(ಸುಗ್ಗಿ ಕಟ್ಟಿಕೊಂಡು ಹೋದ ಕೂಡಲೆ ಹೇಳುವುದು)
ತಾನತಂದ ತಾನಾ ನಾಽನ ತಂದನಾ
ತಾನ ತಂದಾನಾನೋ ತಂನಾನೇಳಾ ತಾನಾ || ೧ ||
ಮೊಳ್ವಾಲ್ಗ್ ಮಲೆ ಹೋಯ್ಕೋಳೀ ಭೂಮಿ ತನಸೇರಲೀ
ತೆಂಗಲು ಸರೂಗರಕೇ ವಂದೇ ಸಲ ಬಂದೋ ತಾನಾ || ೨ ||
ತಂಗಲು ಊರೂಗರಕೇ ವಂದೇ ಸಲ ಬಂದೋ ನಾರಾಣಸ್ವಾಮೀ
ಸ್ವಾಮೀ ಮಗ್ಗಳಗೇ ಅರಗೊಂಡ ತಾನಾ || ೩ ||
ಸ್ವಾಮೀ ಮಗ್ಗಳಗೇ ಅರಗೊಂಡ ನಾರಾಣಸ್ವಾಮೀ
ದಕ್ಕನಾರಲೇ ವಂದ ಕುಲವರೋ ತಾನಾ || ೪ ||
ದಕ್ಕನಾರಲೇ ವಂದ ಕುಲವರೋ ನಾರಾಣಸ್ವಾಮೀ
ಎದ್ದೊಮ್ಮೆ ವಂದ್ ಮೈಯಾ ಮುರಿವರೋ ತಾನಾ || ೫ ||
ಎದ್ದೊಮ್ಮೆ ವಂದ್ ಮೈಯಾ ಮೂರ್ದಾ ನಾರಾಣಸ್ವಾಮೀ
ಸರಳ ಸಂಡುಕೀ ವಂದೆ ಸರ ಗೆಂಟು ತಾನಾ || ೬ ||
ಸರಳ ಸಂಡುಕೀ ವಂದೇ ಸರ ಲಿಟ್ಲಕಂಡೇ
ಹಾರುಸೇ ಬಂದೆ ಪೋಗಡೇ ವಂದ್ ಹಣ್ದರೋ ತಾನಾ || ೭ ||
ಹಾರುಸೇ ಬಂದೆ ಪೊಗಡೇ ವಂದ್ ಹಣ್ದರೋ ನಾರಾಣಸ್ವಾಮೀ
ಕುಂತಮಂಚುಗಳಾ ವಂದೆ ಜಡುದೆದ್ದ ತಾನಾ || ೮ ||
ಕುಂತಮಂಚುಗಳಾ ವಂದೆ ಜಡುದೆದ್ದ ನಾರಾಣಸ್ವಾಮೀ
ಗಿಂಡಿಯಾರ್ ಸಂಬಾ ವಂದೆ ತಡದರೋ ತಾನಾ || ೯ ||
ಗಿಂಡಿಯಾರ್ ಸಂಬಾ ವಂದಾ ನಾರಾಣಸ್ವಾಮೀ
ದೊಗ್ಗೆಮಾ, ಲುಗ್ಗೀ ಹೆರುಟಾರೋ ತಾನಾ || ೧೦ ||
ದೊಗ್ಗೆಮಾ, ಲುಗ್ಗೀ ಹೆರುಟಾ ನಾರಾಣಸ್ವಾಮೀ
ರಾಜಂಗಲ ಬೀದೇಗಲಿದಾರೋ ತಾನಾ || ೧೧ ||
ರಾಜಂಗಲ ಬೀದೇಗಳದಾ ನಾರಾಣಸ್ವಾಮೀ
ರನ್ನದ್ದಣಪೇನ ವಂದ್ ದಾಟುವರೋ ತಾನಾ || ೧೨ ||
ರನ್ನದ್ದಣಪೇನ ವಂದ್ ದಾಟ್ದ ನಾರಾಣಸ್ವಾಮೀ
ನೆಟ್ಟ ಸಂಪುಗೆ ವಂದೇ ನೆರುಳಲ್ಲಿ ತಾನಾ || ೧೩ ||
ನೆಟ್ಟ ಸಂಪುಗೆ ವಂದೇ ನಡಕರದೆ ನಾರಾಣಸ್ವಾಮೀ
