ಜೀನ್ ವಾಲ್ಜೀನನು ವಿಶಾಲವಾದ ಮತ್ತು ವಿಚಿತ್ರವಾದ ಒಂದು ತೋಟಕ್ಕೆ ಬಂದು ಇಳಿದನು. ಈ ತೋಟವು ಚಳಿಗಾಲದ ರಾತ್ರಿಯಲ್ಲಿ ಕಾಣುವಂತೆ ಮಂಕುಮಂಕಾಗಿತ್ತು, ಅಕಾಲವಾ ದುದರಿಂದ ಸ್ವಭಾವವಾಗಿ ಅಲ್ಲಿ ಯಾರೂ ಇರಲಿಲ್ಲ. ಆ ಸ್ಥಳವನ್ನು ನೋಡಿದರೆ ಹಗಲಲ್ಲಿ ಸಹ ಯಾರೂ ಅಲ್ಲಿ ಸಂಚರಿಸುವಂತೆ ಇರಲಿಲ್ಲ.
ಕೋಸೆಟ್ಟಳು ನಡುನಡುಗುತ್ತ ಅವನನ್ನು ಒತ್ತಿ ಹಿಡಿದು ಕೊಂಡಳು. ಗಸ್ತಿನವರು ಆ ಕಲ್ ಡಿ ಸ್ಯಾಕ್ ಸ್ಮಳವನ್ನೂ ಮತ್ತು ಬೀದಿಯನ್ನೂ ಶೋಧನೆಮಾಡಿ ಹುಡುಕುತ್ತಿರುವಾಗ ಗದ್ದಲವೂ, ಕಲ್ಲುಗಳ ಮೇಲೆ ಅವರು ಹೊಡೆಯುತ್ತಿದ್ದ ಅವರ ಸನೀನುಗಳ ಶಬ್ಬವೂ, ಜೇವರ್ಟನು, ತಾನು ಅಲ್ಲಲ್ಲಿ ನಿಲ್ಲಿಸಿದ ಕಾವಲುಗಾರ ರನ್ನು ಕೂಗಿ ಆಕ್ಷೇಪಿಸುತ್ತಿದ್ದ ಅಸ್ಪಷ್ಟವಾದ ಮಾತುಗಳೂ ಸಹ ಇವರಿಗೆ ಕೇಳಬಂದುವು.
ಸುಮಾರು ಕಾಲು ಗಂಟೆಯ ಹೊತ್ತಿಗೆ, ಈ ಪ್ರಬಲವಾದ ಗದ್ದಲವು ದೂರದೂರಕ್ಕೆ ಹೋಗುತ್ತಿದ್ದಂತೆ ತೋರಿದುದಲ್ಲದೆ ಕಡೆಗೆ ಸದ್ದು ಅಡಗಿ ಶಾಂತಿಯು ನೆಲೆಗೊಂಡಿತು.
ಹೀಗೆ ಸಂಪೂರ್ಣ ಶಾಂತಸ್ಥಿತಿಯಿಂದ ಅಲ್ಲಿ ಎಲ್ಲವೂ ನಿಶ್ಯಬ್ದ ವಾಗಿರುವಾಗ ಹಠಾತ್ತಾಗಿ ಒಂದು ಹೊಸ ಧ್ವನಿಯು ಕೇಳ ಬಂದಿತು. ಹಿಂದೆ ಕೇಳಿದ ಧ್ವನಿಗಳು ಎಷ್ಟು ಭಯಂಕರ ವಾಗಿದ್ದುವೋ, ಈ ಧ್ವನಿಯು ಅಷ್ಟೂ ಅಷ್ಟು ಅನಿರ್ವಾಚ್ಯವಾದ ಆನಂದವನ್ನು ಕೊಡುವ ಸ್ವರ್ಗೀಯ ದೇವಧ್ವನಿಯಂತೆ ಇತ್ತು. ಇದು, ಆ ರಾತ್ರಿಯ ಪರಿಪೂರ್ಣ ಶಾಂತಿಸ್ಥಿತಿಯಲ್ಲಿ ಕತ್ತಲೆ ಯಿಂದ ಹೊರಹೊರಟ ಆಶ್ಚರ್ಯಕರವಾದ ಮತ್ತು ಮಧುರವಾದ ಪ್ರಾರ್ಥನಾ ಗೀತವು.
