ಒಬ್ಬ ಶಿಷ್ಯ ಗುರುವಿನಲ್ಲಿ ಶ್ರೀಕಟಾಕ್ಷಕ್ಕಾಗಿ ಬೇಡಿದ. ನಿರ್ಗತಿಕ ಶಿಷ್ಯ ನಾನು, ನನ್ನ ಕೈ ಬರಿದು, ಹೃದಯ ಬರಿದು ಎಂದು, ಗೋಳಿಟ್ಟ.
ಶಿಷ್ಯಾ! “ನಿನ್ನ ಕಣ್ಣಲ್ಲಿ ಬೆಳಕಿದೆ, ನಿನ್ನ ಎದೆಯಲ್ಲಿ ಛಲವಿದೆ, ನಿನ್ನ ಕೈಯಲ್ಲಿ ಬಲವಿದೆ, ನಿನ್ನ ಕಾಲಿನಲ್ಲಿ ಶಕ್ತಿ ಇದೆ. ಇನ್ನೇನು ಬೇಕು? ಅವೆಲ್ಲವೂ ಸಂಪತ್ತಿನ ಸೋಪಾನ” ಎಂದಾಗ ಶಿಷ್ಯನ ಖಾಲಿ ಎದೆ ತುಂಬಿತು. ತನಗೆಷ್ಟು ದೈವ ಕಟಾಕ್ಷದ ಶ್ರೀಕಟಾಕ್ಷವಿದೆ ಎಂದು ತಿಳಿದು ತಾನು ಧನ್ಯ ಧನಿಕನೆಂದು ಅರಿತು ಕೊಂಡ.
*****