ಮಾವಿನಾ ವಂದು ಬನುಕೇ ನಡೆದರೋ ತಾನಾ || ೧೪ ||
ಮಾವಿನಾ ವಂದು ಬನುಕೇ ನಡೆದ ನಾರಾಣಸ್ವಾಮೀ
ಮಾವಿನ ತಿರುಳಾ ವಂದ್ ಮುರಿವರೋ ತಾನಾ || ೧೫ ||
ಮಾವಿನ ತಿರುಳಾ ವಂದ್ ಮುಡ್ದಾ ನಾರಾಣಸ್ವಾಮೀ
ಮೂಡಿಲ ಮೊಕುವಾಗೆ ವಂದ್ ನಡೆದರೋ ತಾನಾ || ೧೬ ||
ಮೂಡಿಲ ಮೊಕುವಾಗೆ ವಂದ್ ನಡೆದರ ನಾರಾಣಸ್ವಾಮೀ
ಮೂಡಿನಾ ಕೆರೆ ಗೇವಾದ ನೆಡೆದರೋ ತಾನಾ || ೧೭ ||
ಮೂಡಿನಾ ಕೆರೆ ಗೇವಾದ ನೆಡೆದರ ನಾರಾಣಸ್ವಾಮೀ
ಗಿಂಡಿದಾಳ್ ವಂದ್ ಮಿಂಚಾ ವಂದಿಡುವರೋ ತಾನಾ || ೧೮ ||
ಗಿಂಡಿದಾಳ್ ವಂದ್ ಮಿಂಚಾ ವಂದಿಟ್ಟಾ ನಾರಾಣಸ್ವಾಮೀ
ಜಂತಕಾನವಂದ್ ಮಿಂಚಾ ವಂದ್ವಿಡುವರೋ ತಾನಾ || ೧೯ ||
ಜಂತಕಾನವಂದ್ ಮಿಂಚಾ ವಂದ್ ವಿಟ್ಟಾ ನಾರಾಣಸ್ವಾಮೀ
ತಿಂಗಳ ಸಿರಿ ಮೊರೇ ವಂದ್ ತೊಳೆವರೋ ತಾನಾ || ೨೦ ||
ತಿಂಗಳ ಸಿರಿ ಮೊರೇ ವಂದ್ ತೊಳ್ದ ನಾರಾಣಸ್ವಾಮೀ
ತೋ ಕಾಡ್ ಹರಿನೇರಾ ವಂದ್ ಮೊಗೆವರೋ ತಾನಾ || ೨೧ ||
ತೋ ಕಾಡ್ ಹರಿನೇರಾ ವಂದ್ ಮೊಗ್ದಾ ನಾರಾಣಸ್ವಾಮೀ
ಹಿಂದೊಮ್ಮೆ ಮನೆಗೆ ಬರುವರೋ ತಾನಾ || ೨೨ ||
ಹಿಂದೊಮ್ಮೆ ಮನೆಗೆ ಬರುವಾ ನಾರಾಣಸ್ವಾಮೀ
ಹೂಗಿನಾ ಬನಕೇ ನಡೆದರೋ ತಾನಾ || ೨೩ ||
ಹೂವಿನಾ ಬನಕೇ ನಡೆದಾ ನಾರಾಣಸ್ವಾಮೀ
ಗೆಡವಿಗಾ ನೀರಾ ವಂದ್ ಯೆರೆವರೊ ತಾನಾ || ೨೪ ||
ಗೆಡವಿಗಾ ನೀರಾ ವಂದ್ ಯೆರ್ದಾ ನಾರಾಣಸ್ವಾಮೀ
ಹಳೆಯ ಹೂವೆಲ್ಲಾ ವಂದಳುದೊದೊ ತಾನಾ || ೨೫ ||
ಹಳೆಯ ಹೂವೆಲ್ಲಾ ವಂದಅಳತ್ ಹೋ ಯ್ತು ನಾರಾಣಸ್ವಾಮೀ
ಯಣ್ಣುವೆ ನ್ನೂರೆ ಹೂವಾ ವಂದ್ ಕೂಯ್ದರೋ ತಾನಾ || ೨೬ ||