ಕೋಸೆಟ್ಟಳೂ ಮತ್ತು ಜೀನ್’ ವಾಲ್ಜೀನನೂ ಮೊಣಕಾಲೂರಿ ಕುಳಿತರು. ಈ ಧ್ವನಿಯೇನೆಂಬುದು ಅವರಿಗೆ ಗೊತ್ತಾಗ ಲಿಲ್ಲ ; ತಾವೆಲ್ಲಿರುವೆವೆಂಬುದೂ ಅವರಿಗೆ ಗೋಚರವಾಗಲಿಲ್ಲ. ಆದರೂ ತನ್ನ ಅಪರಾಧಕ್ಕಾಗಿ ಪಶ್ಚಾತ್ತಾಪಕ್ಕೆ ಒಳಗಾಗಿದ್ದ ಆ ಮನುಷ್ಯನಿಗೂ ನಿರಪರಾಧಿಯಾಗಿದ್ದ ಆ ಮಗುವಿಗೂ ಸಹ ಆ ಗೀತವನ್ನು ಕೇಳಿದೊಡನೆಯೇ ಮೊಣಕಾಲೂರಿ ನಮಸ್ಕರಿಸ ಬೇಕೆಂಬ ಭಕ್ತಿಭಾವವುಂಟಾಯಿತು.
ಆ ತೋಟವ ಸಾಧುಗಳ ಮಠಕ್ಕೆ ಸೇರಿದುದಾ ಗಿತ್ತು. ಅವರು ಕೇಳಿದ ಗಾನವು ಅಲ್ಲಿನ ಯೋಗಿನಿಯರು ಹಾಡಿದ ಗೀತವು. ಸ್ವಲ್ಪ ಹೊತ್ತಿನಲ್ಲಿಯೇ ಜೀನ್ ವಾಲ್ಜೀನನಿಗೆ ಒಂದು ಸಣ್ಣ ಗಂಟೆಯ ಶಬ್ಬವು ಕೇಳಿಬಂತು. ಆ ಸಮಯದಲ್ಲಿಯೇ ಆ ತೋಟದಲ್ಲಿ ಒಬ್ಬ ಮನುಷ್ಯನು ಸಂಚರಿಸುತ್ತಿದ್ದುದೂ ಕಣ್ಣಿಗೆ ಬಿತ್ತು. ಇಷ್ಟು ಹೊತ್ತಿಗೆ ಕೋಸೆಟ್ಟಳಿಗೆ ಕಳವು ಬಂದು ಬಿದ್ದುಬಿಟ್ಟಳು. ಇದರಿಂದ ಇವನು ಆ ಕ್ಷಣವೇ ಯಾರಿಂದ ಲಾದರೂ ಸಹಾಯವನ್ನು ಪಡೆಯಲೇಬೇಕಾಗಿ ಬಂತು.
