ಪಂಪ ಪಥದನುಕರಣೆಯಿಂದ ಚಾಳುಕ್ಯ ಸುತ-
ನಾದ ಸತ್ಯಾಶ್ರಯನನನಿಲಜಗೆ ಸರಿಗೈದು,
ನೆಗಳ್ದ ಸಾಹಸ ಭೀಮ ವಿಜಯವನ್ನು ಕೃತಿಗೈದು,
ವರ ಗದಾಯುದ್ಧವನ್ನು ಕನ್ನಡದೊಳೊಂದಿಸುತ
ಸಂದರೂ ನಿನ್ನದೇ ತನ್ನ ತನವಿದೆ ರನ್ನ!
ತೈಲಪನು ನಿನಗಿತ್ತ ಕವಿಚಕ್ರವರ್ತಿತ್ವ
ಸಾಜವಿದೆ. ನೀನೊರೆದೆ ಬಳಿಕ ಜೈನ ಸುತತ್ವ
ಬೋಧನೆಗೆ ಮನ ಮಾಡುತಜಿತ ತೀರ್ಥಂಕರನ
ಪಾವನಾಖ್ಯಾನವನ್ನು ಪೌರಾಣ ತಿಲಕವನು
ನಿನ್ನವೀ ರನ್ನಗಳು ಕನ್ನಡಕೆ ತೊಡವುಗಳು!
ಪರಶುರಾಮನ ಚರಿತ-ಚಕ್ರೇಶ ಚರಿತೆಗಳು
ನಿನ್ನುದ್ಘ ಕೃತಿಗಳೆರಡಜ್ಞಾತ ವಾಸವನು
ತಳೆದಿಹವು, ನಿನ್ನ ದುರ್ಯೋಧನನ ಚಲದಳವು
ಸ್ಮೃರ್ತ್ಯರ್‍ಹವಂತೆಯೇ ಕರ್‍ಣಾರ್ಥ ರೋದನವು!
*****
೧೯೪೦









