ವಿವಾಹದ ಏರ್ಪಾಡುಗಳೆಲ್ಲವೂ ನಡೆದುವು. ವೈದ್ಯರೊಡನೆ ಆಲೋಚಿಸಿಲು, ಅವರು ಫೆಬ್ರವರಿ ತಿಂಗಳಲ್ಲಿ ವಿವಾಹವು ನಡೆಯ ಬಹುದೆಂದು ಹೇಳಿದರು. ಇದು ನಡೆದುದು ಡಿಸೆಂಬರ್ ತಿಂಗಳಲ್ಲಿ. ಹೀಗೆ ಕೆಲವು ವಾರಗಳು ಆನಂದದಿಂದ ಕಳೆದು ಹೋದುವು.
ವಿವಾಹದ ಪ್ರಯತ್ನಗಳನ್ನು ನಡೆಯಿಸುತ್ತ, ;ಗ್ನದ ಶುಭ ದಿನವನ್ನು ನೀರೀಕ್ಷಿಸಿಕೊಂಡಿರುವಾಗ ಮೇರಿಯಸ್ಸನು ಬಹಳ ಜಾಗರೂಕತೆಯಿಂದ ಆಲೋಚಿಸಿದುದರಲ್ಲಿ ಕೆಲವು ಕ್ಲಿಷ್ಟ ವಿಚಾರ ಗಳು ಅವನ ಮನಸ್ಸಿಗೆ ಬಂದು, ಅವನು ಬಹು ಮಂದಿಗೆ ಕೃತಜ್ಞ ನಾಗಿರಬೇಕಾದ ಸಂದರ್ಭಗಳಿದ್ದುವೆಂದು ಕಂಡುಬಂದಿತು. ಕೆಲ ವರಿಗೆ ತನ್ನ ತಂದೆಯ ನಿಮಿತ್ತವಾಗಿಯೂ ಇನ್ನೂ ಕೆಲವರಿಗೆ ತನ್ನ ನಿಮಿತ್ತವಾಗಿಯೂ ಅವನು ಋಣಿಯಾಗಿದ್ದನು. ಥೆನಾರ್ಡಿಯರ ನೊಬ್ಬನು, ತನ್ನ ನ್ನು (ಮೇರಿಯಸ್ಸನನ್ನು) ಜಿಲ್ಲೆ ನಾರ್ಮಂಡನ ಮನೆಗೆ ತಲಪಿಸಿದ ಅಜ್ಞಾತ ಪುರುಷನೊಬ್ಬನು-ಇವರಿಬ್ಬರನ್ನೂ ಕಂಡುಹಿಡಿಯಲೇಬೇಕೆಂದು ಅವನು ಹಠಹಿಡಿದು ಪ್ರಯತ್ನಿಸಿದನು. ಇವರನ್ನು ಕಂಡು ತನ್ನ ಕರ್ತವ್ಯದಂತೆ ಅವರ ಋಣಗಳಿಂದ ತಾನು ಮುಕ್ತನಾಗದೆ ಇದ್ದರೆ ಮುಂದೆ ಪ್ರಖ್ಯಾತನಾಗಿ ಬದು ಕುವ ಕಾಲಕ್ಕೆ, ತನ್ನ ಜೀವಿತಕ್ಕೆ ಕಳಂಕವುಂಟಾದೀತೆಂಬ ಭಯ ದಿಂದ, ಅವರು ದೊರೆಯುವವರೆಗೂ ಮದುವೆಯನ್ನು ಒಲ್ಲದೆ ಸುಖಸಂತೋಷಗಳನ್ನೂ ಗಮನಿಸದೆ, ಅವರ ಸ್ಮರಣೆಯಲ್ಲಿಯೇ ಇದ್ದನು.
ಮೇರಿಯಸ್ಸನು ಕಳುಹಿಸಿದ್ದ ಅನೇಕ ಮಂದಿಯಲ್ಲಿ ಒಬ್ಬ ರಾದರೂ ಥೆನಾರ್ಡಿಯರನ ಸಮಾಚಾರವನ್ನು ತಿಳಿದುಬರಲಾರದೆ ಹೋದರು. ಇದರಿಂದ ಆ ಪ್ರಯತ್ನವು ಅಸಾಧ್ಯವಾಗಿ ಕಂಡಿತು. ಮೇರಿಯಸ್ಸನ ಪ್ರಾಣವನ್ನುಳಿಸಿದವನ ವಿಷಯದಲ್ಲಾದರೋ, ಆರಂಭದ ಪ್ರಯತ್ನಗಳು ಸ್ವಲ್ಪ ಫಲಕಾರಿಯಾಗಿ ಕಂಡು, ಮುಂದೆ ಏನೂ ತಿಳಿಯದೆ ಹೋಯಿತು.
