ಕೃತಿ

ನಿರ್‍ದೋಷಕೃತಿಯ ನಿರ್‍ಮಿಸುವೆನೆನ್ನುವ ಪಂಥ-
ಗಾರ! ಹಂಬಲವೇನೊ ಹಿರಿದು; ಗುಣದೋಷ ಚ-
ರ್‍ಚೆಯಲಿ ಪಳಗಿದ ಬಗೆಯ ನುರಿತ ನಯದಲಿ ಬಲಿತ
ಕೈ ಚಳಕದಲಿ ಹಿಳಿವೆ ರಸವ, ಜುಬ್ಬರದ ಜಂ-
ಜಡ ಸವರಿ; ಬಯಕೆ ಬರುವಾ ಬಾಲ ಲೀಲೆಯನು
ಹೊಳೆಯಿಸುವ ತೆರ, ಚಿರಂಜೀವ ಸುಕೃತಿಯ ಸಂಚ-
ಕಾರ! ನಿನ್ನೀಮಸೆದ ಮನದ ಹರಿತಾದ ಕಣ್
ನೋಟ, ಹೃದಯದ ಓಟ, ಬೆಳಕ ನಡಿಗೆಗು ಮಿಗಿಲು.

ಕೃತಿಯ ರಚಿಸದೆ ಕೃತಾರ್‍ಥವೆ ಜೀವ? ರಸ ವಿಮ-
ರ್‍ಶೆಯ ರಸದ ಯೋಗ ಕೊಡಬಲ್ಲುದೆ? ಕಾಣೆವೇ
ಹಸಿರಹುಲ್ಲಲಿ ಬಂಜೆಬಯಲ ಬಸಿರನು ಮುಚ್ಚ
ಲೆಳಿಸುವದ? ಜೀವದಾ ಹಸಿವು-ನೀರಡಿಕೆ ಅದ-
ಕೂ ಮೇಲು, ಹಡೆದು ಪಡೆಯುವ ಪೂರ್‍ಣ ಸುಖ
ಸಹಜ! ತನ್ನ ನೆರಳಿಗೆ ಹೆದರಿ ಮೈಗರೆಯುವರೆ ಹಗಲು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದೆ ತುಂಬಿ ಬಂದಿತ್ತು
Next post ನಂ ಬೋಜ ಮುನಿಯ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…