ಹಗಲು ನಂದಿತು, ಇರುಳು ಬಂದಿತು
ನಿಶೆಯು ಹಬ್ಬಿತು ಸುತ್ತಲು
ಬೆಳಕು ಮುಚ್ಚಿದ ತಾರೆಗಳ ಹೊರ-
ಗೆಳೆದು ತೋರಿತು ಕತ್ತಲು!
ಮರೆಯ ಕಳೆವುದು ಬೆಳಕು; ಮರೆಯೇ
ಕತ್ತಲೆಂಬರಿದೇನಿದು!
ಬೆಳಕು ಮುಚ್ಚಿದ ಬೆಳಕ ಬೆಳಗುತ
ಕತ್ತಲೆಯೆ ಬೆಳಕಾದುದು!
*****
ಕನ್ನಡ ನಲ್ಬರಹ ತಾಣ
ಹಗಲು ನಂದಿತು, ಇರುಳು ಬಂದಿತು
ನಿಶೆಯು ಹಬ್ಬಿತು ಸುತ್ತಲು
ಬೆಳಕು ಮುಚ್ಚಿದ ತಾರೆಗಳ ಹೊರ-
ಗೆಳೆದು ತೋರಿತು ಕತ್ತಲು!
ಮರೆಯ ಕಳೆವುದು ಬೆಳಕು; ಮರೆಯೇ
ಕತ್ತಲೆಂಬರಿದೇನಿದು!
ಬೆಳಕು ಮುಚ್ಚಿದ ಬೆಳಕ ಬೆಳಗುತ
ಕತ್ತಲೆಯೆ ಬೆಳಕಾದುದು!
*****