ಮೇರಿಯಸ್ಸನಿಗೆ ಹಿಂದಣ ವಿಷಯಗಳು ಯಾವುವೂ ಜ್ಞಾಪಕವಿಲ್ಲವೆಂದು ಹೇಳಿದೆನಷ್ಟೆ. ಅವನು ಜಿಲ್ಲೆ ನಾರ್ಮಂಡನ ಮನೆಗೆ ಬಂದ ಮೇಲೆಯೇ ಅವನಿಗೆ ಜ್ಞಾನವು ಬಂದುದು. ಈ ವಿಚಿತ್ರ ಗೂಢ ವೃತ್ತಾಂತಗಳಲ್ಲಿ ಒಂದೂ ಅವನಿಗೆ ಗೋಚರ ವಿರಲಿಲ್ಲ.
ಮೇರಿಯಸ್ಸನು ತನ್ನ ತಾತನ ಮನೆಗೆ ತರಲ್ಪಟ್ಟಾಗ ಧರಿಸಿದ್ದ ರಕ್ತಮಯವಾದ ವಸ್ತ್ರಗಳ ಮೂಲಕ ತಾನು ಹುಡುಕುತ್ತಿರುವ ಮನುಷ್ಯರನ್ನು ಕಂಡು ಹಿಡಿಯಲು ಸಾಧ್ಯವಾಗಬಹುದೆಂಬ ಭರವಸದಿಂದ, ಅವನು ಅವುಗಳನ್ನು ಜೋಪಾನವಾಗಿ ಇಟ್ಟಿದ್ದನು. ಆಗಿನ ಉಡುಪುಗಳನ್ನು ಪರೀಕ್ಷಿಸಿ ನೋಡಿದುದರಲ್ಲಿ, ಒಂದರ ಅಂಚನ್ನು ವಿಚಿತ್ರವಾಗಿ ಕತ್ತರಿಸಿದ್ದುದು ಕಂಡಿತು. ಅಲ್ಲದೆ ಹರಿದ ತುಂಡು ಇರಲಿಲ್ಲ.
ಮದುವೆಗೆ ಸ್ವಲ್ಪ ದಿನಗಳ ಮೊದಲು ಜೇನ್ ವಾಲ್ಜೀನನ ಬಲಗೈಯ ಹೆಬ್ಬೆರಳಿಗೆ ದೆಬ್ಬೆ ತಗುಲಿ ಸ್ವಲ್ಪ ಜಜ್ಜಿತಂತೆ, ಅದು ಅಷ್ಟು ಪ್ರಬಲವಾದ ಗಾಯವಲ್ಲದಿದ್ದರೂ, ಅದಕ್ಕೆ ಔಷಧ ಹಾಕಿ ಕಟ್ಟುವುದಕ್ಕಾಗಲಿ, ಕಡೆಗೆ ಅದನ್ನು ನೋಡುವುದಕ್ಕಾಗಲಿ ಅವನು ಯಾರಿಗೂ, ಎಂದರೆ ಕೋಸೆಟ್ಟಳಿಗೂ ಸಹ, ಅವಕಾಶ ಕೊಡಲಿಲ್ಲ. ಆದರೂ ಅವನು ಕೈಗೆ ಕಟ್ಟನ್ನು ಕಟ್ಟಿಕೊಂಡು, ತೋಳನ್ನು ತೂಗ ಹಾಕಿಕೊಂಡಿದ್ದನು. ಈಗ ರುಜು ಹಾಕುವುದಕ್ಕೂ ಸಾಧ್ಯ ವಿಲ್ಲವಾಯಿತು. ಜಿಲ್ಲೆ ನಾರ್ಮಂಡನೇ ಇವನಿಗೆ ಪ್ರತಿಯಾಗಿ ಕೋಸೆಟ್ಟಳ ಮೇಲುವಿಚಾರಣೆಗೆ ನಿಂತನು.
