ಇಂದ್ರಿಯಗಳ ಆಟವ ನಿಲ್ಲಸಯ್ಯಾ
ಕ್ಷಣವೊಮ್ಮೆ ನಿಂತು
ಯೋಚಿಸಬಾರದೇನಯ್ಯಾ
ಬಣ್ಣದ ಲೋಕಕ್ಕೆ ಮಾರು ಹೋಗದಿರಯ್ಯಾ
ತನುವಿನ ಸೌಖ್ಯಕ್ಕೆ ನೂರೆಂಟು ಭೋಗ
ಮತ್ತೆ ಪಾಪಗಳ ಅಳಿಸದ ರೋಗ
ಲಾಲಸೆಗಳ ಪಾಠದಲ್ಲಿ ಕರಗುತ್ತ
ಅನೇಕ ಜನುಮಗಳಿಗೆ ಅಹ್ವಾನ
ಮನಸ್ಸು ಹರಿದ ದಾರಿಯಲಿ ಸಾಗಿ
ನಿನ್ನನೆಲ್ಲೊ ಬಿಟ್ಟು ಹೋದೇನು
ನನ್ನವನಿಗೆ ಅರಸುತ್ತ ಅರಸುತ್ತ
ಕರ್ಮಗಳ ನಡುವೆ ಬೆಂದೆಯೇನು!
ಅಷ್ಟ ಮದಗಳ ಧ್ವಂಸ ಗೊಳಿಸು
ಅನುಮಾನ ಅಹಂಕಾರ ಕಿತ್ತೆಸೆ
ಮನದಲ್ಲಿರಲಿ ದೃಢತೆ ವಿಶ್ವಾಸ
ಮಾಣಿಕ್ಯ ವಿಠಲನಾಗಿ ಮೆರೆಸು
*****