ಅವನು ತನ್ನ ಒಳ ಅಂಗಿಯ ಜೇಬಿನಲ್ಲಿದ್ದ ಹಣದ ನೋಟು ಗಳ ಸುರುಳೆಯನ್ನು ಕೈಗೆ ತೆಗೆದುಕೊಂಡು ನೆಟ್ಟನೆ ಆ ಮನುಷ್ಯನ ಬಳಿಗೆ ಹೋದನು,
ಆ ಮನುಷ್ಯನು ತಲೆಯನ್ನು ಬಗ್ಗಿಸಿಕೊಂಡು ಹೋಗು ತ್ತಿದ್ದನಾದುದರಿಂದ ಇವನು ಬರುತ್ತಿದ್ದುದು ಆತನಿಗೆ ಕಾಣಲಿಲ್ಲ. ಇನ್ನೂ ಕೆಲವು ಹೆಜ್ಜೆಗಳು ಮುಂದುವರಿದು ಜೀನ್ ವಾಲ್ಜೀನನು ಆತನ ಪಕ್ಕಕ್ಕೆ ಹೋಗಿ, ಒಂದು ನೂರು ಫಾಂಕುಗಳು !’ ಎಂದು ಕೂಗಿದನು.
ಆ ಮನುಷ್ಯನು ಬೆಚ್ಚಿ ತಲೆಯೆತ್ತಿದನು.
ಆಗ ಜೀನ್ ವಾಲ್ಜೀನನು, 1 ಈ ರಾತ್ರಿ ನನಗೆ ಆಶ್ರಯವನ್ನು ಕೊಟ್ಟರೆ ನೂರು ಫಾಂಕುಗಳನ್ನು ಕೊಡುವೆನು,’ ಎಂದನು.
ದಿಕ್ಕು ತೋರದೆ ನಿಂತಿದ್ದ ಜೀನ್ ವಾಲ್ಜೀನನ ಮುಖದ ಮೇಲೆ ಚೆನ್ನಾಗಿ ಬೆಳ್ದಿಂಗಳು ಬಿದ್ದಿತ್ತು, ಆಗ ಆ ಮನುಷ್ಯನು, ” ಏನಿದು ? ಫಾದರ್ ಮೇಡಲಿನರೇ ? ‘ ಎಂದನು.
ಹೀಗೆ, ಇಂತಹ ಹೆಸರು, ಇಂತಹ ನಿಶಿಯಲ್ಲಿ ತನ್ನ ಕಷ್ಟ ಸ್ಥಿತಿ ಯಲ್ಲಿ, ಈ ಅಪರಿಚಿತ ಸ್ಥಳದಲ್ಲಿ, ಈ ಅಪರಿಚಿತನಿಂದ ಉಚ್ಚರಿಸಲ್ಪ ಟ್ಟುದನ್ನು ಕೇಳಿ, ಜೀನ್ ವಾಲ್ಜೀನನು ಬೆಚ್ಚಿ ಹಿಂಜಗ್ಗಿ, ‘ಸ್ವಾಮೀ, ನೀವು ಯಾರು? ಈ ಮನೆ ಯಾವುದು?’ ಎಂದು ಆತನನ್ನು ಕೇಳಿದನು.
ಆಗ ಆ ಮುದುಕನು, ಆಶ ರ್ಯದಿಂದ, ಓಹೋ ! ಈಗ ಚೆನ್ನಾಯಿತು ! ನೀವು ಯಾರಿಗಾಗಿ ಈ ಸ್ಥಳವನ್ನು ಕೊಡಿಸಿ ಕೊಟ್ಟಿರೋ ಅವನೇ ನಾನು ; ಈ ಮನೆಯೂ, ನೀವು ನನಗೆ ನಿಲ್ಲುವುದಕ್ಕೆ ಮಾಡಿಕೊಟ್ಟ ಸ್ಥಳವು. ಇದೇನು ? ನಿಮಗೆ ನನ್ನ ಜ್ಞಾಪಕವಿಲ್ಲವೆ ?’ ಎಂದನು.
ಅದಕ್ಕೆ ಜೀನ್ ವಾಲ್ಜೀನನು, ಇಲ್ಲ ; ನನಗೆ ಜ್ಞಾಪಕವಿಲ್ಲ. ನಿಮಗೆ ನನ್ನ ಪರಿಚಯವಾಗಿರುವುದು ಹೇಗೆ ?’ ಎಂದನು.