ಯಣ್ಣುವೆ ನ್ನೂರೆ ಹೂವಾ ವಂದ್ ಕುಯ್ದಾ ನಾರಾಣಸ್ವಾಮೀ
ಹಿಂದೊಮ್ಮೆ ಮನೆಗೆ ಬರುವರೋ ತಾನಾ || ೨೭ ||
ಹಿಂದೊಮ್ಮೆ ಮನೆಗೆ ಬಂದಾ ನಾರಾಣಸ್ವಾಮೀ
ದೇವರ ಪೇಟಾಕೆ ನಡೆದರೊ ತಾನಾ || ೨೮ ||
ದೇವರ ಪೇಟಾಕೆ ನಡೆದನೊ ನಾರಾಣಸ್ವಾಮೀ
ಪೇಟದ ಮೇಳ್ ಹೂವಾ ವಂದ್ ಮಡುಗಾರೋ ತಾನಾ || ೨೯ ||
ಪೇಟದ ಮೇಳ್ ಹೂವಾ ವಂದ್ ಮಡುಗ್ದಾ ನಾರಾಣಸ್ವಾಮೀ
ಹಿದ್ದುಂಬೆ ವಿಡಿಯಾ ವಂದ್ ತಡೆದರೊ ತಾನಾ || ೩೦ ||
ಹಿದ್ದುಂಬೆ ವಿಡಿಯಾ ವಂದ್ ತಡ್ದಾ ನಾರಾಣಸ್ವಾಮೀ
ಪೀಟದಾ ಕಸವಾ ವಂದ್ ಹೊಡೆದರೋ ತಾನಾ || ೩೧ ||
ಪೀಟದಾ ಕಸವಾ ವಂದ್ ಹೊಡ್ದಾ ನಾರಾಣಸ್ವಾಮೀ
ಬೊಂಬೇ ತೋ ರಣಕೆ ವಂದ ಜಳಕಂದೋ ತಾನಾ || ೩೨ ||
ಬೊಂಬೇ ತೋ ರಣಕೆ ವಂದ ಜಳಕಂಡ ನಮ ನಾರಾಣಸ್ವಾಮೀ
ಅಂಗೈ ತುಂಬ್ ನಾದೂಳಾ ವಂದ್ ತಡೆದಾರೋ ತಾನಾ || ೩೩ ||
ಅಂಗೈ ತುಂಬ್ ನಾದೂಳಾ ವಂದ್ ತಡ್ದು ನಾರಾಣಸ್ವಾಮೀ
ಈ ರಣ ತುಂಬೆ ನಾಮಾ ವಂದಿಡುವಾರೋ ತಾನಾ || ೩೪ ||
ಈ ರಣ ತುಂಬೆ ನಾಮಾ ವಂದಿಟ್ಟಾ ನಾರಾಣಸ್ವಾಮೀ
ತಾನಿಟ್ಟಾ ರನ್ನೈಡ ವಂದ್ ಮಂಚತುಂಬೆ ತಾನಾ || ೩೫ ||
ತಾನಿಟ್ಟಾ ರನ್ನೈಡ ವಂದ್ ಮಂಚತುಂಬ ನಾರಾಣಸ್ವಾಮೀ
ಲಂಗ ೈ ತೊಳದ ನೀರಾ ವಂದ್ ಕೊಂಡುವಾರೋ ತಾನಾ || ೩೬ ||
ಲಂಗ ೈ ತೊಳದ ನೀರಾ ವಂದ್ ಕೊಂಡಾ ನಾರಾಣಸ್ವಾಮೀ
ತೋ ರಣ ತುಂಬಾ ಹೂವಾ ವಂದ್ ಮುಡಿಸಾರೋ ತಾನಾ || ೩೭ ||
ತೋ ರಣ ತುಂಬಾ ಹೂವಾ ವಂದ್ ಮುಡ್ದಾ ನಾರಾಣಸ್ವಾಮೀ
ತೊಳಸಿ ತೇರೂ ತಾ ವಂದ್ ಕೊಂಡುವಾರೋ ತಾನಾ || ೩೮ ||
ತೊಳಸಿ ತೇರೂ ತಾ ವಂದ್ ಕೊಂಡಾ ನಾರಾಣಸ್ವಾಮೀ
