ ಗಗನದೊಳಗಿನ ಗಮನ,
ಮಳೆಗಳಾಡುವ ಪಗಡಿ-ಪಕ್ಕಂಗಳನ್ನು ಹೂ-
ಚಿಗುರೆಲೆಯ ಲೀಲೆಯನ್ನು
ಹಳೆಯದಿನಿಸುಳಿಸದಲೆ ಸಕಲವನು ಭೋಗಿಸುತ
ಬೆಳೆದೆ, ಹನಿ ಬಿಡದೆ ನಿನ್ನನು ಸವಿದೆನಾನಂದ!
ಗಿಳಿಯು ಕುಡುಚೊಗಚಿಯೊಳು ಅಡಗಿದಂತಹ ರಸವ
ನೋಡಿ ಗಡ ಹೀರುವಂತೆ
ಅಕ್ಕೆಕ್ಕಿಗಳ ಚಿಕ್ಕ ಚಿಕ್ಕೆಗಳ ಸುರಿದ ಬೆ-
ನ್ನಕ್ಕರದೊಳೇರಿ, ಭೋರಂಗಿಗಳ ಭುಂಕಾರ-
ವಕ್ಕರಸಿ ಸಂಕೇತದಂತೆ, ದುಂಬಿಯ ಹಲವು
ಬಣ್ಣದಾ ಪಕ್ಕುಗಳನು
ಸಿಕ್ಕಿಸಿಕ್ಕಿತಿದೀಗಯೆನುತ ಹೊಲಗದ್ದೆಗಳ
ಹೊಕ್ಕು, ಸಿಗದಿದ್ದರೂ ನಕ್ಕೆ ನಾನಂದವೇ!
ನಕ್ಕು ನಗಿಸುತಲೆನಗೆ ಮನೆಯಿಂದಲೆಳೆದೊಯ್ದೆ
ಬಿಸಿಲುಮಳೆಚಳಿಗಳಲ್ಲಿ
ಹಾಲುಗಲ್ಲದ ಬಾಲನೊಲು ಕಂದ! ಆನಂದ!
ಕಾಲುಗಳನಿಡುತ ಬಾ ದಟ್ಟಡಿಯ ಚಂದದಲಿ
ಬಾಲಕರನಂತ ರೀಶೆಗಳನ್ನು ತೋರುತ್ತ
ಮುತ್ತೆ! ಬಾ! ಮುದ್ದೆ ಬಾರೈ!
ಸಾಲಲಾರದೆ ಕಂಠ, ಗದ್ಗದದ ವಚನಗಳು
ಮೇಲು ಮೇರೆಯ ಮೀರಿ ಬಾಯ್ದೆರೆದು ತೇಲುವವು
ನಾಲಿಗೆಗು ನಿಲುಕಲಾರದ ನುಡಿಗಳನ್ನು ನಾ
ನುಡಿಯುವದದಾವ ತೆರದಿ?
ಬಾ ನನ್ನ ಹೃದಯಮಂದಿರದ ಬಾಗಿಲ ತೆರೆದೆ
ಯಾ ನಿನ್ನ ರೂಪಕ್ಕೆ ಜಗವು ಮರುಳಾಯಿತೋ
ಆ ನಿನ್ನ ರೂಪವನೆ ಧರಿಸಿ ಬಾ, ಜೀವಿತದ
ಸಾರ್ವಭೌಮನೆ ಮೆಲ್ಲನೆ,
ಈ ನನ್ನಯಂತರಂಗದ ಸಭಾಮಂಟಪವ
ನಾನೆನ್ನ ಕೆನ್ನೀರಿನಿಂದ ತಳಿಹೊಡೆದೆನೈ
ಬಾ, ನನ್ನಿಯೇ ನಿನ್ನ ಗದ್ದಿಗೆಯೋಲಾಗುವದು
ಏರದನು ಪಟ್ಟದರಸೇ!
ನಗೆಯು ನಗರಾಜನಲಿ ಹರಿವ ಗಂಗಾನದಿಯ
ಮಿಗಿಲಾದ ಹರಿಹದೊಲು ಹರಿಯೆ ಸೂಸಲು ತಡೆಯು;
ಸೊಗಸೆ! ನಿನ್ನನ್ನಾಗ್ಗೆ ಬೊಗಸೆಯಿಂದಲಿ ಕುಡಿದೆ-
ಕುಡಿದು ನೊರೆಯುಳ್ಳ ನೀರು
ಚಿಗಿತವಾಕಾಂಕ್ಷೆಗಳು ಚಿಕ್ಕಂದಿನಲಿ, ನಿನ್ನ
ಹಗಲಿನೊಳು ಕಲ್ಪವೃಕ್ಷಗಳಂತೆ ಬೆಳೆಯುತ್ತ
ಮುಗಿದನ್ನು ಭೇದಿಸುತ್ತೇರಲಿಚ್ಛಿಸುತಿಹವು
ಹಾರು ಮೇಲಕ್ಕೆ ಮುಗಿಲೇ!
*****
Tagged:

Leave a Reply

Your email address will not be published. Required fields are marked *

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...