ಸಂಜೇಲ್ ಓ ಲಸ್ಮಣಾಂತ್ ಏಳಿ
ಅಟ್ಟೀಗ್ ಬಂದ್ರೆ ಬೇಗ
ದಾರೀನ್ ನೋಡ್ತ ನಿಂತ್ಕೊಂಡೌಳೆ
ನಂಜಿ ಬಾಗಿಲ್ನಾಗ! ೧
ಜೀತಕ್ ಜೀವ ಬಲಿ ಕೊಟ್ಮೇಲೆ
ನಂಜೀನೆ ಒಸ್ ಪ್ರಾಣ!
ನಂಜೀನ್ ಏನ್ರ ನೆನಿದೆ ಓದ್ರೆ
ಉಡಗೋಗ್ತೈತೆ ತ್ರಾಣ! ೨
ಜೀವಾನ್ ಬೆಳಸೋಕ್ ತಾಕತ್ ಅಂದ್ರೆ
ನಂಜೀ ನಾಮಸ್ಮರಣೆ!
ಜೀವದ ಗಂಗೆ ಕೆಡದಂಗ್ ಇಡೋಕ್
ನಂಜೀನ್ ಎಸರೆ ಬರಣೆ! ೩
*****