ಮದುವೆಯು ‘ ನೆರವೇರಿದನಂತರ ರೂ ಡೆಸ್ ಫೈಲ್ಸ್ ಡ್ಯೂ ಕಲ್ವೇರ್ ಬೀದಿಯಲ್ಲಿದ್ದ ತಮ್ಮ ಮನೆಗೆ ಬಂದರು. ಹಿಂದೆ ಮರಣಾವಸ್ಥೆಯಲ್ಲಿ ತನ್ನನ್ನು ಹೊತ್ತು ತಂದ ಮಹಡಿಯ ಮೆಟ್ಟಿಲುಗಳ ಮೇಲೆ ಮೇರಿಯಸ್ಸನು ಕೋಸೆಟ್ಟಳೊಡಗೂಡಿ ವಿಜಯಶಾಲಿಯಾಗಿಯ, ತೇಜಸ್ವಿಯಾಗಿಯ, ಹತ್ತಿ ಬಂದನು. ಮನೆಯ ಮುಂದೆ ಬಡ ಜನರ ಗುಂಪು ಸೇರಿತ್ತು. ದಂಪತಿ ಗಳಿಬ್ಬರೂ ಯಥಾಶಕ್ತಿಯಾಗಿ ಬಡ ಜನರಿಗೆ ಹಣವನ್ನು ದಾನ ಕೊಟ್ಟರು. ನೆರೆದ ಜನರೆಲ್ಲರೂ ಹೂಮಳೆಗರೆದು ಗಂಡಹೆಂಡಿರನ್ನು ಒಮ್ಮನಸ್ಸಿನಿಂದ ಸುಖಜೀವಿಗಳಾಗಿ ಬಾಳಿರೆಂದು ಹರಸಿದರು. ಪುಷ್ಟರೂ ಸಂತೋಷವು ಫಲಿಸಿತು. ದಂಪತಿಗಳು ದೇವಲೋಕ ಗಾನಲೀನರಾದಂತೆ ದಿವ್ಯಾನಂದದಲ್ಲಿದ್ದರು. ದೈವಾನುಗ್ರಹದಿಂದ ತುಂಬಿದ ಇವರ ಆತ್ಮಗಳು ಸಂತೋಷದಿಂದ ನಲಿಯುತ್ತಿದ್ದುವು. ವಿಧಿಯ ಲೀಲೆಯು, ಅವರ ಮನಸ್ಸಿಗೆ, ತಮ್ಮ ತಲೆಯಮೇಲೆ ಕಾಂತಿಯಿಂದ ಬೆಳಗುವ ನಕ್ಷತ್ರಮಂಡಲದಂತೆ ಮನೋಹರ ವಾಗಿತ್ತು. ಈ ಸಮಯವು ಅವರಿಗೆ ತಮ್ಮ ಮುಂದಣ ಭಾಗ್ಯ ಪ್ರಕಾಶವನ್ನು ಸೂಚಿಸುವ ಸೂರ್ಯೋದಯದಂತೆ ಇತ್ತು.
ಜೀನ್’ ವಾಲ್ಜೀನನು ಹಿಂದಿರುಗಿ ಮನೆಗೆ ಬಂದು ದೀಪವನ್ನು ಹಚ್ಚಿ ಮಹಡಿಯ ಮೇಲಕ್ಕೆ ಹೋದನು. ಈಗ ಕಟ್ಟಿದ್ದ ತೋಳಿನ ಕಟ್ಟನ್ನು ಬಿಚ್ಚಿ, ಎಂದಿನಂತೆ ಬಲಗೈಯನ್ನು ಉಪ ಯೋಗಿಸಲಾರಂಭಿಸಿದನು.
ತರುವಾಯ ಹಾಸುಗೆಯ ಬಳಿಗೆ ಬರುವಲ್ಲಿ, ಹಿಂದೆ ಕೋಸೆ ಟ್ಟಳು ‘ಅಗಲಲಾಗದ ಅತಿ ವಸ್ತು’ ಎಂದು ಹೆಸರಿಟ್ಟು ಅಸೂಯೆ ಪಡುತ್ತಿದ್ಧ, ಆ ಚಿಕ್ಕ ಹಸಿಬೆಯ ಚೀಲದ ಮೇಲೆ ಅವನ ದೃಷ್ಟಿಯು ಬಿತ್ತು. ಇದನ್ನು ಇವನು ಹಿಂದೆ, ಅಗಲಿರುತ್ತಲೇ ಇರಲಿಲ್ಲ. ಈಗ ಬಹಳ ಉಲ್ಲಾಸದಿಂದ ಅದರ ಬಳಿಗೆ ಹೋಗಿ, ತನ್ನ ಜೇಬಿ ನಿಂದ ಬೀಗದಕೈಯನ್ನು ತೆಗೆದು, ಆ ಹಸಿಬೆಯನ್ನು ತೆರೆದನು.
