Home / ಲೇಖನ / ವಿಜ್ಞಾನ / ಕೃತಕ ಮಾನವ ಸೃಷ್ಟಿ

ಕೃತಕ ಮಾನವ ಸೃಷ್ಟಿ

ವಿಜ್ಞಾನಿಗಳು ಇಷ್ಟರಲ್ಲಿಯೇ ಮಾನವನ ಜಿನ್ಸ್‌ಗಳನ್ನು ಅಧ್ಯಯನ ಮಾಡಿ ಅವುಗಳ ಒಂದು ಬೃಹತ್ ಸಂಗ್ರಹಾಲಯವನ್ನು ನಿರ್ಮಿಸಬಹುದು. ಈ ಜಿನ್ಸ್ ಸಂಗ್ರಹಾಲಯದಲ್ಲಿ ಪ್ರತಿಯೊಂದು ಜಿನ್ಸ್‌ಗಳ ವಿವರಗಳಿದ್ದು ಯಾವ ಜಿನ್ಸ್ ಯಾವ ಕಾರ್‍ಯಕ್ಕೆ ಯೋಗ್ಯ? ಜೀವಿಗಳಲ್ಲಿ ಕಾಣುವ ನ್ಯೂನ್ಯತೆಗಳಿಗೆ ಕಾರಣವೇನು? ಇದೇ ಮೊದಲಾದ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನು ನೀಡಲು ಸಾಧ್ಯವಾಗಲೂ ಬಹುದು. ಈ ಬೃಹತ್ ಜಿನ್ಸ್ ವಿಶ್ವಕೋಶ ನಿರ್‍ಮಾಣವಾದ ನಂತರ ಕೃತಕ ಮಾನವನ ಸೃಷ್ಟಿ ಸುಲಭ ಸಾಧ್ಯವೆಂದು ವಿಜ್ಞಾನಿಗಳು ಹೇಳುತ್ತಾರೆ.

ಮಾನವನನ್ನು ಪೀಡಿಸುವ ಎಷ್ಟೋ ರೋಗಗಳು ಅನುವಂಶೀಯವಾಗಿ ತಂದೆ ತಾಯಿಗಳಿಂದ, ಅವರ ಸಂತತಿಯಿಂದ ಬರಬಹುದು. ಈ ರೋಗಗಳಿಗೆ ಅವುಗಳಲ್ಲಿರುವ ಜಿನ್ಸ್‌ಗಳಲ್ಲಿನ ನ್ಯೂನ್ಯತೆಗಳೇ ಕಾರಣ. ನ್ಯೂನ್ಯತೆಗಳುಳ್ಳ ರೋಗಕಾರಕ ಜಿನ್ಸ್‌ಗಳನ್ನು ಶರೀರದಿಂದ ಹೊರಹಾಕಲಾಗದಿದ್ದರೂ ಅದರ ಬದಲು ಸುಧಾರಿತ ಜಿನ್ಸ್‌ಗಳನ್ನು ಬಳಸಿ ನ್ಯೂನ್ಯತೆಗಳನ್ನು ಸರಿಪಡಿಸಲು ಸಾಧ್ಯ. ಆದರೆ ಇದು ಇಷ್ಟರಲ್ಲಿಯೇ ಕಾರ್ಯಸಾಧ್ಯವೇನು ಅಲ್ಲ. ವಿಜ್ಞಾನಿಗಳು ಮಾನವನ ಜಿನ್ಸ್‌ಗಳನ್ನು ಶರೀರದೊಳಕ್ಕೆ ಹೇಗೆ ಸೇರಿಸಬಹುದೆಂಬ ವಿಚಾರ ಇನ್ನೂ ತಿಳಿದಿಲ್ಲ ಮತ್ತು ಜೀವಕೋಶದೊಳಗೆ ಮೊದಲೇ ಬಿಡಾರ ಹೂಡಿರುವ ನ್ಯೂನ್ಯತೆ ಇರುವ ಜಿನ್ ಅನ್ನು ಅಲ್ಲಿಂದ ಹೇಗೆ ಉಚ್ಚಾಟನೆ ಮಾಡಬಹುದು ಎಂಬುವುದು ತಿಳಿದಿಲ್ಲ. ಇದೆಲ್ಲದರ ಅರಿವು ವಿಜ್ಞಾನಿಗಳಿಗಾದಾಗ ಜೀನ್ ಚುಚ್ಚು ಮದ್ದಿನಿಂದ ಬಯಸಿದ ಗುಣ ಲಕ್ಷಣಗಳನ್ನು ಸ್ವಭಾವಗಳನ್ನು ಬದಲಿಸಲು ಸಾಧ್ಯವಾಗಬಹುದು. ಕೃತಕ ಜೀನ್ ಸೃಷ್ಟಯಿಂದಾಗಿ ಈ ಕನಸುಗಳು ನನಸಾಗುವ ಕಾಲ ಇಷ್ಟರಲ್ಲಿಯೇ ಬರಬಹುದೆಂದು ಕೆಲವರು ನಿರೀಕ್ಷಿಸಿದ್ದಾರೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...