Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ೩ ಜುಲೈ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ೩ ಜುಲೈ, ೧೯೪೨

ಪ್ರೀತಿಯ ಕಿಟಿ,

ನನ್ನ ಪೋಷಕರನ್ನು ಭೇಟಿಯಾಗಲು ನಿನ್ನೆ ಹ್ಯಾರಿ ನಮ್ಮಲ್ಲಿಗೆ ಬಂದ. ಕ್ರೀಮಕೇಕ್, ಸಿಹಿತಿಂಡಿಗಳು, ಚಹಾ, ಮತ್ತು ಫ್ಯಾನ್ಸಿ ಬಿಸ್ಕತ್ತುಗಳನ್ನು ನಾನು ಕೊಂಡುತಂದಿದ್ದೆ. ಅವುಗಳನ್ನು ತೆಗೆದಿದ್ದೆನಷ್ಟೇ. ಆದರೆ ನಾವಿಬ್ಬರೂ ಆ ರೀತಿಯಲ್ಲಿ ಅಕ್ಕಪಕ್ಕ ಕುಳಿತುಕೊಂಡಿದ್ದು ಸಹಜವೆಂದು ನನಗಾಗಲೀ ಹ್ಯಾರಿಗಾಗಲೀ ಅನ್ನಿಸಲಿಲ್ಲ. ಅದಕ್ಕಾಗಿ ಹೊರ ಹೊರಟೆವು. ಮತ್ತು ಆತ ನನ್ನನ್ನು ಪುನಃ ಮನೆಗೆ ತಂದು ಮುಟ್ಟಿಸಿದಾಗ ಅದಾಗಲೇ ಎಂಟು ಗಂಟೆಯಾಗಿ ಹತ್ತು ನಿಮಿಷಗಳಾಗಿದ್ದವು.

ಡ್ಯಾಡಿ ತುಂಬಾ ಕೋಪಗೊಂಡಿದ್ದರು. ನಾನು ಮಾಡಿದ್ದು ತಪ್ಪೆಂದು ತಿಳಿದಿದ್ದರು. ಕಾರಣ ಎಂಟು ಗಂಟೆಗಳ ನಂತರ ಹೊರಗಿರುವುದು ಯಹೂದಿಗಳಿಗೆ ಅಪಾಯಕಾರಿಯಾಗಿತ್ತು. ಹಾಗಾಗಿ ನಾನು ಇನ್ನು ಮುಂದೆ ಎಂಟಕ್ಕೆ ಹತ್ತು ನಿಮಿಷಗಳಿರುವಾಗಲೇ ಮನೆಯಲ್ಲಿರುವೆನೆಂದು ಪ್ರತಿಜ್ಷೆ ಮಾಡಬೇಕಾಯ್ತು.

ನಾಳೆ ಹ್ಯಾರಿ ನನ್ನನ್ನು ತನ್ನ ಮನೆಗೆ ಕರೆದಿದ್ದಾನೆ. ನನ್ನ ಗೆಳತಿ ಜೋಪಿ ಇಡೀ ದಿನವೂ ಹ್ಯಾರಿಯ ಬಗ್ಗೆ ಹೇಳಿ ನನ್ನ ಕಾಡುತ್ತಾಳೆ. ನಿಜಕ್ಕೂ ನಾನು ಇನ್ನೂ ಯಾರನ್ನೂ ಪ್ರೇಮಿಸಿಲ್ಲ. ನಾನು ಬಾಯ್‌ಪ್ರೆಂಡ್‌ಗಳನ್ನು ಹೊಂದಬಹುದು. ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಆ ಗೆಳೆಯನಾಗುವವನು ಅಮ್ಮ ಹೇಳುವಂತೆ ಆತ ಸ್ವಲ್ಪ ಬೇರೆಯೇ ಕಾಣುತ್ತಾನೆ.

ಒಂದು ದಿನ ಹ್ಯಾರಿ ಇವಾಳನ್ನು ಕಾಣಲು ಹೋಗಿದ್ದ, ಆಕೆ ಆತನಿಗೆ ಕೇಳಿದಳಂತೆ “ನೀನು ಯಾರನ್ನು ಇಷ್ಟಪಡುವೆ? ಫ್ಯಾನಿಯನ್ನೋ ಅಥವಾ ಆನ್‌ಳನ್ನೋ?”. ಅದಕ್ಕವನು “ಅದರಿಂದ ನಿನಗಾಗಬೇಕಾದೇನೂ ಇಲ್ಲ!” ಎಂದು ಹೇಳಿದ. ಆದರೆ ಹೋಗುವಾಗ [ಅವರಿಬ್ಬರೂ ಆ ಇಡೀ ಸಂಜೆ ಮತ್ತೆ ಮಾತಾಡಲಿಲ್ಲ.] “ಕೇಳಿಲ್ಲಿ, ಅದು ಆನ್, ಎಂದೆಂದಿಗೂ, ಮತ್ತದನ್ನು ಯಾರಿಗೂ ಹೇಳಬೇಡ” ಎಂದವನೇ ಮಿಂಚಿನಂತೆ ಹೊರಟುಹೋಗಿದ್ದ.

ಹ್ಯಾರಿಗೆ ನನ್ನಲ್ಲಿ ಪ್ರೇಮ ಉಂಟಾಗಿದೆ ಎಂಬುದನ್ನು ಸುಲಭವಾಗಿ ಕಾಣಬಹುದು. ಅದಕ್ಕಿಂತ ಹೆಚ್ಚಾಗಿ ಬದಲಾವಣೆಗಾಗಿ ಈ ವಿನೋದವಿರಬಹುದು. ಮಾರ್‍ಗೊಟ್ ಹೇಳುವಳು: “ಹ್ಯಾರಿ ಒಳ್ಳೆಯ ಹುಡುಗ” ಒಪ್ಪುವೆ. ಆದರೆ ಆತ ಅದಕ್ಕಿಂತ ಹೆಚ್ಚೇ ಒಳ್ಳೆಯವ. ಮಮ್ಮಿ ಆತನನ್ನು ಸುಂದರ, ಸುಸಂಸ್ಕೃತ ಹುಡುಗನೆಂದು ಸದಾ ಹೊಗಳುವರು. ನಮ್ಮ ಇಡೀ ಕುಟುಂಬ ಆತನನ್ನು ಒಪ್ಪಿಕೊಂಡಿದೆ. ಆತ ಅವರೆಲ್ಲರನ್ನೂ ಮೆಚ್ಚಿಕೊಳ್ಳುತ್ತಾನೆ. ಆದರೆ ನನ್ನ ಸ್ನೇಹಿತೆಯರು ಬಾಲಿಶ ಬುದ್ಧಿಯವರೆಂದು ಆತ ಯೋಚಿಸುತ್ತಾನೆ. ಅದು ಸತ್ಯವೂ ಹೌದು.

ನಿನ್ನ
ಆನ್
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...