ಒಗಟು

ಗುರುಗಳು ಶಿಷ್ಯರಲ್ಲಿ ವ್ಯಾಖ್ಯಾನ ಮಾಡುತ್ತ ಹೇಳಿದರು. ಪ್ರತಿ ಮಾನವನಲ್ಲಿ, ಒಂದು ವಾಚ್ ಟವರ್ ದೇವರು ಕಟ್ಟಿದ್ದಾನೆ. ಅಲ್ಲಿ ಒಂದು ವಾಕಿಟಾಕಿ ಇದೆ. ಇದರ ಮುಂದೆ ಒಬ್ಬ ವಾಚ್‌ಮ್ಯಾನ್ ಇರುತ್ತಾನೆ ಎಂದರು.

ಶಿಷ್ಯರಿಗೆ ಒಗಟು ಬಿಡಿಸಲಾಗಲಿಲ್ಲ. ಗುರುವಿನಲ್ಲಿ ಒಗಟು ಬಿಡಿಸಿ ಹೇಳಲು ಬಿನ್ನವಿಸಿಕೊಂಡರು.

“ಮಾನವನ ತಲೆ ಒಂದು ವಾಚ್ ಟವರ್, ಇಲ್ಲಿ ಇರುವುದು ವಾಚ್ ಮಾಡುವ ಕಣ್ಣುಗಳು, ಕೆಟ್ಟದ್ದಕ್ಕೆ ಕಣ್ಣು ಮುಚ್ಚಿದ ಮಂಗನಂತೆ. ಒಳ್ಳೆಯದಕ್ಕೆ ತೆರೆದ ಕಣ್ಣಿನ ಬುದ್ಧನ ನೋಟದಂತೆ, ಮನದಾಳದ ಪ್ರಜ್ಞೆಯಂತೆ” ಎಂದರು.

ಇನ್ನು ವಾಕಿಟಾಕಿ-ಮಾನವ ಮನಸ್ಸಿಗೆ ಬಂದಂತೆ ಆಡುವ ಬಾಯಿ. ವಟಗುಟ್ಟುವ ಕಪ್ಪೆಯಂತೆ. ಇದು ಕೆಟ್ಟದ್ದನ್ನು ಆಡದ ಬಾಯಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ಒಳ್ಳೆಯದನ್ನು ಸಾರುವ ಸಾಧನವಾಗಬೇಕು.

“ಇನ್ನು ಉಳಿದಿದ್ದು ವಾಚ್ ಮ್ಯಾನ್. ಅದು ಬುದ್ದಿ, ವಿವೇಚನೆ, ವಿವೇಕವನ್ನು ಕೇಳುವ ಕಿವಿಗಳು, ಕೆಟ್ಟದ್ದಕ್ಕೆ ಕಿವಿಮುಚ್ಚಿಕೊಂಡ ಕೋತಿಯಂತೆ ಇರಬೇಕು. ವಾಚ್ ಟವರ್ ಪ್ರಜ್ಞೆಯಲಿ ಮನಸ್ಸಿನ ವಾಕಿಟಾಕಿಯ ಮೌನಗೊಳಿಸಿ, ಬುದ್ದಿ ಎಂಬ ವಾಚ್ ಮ್ಯಾನ್‌ನು ನಮ್ಮ ಬಾಳ್ವೆಯ ಹಾದಿಗೆ ದಾರಿ ದರ್ಶನ ನೀಡಬೇಕು.” ಎಂದರು ಗುರುಗಳು.

ಶಿಷ್ಯಂದರಿಗೆ ಜೀವನಕ್ಕೊಂದು ದೀವಟಿಗೆ ಹಿಡಿದಂತೆನಿಸಿತು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...