ಹತ್ತು ವರ್ಷಗಳ ಹಿಂದೆ ಕೋಸೆಟ್ಟಳು ಮಾಂಟ್ ಫರ್ ಮೆಯಿಲ್ ಎಂಬ ಊರನ್ನು ಬಿಟ್ಟು ಬಂದಾಗ ಧರಿಸಿದ್ದ ಉಡುಪು ಗಳನ್ನು ಮೆಲ್ಲನೆ ಹೊರಕ್ಕೆ ತೆಗೆದನು. ಮೊದಲು ಚಿಕ್ಕ ಉಡು ಪನ್ನೂ ಅನಂತರ ಕಪ್ಪು ಕೊರಳಪಟ್ಟಿಯನ್ನೂ ತರುವಾಯ, ಭಾರವಾಗಿದ್ದ ಅವಳ ಜೋಡುಗಳನ್ನೂ ತೆಗೆದನು. ಕೋಸೆಟ್ಟಳ ಪಾದ ಗಳು ಪುಟ್ಟ ಪುಟ್ಟವಾಗಿದ್ದುದರಿಂದ, ಅವು ಈಗಲೂ ಅವಳು ಧರಿಸ ಬಹುದೆಂಬಂತೆ ಇದ್ದುವು. ಆಮೇಲೆ ಬಲು ದಪ್ಪವಾಗಿದ್ದ ಅವಳ ಕುಪ್ಪಸವನ್ನೂ, ಜೇಬುಗಳಿದ್ದ ಅಂಗಿಯನ್ನೂ , ಉಣ್ಣೆಯ ಕಾಲು ಚೀಲಗಳನ್ನೂ ತೆಗೆದನು. ಮುದ್ದಾದ ಪುಟ್ಟ ಪುಟ್ಟ ಕಾಲುಗಳ ಆಕಾರವು ಇನ್ನೂ ಇವುಗಳ ಮೇಲೆ ಅಂದವಾಗಿ ಕಾಣುತ್ತಿದ್ದವು. ಈ ಕಾಲುಚೀಲಗಳು ಜೀನ್ ವಾನನ ಕೈಗಳಿಗಿಂತಲೂ ಉದ್ದ ವಾಗಿರಲಿಲ್ಲ. ಇವೆಲ್ಲವೂ ಕಪ್ಪು ಬಣ್ಣದವುಗಳಾಗಿದ್ದುವು. ಈ ಉಡುಪುಗಳೆಲ್ಲವನ್ನೂ ಹಸಿಬೆಯ ಚೀಲದಿಂದ ತೆಗೆದು ಹಾಸುಗೆಯ ಮೇಲಿಟ್ಟು, ಆಲೋಚಿಸುತ್ತ ಕುಳಿತನು. ಹೀಗೆ ಬಹಳ ಹೊತ್ತು ತನ್ನ ಹಿಂದಣ ಕಥೆಗಳೆಲ್ಲವನ್ನೂ ಸ್ಮರಿಸುತ್ತ ಹಸುಗೆಯ ಪಕ್ಕದಲ್ಲಿ ಕುಳಿತಿದ್ದು, ಆ ಮಹನೀಯ ನಾದ ವೃದ್ಧನು ತಟ್ಟನೆ ಹಾಸುಗೆಯ ಮೇಲೆ ಬಿದ್ದುಕೊಂಡನು. ವಯೋ ಧರ್ಮದಿಂದ ವೈರಾಗ್ಯ ಹುಟ್ಟಿದ್ದರೂ ಅವನಿಗೆ ಎದೆ ಯೊಡೆಯುವಂತಹ ದುಃಖವು ಉಕ್ಕಿ ಬಂತು. ಅವನ ಮುಖವು ಕೋಸೆಟ್ಟಳ ಉಡುಪುಗಳಲ್ಲಿ ಮುಚ್ಚಿ ಹೋಗಿದ್ದಿತು. ಮಹಡಿಯ ಮೆಟ್ಟಲಮೇಲೆ ಯಾರಾದರೂ ಆಗ ಸಂಚರಿಸುತ್ತಿದ್ದಿದ್ದರೆ ಅವರ ಕಿವಿಗೆ ಭಯಂಕರವಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವೇ ಕೇಳಿಬರುತ್ತಿತ್ತು.
*****
ಮುಂದುವರೆಯುವುದು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