ಐದು ಅಕ್ಷರದಿಂದ ತೆಯದು ಗಂಧಾಽದಿಂದ|
ಮಲ್ಲಿಗ್ಹೂವಿಽನ ಕ್ರಮಽದಿಂದ||
ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ|
ರಾಯರ ಶೀಪಾದಾಽ ತೊಳಂದಾಳ ||೧||
ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ|
ಪಾದಲಿ ಕಂಡಾಳಽ ಪದಮವ||
ಪಾದಲಿ ಕಂಡಾಽಳೆ ಪದಮವ ರಾಯಿರ ನಿಮಗ|
ಆನಿ ಏರಂಥಾ ಬಲಽ ಬಂದ ||೨||
ಶಟ್ಟೆವರ ಮಗಳ ಬಂಽಮ ಬಟ್ಟ್ ಪೂಜಿ ಮಾಽಡಟಿಗೆ|
ಬಟ್ಟಿಲಿ ಕಂಡಾಳಽ ಪದಽಮಽವ||
ಬಟ್ಟಿಲಿ ಕಂಡಾಽಳ ಪದಮವ ರಾಯರ ನಿಮಗ|
ಮಂಚ ಏರಂಥಾಽ ಬಲಽ ಬಂದ ||೩||
* * *
ಹೆತ್ತೂರ ರಾಽಜ್ಯ ನಿಮ್ಮಪ್ಪ ಆಳಿದರೇನ|
ಒಂಕಿಗಿ ನಮ್ಮ ಕಾಲಽ ತೊಳಽದೆಲ್ಲ||
ಒಂಕಿಗಿ ನಿಮ ಕಾಽಲ ನಾವ್ಯಾಕ ತೊಳಿಯುನು ಧೊರಿಯ|
ಪ್ರೇಮ ಬಲ್ಲವರಽ ಗುಣಕಾಗಿ ||೪||
ಎಂಟೂರ ರಾಜ್ಯ ನಿಮ್ಮಣ್ಣ ಆಳಿದರೇನ|
ಸರಗಿಗಿ ನಮ ಕಾಲಽ ತೊಳಽದೆಲ್ಲ||
ಸರಗಿಗಿ ನಿಮ ಕಾಽಲ ನಾವ್ಯಾಕ ತೊಳೆಯುನು ಧೊರಿಯ|
ಚಿತ್ತ ಬಲ್ಲವರಽ ಗುಣಾಕಾಽಗಿ ||೫||
ಆರೂರ ರಾಽಜ್ಯ ನಿಮ ತಮ್ಮ ಆಳಿದರೇನ|
ನತ್ತಿಗಿ ನಮ ಕಾಲ ತೊಳಽದೆಲ್ಲ|
ನೆತ್ತಿಗಿ ನಿಮ ಕಾಲ ನಾವ್ಯಾಕ ತೊಳೆಯುನು ಧೊರಿಯ|
ಮುತ್ತೈೈದಿತನಽ ಪಡಽದೇವ ||೬||
* * *
ಬಾಳಿಯ ಕಾಯಾಂಽಗ ಬಾಗಿ ಬಂದಳ ಬಾಲಿ|
ಭಾಗ ಕೊಡು ರಾಯಾಽ ಎಡಽದಲ್ಲಿ||
ಭಾಗ ಕೊಡು ರಾಽಯ ಎಡದಲಿ ಸಾವಿರದ|
ಮಾಣೀಕ್ಹೇರವರಽ ಮಗಽಳೀಗಿ ||೭||
ನಿಂಬಿ ಕಾಯ್ಹಾಂಽಗ ತುಂಬಿ ಬಂದಳ ಬಾಲಿ|
ಇಂಬ ಕೊಡು ರಾಯಾಽ ಎಡಽದಲ್ಲಿ||
ಇಂಬ ಕೊಡು ರಾಽಯ ಎಡದಲ್ಲಿ ಸಾವಿರದ|
ಒಜ್ಜಿರ್‍ಹೇರವರಽ ಮಗಳೀಗಿ ||೮||
* * *
ರಾಜರಾಜರು ಕೂಽಡಿ ರಾಜೆಲ್ಲ ಹುಡುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವೀನ||
ಮತ್ತೆಲ್ಲಿ ತಂದ್ಯೋ ಚೆಲವೀನ ಹಲಸಂಗಿ|
ಆಗರದಾಗಿತ್ತೊಂದರಽಗಿಣಿಯ ||೯||
ಶೆಟ್ಟಿ ಶೆಟ್ಟೆರು ಕೂಽಡಿ ದಿಕ್ಕೆಲ್ಲಾ ಹುದುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವಿನ||
ಮತ್ತೆಲ್ಲಿ ತಂಜ್ಯೊ ಚೆಲವೀನ ಹಲಸಂಗಿ|
ಬಾಳಿ ಬನೆದಾನೊಂದರಽಗಿಣಿಯ ||೧೦||
*****
ವಧುವರರಿಗೆ ಸರ್ವಜನರು ಕೂಡಿ ಅಕ್ಕೀಕಾಳು (ಅಕ್ಷತೆ) ಒಗೆದ ಮೇಲೆ ತುಸು ಹೊತ್ತಿನಲ್ಲಿ ಅವರಿಂದ ನಗೆಯಾಟವನ್ನು ಆಡಿಸುತ್ತಾರೆ. ಆಗ ಒಬ್ಬರು ಅಡಿಕೆಯನ್ನು ಗಟ್ಟಿಯಾಗಿ ಹಿಡಿಯಬೇಕು; ಇನ್ನೊಬ್ಬರು ಅದನ್ನು ಬಿಡಿಸಿಕೊಳ್ಳಬೇಕು. ಆಗ ಸುತ್ತಮುತ್ತಲಿನ ಹೆಣ್ಣುಮಕ್ಕಳು ಈ ಹಾಡನ್ನು ಹಾಡುವರು.
ಛಂದಸ್ಸು:- ತ್ರಿಪದಿ.
ಶಬ್ದಪ್ರಯೋಗಗಳು:- ಐದು ಅಕ್ಷರ=ಶಿವಪಾರ್ವತಿ ಎಂಬ ಐದು ಅಕ್ಷರಗಳಾಗಿರಬಹುದು. ಮಲ್ಲಿಗ್ಹೂವಿನ ಕ್ರಮದಿಂದ= (ಅಡಿಗಳು) ಮಲ್ಲಿಗೆಯಂತೆ ಮೃದುವಾಗಿವೆಯೆಂದು ಭಾವಿಸಿ. ಪಾದಲಿ=ಪಾದದಲ್ಲಿ. ಪದಮ=ಪದ್ಮಚಿಹ್ನ. ಬಲಬಂದು=ಬಲವು ಬರಲಿ. ಬಟ್ಟಲಿ=ಬೆರಳಲ್ಲಿ. ಒಂಕಿ=ತೋಳಿನ ಆಭರಣ. ಸರಗಿ=ಕೊರಳಿನ ಆಭರಣ. ಕಾಯಾಂಗ-ಕಾಯಿಯಂತೆ. ಭಾಗ=ಸ್ಥಳ.