ಕಾಗಲ್ಲೂ ಕರಿಗಲ್ಲೂ ಕಟ್ಟೆ ಮ್ಯಾಗಿನ ಕಲ್ಲೂ
ಆ ಕಲ್ಲೀನ ಹೆಸರೂ ಹೂಲಿ ಯಪ್ಯಾಽ ||೧||
ಹುಲಿಯಪ್ಪನ ತಳವೇ ಗಡಿ ಮೇಲೆ ಕೋಲೇ
ಸುಂಗುಳೀ ಮರನಡಿಗೇ ನೆಲಿಗೊಟ್ಟಾ ಕೋಲೇ ||೨||
ಜಂಗುಮಾರ್ ಹುಡುಗೀ ಕಾವಲೂ ಕೋಲೇ
ಕಾಗಲ್ಲೂ ಕರಿಗಲ್ಲೂ ಕಟ್ಟೆ ಮ್ಯಾಗಿನ ಕಲ್ಲೂ
ಆ ಕಲ್ಲೀನ ಹೆಸರೂ ಹುಲಿಯಪ್ಪಾ ||೩||
*****
ಹೇಳಿದವರು: ಗಣಪ ಸುಬ್ಬಗೌಡ, ಮೊಳೇಸಾಲು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.