ಅದಕ್ಕೆ ಆ ಮನುಷ್ಯನು, ‘ನೀವು ನನ್ನ ಪ್ರಾಣವನ್ನುಳಿಸಿದಿರಿ,’ ಎಂದನು.
ಜೀನ್ ವಾಲ್ಜೀನನು ಪಕ್ಕಕ್ಕೆ ತಿರುಗುವಷ್ಟರಲ್ಲಿ, ಆ ಮುದು ಕನ ಮುಖದ ಮೇಲೆ ಆಗ ಬೆಳ್ದಿಂಗಳು ಚೆನ್ನಾಗಿ ಬೀಳಲು, ಆತನು ಹಿಂದೆ ತಾನು ಉಳಿಸಿದ್ದ ಫಾದರ್ ಫಾಚೆಲ್ ವೆಂಟ್ ಎಂಬಾ ತನೆಂದು ಅವನಿಗೆ ಗುರುತು ಸಿಕ್ಕಿತು,
ಆಗ ಜೀನ್ ವಾಲ್ಜೀನನು, ‘ ಓಹೋ ! ತಾವೇ ? ಅಹುದು, ಈಗ ನನಗೆ ಗುರುತು ಸಿಕ್ಕಿತು,’ ಎಂದನು.
ಮುದುಕನು, ” ಇದು ನನ್ನ ಅದೃಷ್ಟವೇ ಸರಿ !’ ಎಂದನು.
ಜೀನ್ ವಾಲ್ಜೀನನ್ನು, ತಾನು ಮೇಡಲಿನ್ ಎಂಬ ಹೆಸರಿ ನಿಂದಿದ್ದಾಗಲಾದರೂ ಈತನಿಗೆ ತನ್ನ ಪರಿಚಯವಿದ್ದಿತೆಂಬ ಕಾರಣ ದಿಂದ ಇನ್ನು ಹೆಚ್ಚಾದ ಜಾಗರೂಕತೆ ಅವನಿಗೆ ಬೇಕಾಗಲಿಲ್ಲ. ಅನೇಕ ಪ್ರಶೋತ್ತರಗಳು ನಡೆದುವು. ಕೂಡಲೆ ಅವರಿಬ್ಬರ ಸ್ಥಿತಿ ಗಳೂ ಮೊದಲಿದ್ದುದಕ್ಕೆ ವಿರೋಧವಾಗಿ, ಒಬ್ಬರ ಸ್ಥಿತಿಯು ಮತ್ತೊಬ್ಬರಿಗೆ ಬಂದಿತ್ತು. ಜೀನ್ ವಾನನೇ ಅನೇಕ ಪ್ರಶ್ನೆ ಗಳನ್ನು ಹಾಕತೊಡಗಿದನು. ‘ ನಿಮ್ಮ ಮೊಣಕಾಲಿಗೆ ಘಂಟೆ ಕಟ್ಟಿರುವುದು ಏತಕ್ಕೆ ?’ ಎಂದನು.
ಅದಕ್ಕೆ ಫಾಚೆಲ್‌ವೆಂಟನು, ” ಅದೋ ? ಅದು, ಅವರು ನನ್ನ ಬಳಿಗೆ ಬಾರದೆ ದೂರವಾಗಿರಬೇಕೆಂದು ಕಟ್ಟಿಕೊಂಡಿರುವುದು,’ ಎಂದನು.
‘ ಏನು ? ನಿಮ್ಮ ಬಳಿಗೆ ಬಾರದೆ ದೂರವಾಗಿರುವುದೇ ? ಅದು ಹೇಗೆ ? ‘ ಎಂದು ಜೀನ್ ವಾಲೀ ನನು ಕೇಳಿದಾಗ ಮುದಿ ಫಾಚೆಲ್ ವೆಂಟನು ವಿಚಿತ್ರ ರೀತಿಯಿಂದ ಕಣ್ಣು ಮಿಟಿಕಿಸಿ, ‘ ಅಯ್ಯೋ ! ಏನೆಂದು ಹೇಳಲಿ ; ಈ ಮನೆಯಲ್ಲಿ ಸ್ತ್ರೀಯರಲ್ಲದೆ ಬೇರೆ ಯಾರೂ ಇಲ್ಲ. ಅವರು ನನ್ನನ್ನು ಸಂಧಿಸುವುದು ಬಹಳ ಅಪಾಯ ಕರವಂತೆ ! ಈ ಘಂಟೆಯ ಶಬ್ಬವು ಅವರಿಗೆ ಎಚ್ಚರಿಕೆಯನ್ನು ಕೊಡು ವುದು. ಇದರಿಂದ ನಾನು ಬಂದೊಡನೆಯೇ ಅವರು ಮರೆಯಾಗು ವರು,’ ಎಂದು ಹೇಳಿದನು.
ಅನಂತರ ಜೀನ್ ವಾಲ್ಜೀನನು, “ ಈ ಮನೆ ಯಾವುದು ?’ ಎಂದು ಕೇಳಿದುದಕ್ಕೆ, ಮುದುಕನು, ‘ ಈ ಮನೆಯು ಪೆಟಿವ್ ವಿಕ್ಪಸ್ ಎಂಬವರ ಮಠವು,’ ಎಂದನು.
ಜೀನ್ ವಾಲ್ಜೀನನು ಮತ್ತಷ್ಟು ಸಮೀಪಕ್ಕೆ ಹೋಗಿ ಮುದುಕನನ್ನು ಕುರಿತು ಗಂಭೀರ ಸ್ವರದಿಂದ ‘ ಫಾದರ್ ಫಾಚೆ ಲ್ ಚೆಂಟರವರೇ, ನಾನು ನಿಮ್ಮ ಪ್ರಾಣವನ್ನುಳಿಸಿದೆನು,’ ಎಂದನು.
ಫಾಚೆಲ್ವೆಂಟ್ – – ಆ ವಿಷಯವನ್ನು ಮೊದಲು ಜ್ಞಾಪ ಕಕ್ಕೆ ತಂದವನು ನಾನೇ ಅಲ್ಲವೇ ?
ಜೀನ್ ವಾಲ್ಟನ್ – ಬಹಳ ಸಂತೋಷ ; ಈಗ ನಾನು ಎರಡು ವಿಷಯಗಳನ್ನು ಕೇಳಿಕೊಳ್ಳುತ್ತೇನೆ.
ಫಾಚೆಲ್‌ವೆಂಟ್ – ಅಂತಹ ವಿಷಯಗಳು ಯಾವವು? ಮಾನಸಿಯುರ್ ಮೆಡಲಿನ್‌ರವರೇ ? ಜೀನ್ ವಾಲ್ಜೀನ್-ಮೊದಲನೆಯದು, ನಿಮಗೆ ನನ್ನ ವಿಚಾರವಾಗಿ ಗೊತ್ತಿರುವ ವಿಷಯಗಳನ್ನು ಯಾರೊಡನೆಯ ಹೇಳ ಲಾಗದೆಂಬುದು; ಎರಡನೆಯದು, ಇನ್ನು ಹೆಚ್ಚಾಗಿ ನನ್ನ ಕಥೆಯನ್ನು ನೀವು ಕೇಳಿ ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸದಿರಬೇಕೆಂಬುದು.
ಫಾಚೆಲ್‌ವೆಂಟ್ – ನಿಮ್ಮ ಇಷ್ಟದಂತೆ ಆಗಲಿ. ನೀವು ಅವಮಾನಕರವಾದ ಕಾರ್ಯವನ್ನು ಮಾಡಲಾರಿರೆಂಬುದನ್ನೂ, ನೀವು ಯಾವಾಗಲೂ ದೈವಪ್ರಿಯರಾದ ಸತ್ಪುಷರೆಂಬುದನ್ನೂ ನಾನು ಬಲ್ಲೆನು, ಇಷ್ಟೇ ಅಲ್ಲದೆ, ನನ್ನನ್ನು ತೋಟಗಾರನನ್ನಾಗಿ ಇಲ್ಲಿಗೆ ತಂದಿರಿಸಿದವರೇ ನೀವು. ಈ ಸ್ಥಳವೂ ನಿಮ್ಮದು; ನಾನೂ ನಿಮ್ಮವನು.
ಜೇನ್ ವಾಲ್ಜೀನ್ – ಬಹಳ ಸಂತೋಷ. ಇನ್ನು ನನ್ನೊಡನೆ ಬನ್ನಿ , ಮಗುವನ್ನು ಎತ್ತಿಕೊಂಡು ಬರೋಣ.
ಫಾಚಲ್‌ವೆಂಟ್–‘ಓಹೋ ! ಮಗುವ ಬೇರೆ ಇದೆಯೇನು?
ಎನ್ನುತ್ತ ಪ್ರತಿಮಾತನ್ನಾಡದೆ, ಪರಮ ವಿಧೇಯನಾಗಿ ಜೀನ್ ವಾಲ್ಜೀನನನ್ನು ಹಿಂಬಾಲಿಸಿ ಹೊರಟನು.
ಅರ್ಧ ಗಂಟೆಯೊಳಗಾಗಿ, ಕೋಸಟ್ಟಳು ಆರೋಗ್ಯ ಹೊಂದಿ ಬೆಂಕಿಯ ಮುಂದುಗಡೆಯಲ್ಲಿ ಹಾಸಿದ್ದ ಆ ತೋಟಗಾರನ ಹಾಸುಗೆಯ ಮೇಲೆ ಮಲಗಿ ನಿದ್ದೆ ಹೋದಳು. ಆ ಇಬ್ಬರೂ ಒಂದು ಮೇಜಿನ ಮೇಲೆ ಮೊಣಕೈಗಳನ್ನೂರಿ ಕುಳಿತು ಬೆಂಕಿಯನ್ನು ಕಾಯಿಸಿಕೊಳ್ಳುತ್ತಿದ್ದರು. ಆ ಮೇಜಿನ ಮೇಲೆ ಫಾಚೆಲ್ ವೆಂಟನು ಸ್ವಲ್ಪ ಹಾಲುಗಿಣ್ಣನ್ನೂ, ರೊಟ್ಟಿಯನ್ನೂ, ಒಂದು ಸೀಸೆ ಯಲ್ಲಿ ಮಧುವನ್ನೂ (wine) ಎರಡು ಗಾಜಿನ ಲೋಟಗಳನ್ನೂ ಇಟ್ಟಿದ್ದನು. ಮುದುಕನು ಜೀನ್ ವಾಲ್ಜೀನನ ಮೊಣಕಾಲ ಮೇಲೆ ಕೈಯನ್ನಿಟ್ಟು, ‘ ಸ್ವಾಮಿ, ಫಾದರ್ ಮೇಡಲಿನರವರೇ, ಮೊದಲು ನಿಮಗೆ ನನ್ನ ಗುರುತು ಸಿಕ್ಕಲಿಲ್ಲವೇ ? ನೀವು ಜನರ ಪ್ರಾಣವನ್ನುಳಿಸಿ ಅನಂತರ ಅವರನ್ನು ಮರೆತುಬಿಡಬಹುದೇ ? ಇದು ಸರಿಯಲ್ಲ. ಅವರು ನಿಮ್ಮನ್ನು ನೆನಪಿನಲ್ಲಿಟ್ಟಿರುತ್ತಾರೆ. ನೀವೇ ಕೃತಜ್ಞರಲ್ಲ,’ ಎಂದನು.
*****
ಮುಂದುವರೆಯುವುದು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