ದೇವರ ಪೂಜೆಯಾ ವಂದೆ ಮುಗಿಸಾರೋ ತಾನಾ || ೩೯ ||
ದೇವರ ಪೂಜೆಯಾ ವಂದ್ ಮುಗಿಸ್ದಾ ನಾರಾಣಸ್ವಾಮೀ
ದೊಗ್ಗೆ ಮಾಳಾಗಿಗೇ ನಡೆದರೋ ತಾನಾ || ೪೦ ||
ದೊಗ್ಗೆ ಮಾಳಾಗಿಗೇ ಹೋ ಗ್ವಂತಾ ಹೊತ್ತೀಗೆ
ಕೊಡಿ ಬಾಳೇಲೇ ವಂದ್ ಎಡೆಯಾದ್ದೆ ತಾನಾ || ೪೧ ||
ಕೊಡಿ ಬಾಳೇಲೇ ವಂದ್ ಎಡೆಯಾ ನೆಲಾಗುವಾಗೇ
ಉಪ್ಪು ಉಪ್ಪಿಕಾಯಿ ವಂದ್ ಯೇಡೆಯಾದೊ ತಾನಾ || ೪೨ ||
ಉಪ್ಪು ಉಪ್ಪಿಕಾಯಿ ವಂದ್ ಯೆಡೆಯಾಲಾಗ್ದರೋ
ಸಣ್ಣಕ್ಕೀ ಬೋ ನಾ ವಂದ್ ಎಡೆಯಾದೋ ತಾನಾ || ೪೩ ||
ಸಣ್ಣಕ್ಕೀ ಬೋ ನಾ ವಂದ್ ಎಡೆಯನೆಲಾಗುವಾಗೇ
ತಣ್ಣನ್ನ ತಣ್ಣನೆ ಮೊಸರೇ ವಂದ್ ಎಡೆಯಾದೋ ತಾನಾ || ೪೪ ||
ತಣ್ಣನ್ನ ತಣ್ಣನೆ ಮೊಸರೇ ಎಡೆಯನೆಲಾಗುವಾಗೆ
ಉಪ್ ಹಾಕಿ ಅನ್ನ ವಂದ್ ಸುರಿದಾರೋ ತಾನಾ || ೪೫ ||
ಉಪ್ ಹಾಕಿ ಅನ್ನ ವಂದ್ ಸುರಿವಂತಾ ಹೊತ್ತಿಗೆ
ಕಳಸೀ ಯೆರಡು ತುತ್ತಾ ವಂದುಣ್ಣಿವಾರೋ ತಾನಾ || ೪೬ ||
ಕಳಸೀ ಯೆರಡು ತುತ್ತಾ ಉಂಬಾ ನಾರಾಣಸ್ವಾಮೀ
ಮೂರಂಬ ತುತ್ತಾಗೆ ವಂದ್ ಮುಗುದೆದ ತಾನಾ || ೪೭ ||
ಮೂರಂಬ ತುತ್ತಾಗೆ ವಂದ್ ಮುಗೈದ್ ನಾರಾಣಸ್ವಾಮೀ
ನೆಂಜಲ ಕೈ ಬಾಯಾ ವಂದ್ ತೊಲೆವರೊ ತಾನಾ || ೪೮ ||
ನೆಂಜಲ ಕೈ ಬಾಯಾ ವಂದ್ ತೊಳ್ದಾ ನಾರಾಣಸ್ವಾಮೀ
ತೂಗೂ ಹೂಗಿಲಗೇ ವಂದ್ ನಡೆದರೋ ತಾನಾ || ೪೯ ||
ತೂಗೂ ಹೂಗಿಲಗೇ ವಂದ್ ನಡ್ದಾ ನಾರಾಣಸ್ವಾಮೀ
ತೂಗಿಲ ಮೇಲೆ ಹೋ ಗ್ ಕುಲ್ಲುವರೋ ತಾನಾ || ೫೦ ||
ತೂಗು ಹೂಗಿಲ ಮೇಲೆ ಕುಲಿತ ನಾರಾಣಸ್ವಾಮೀ
ಪಟ್ಟೇದಾರ್ ಸಂಚೀ ಬಿಡಿಸಾರೂ ತಾನಾ || ೫೧ ||
ಪಟ್ಟೇದಾರ್ ಸಂಚೀ ತೆಗದಾ ನಾರಾಣಸ್ವಾಮೀ
ಹಶ್ಯ ಹಣ್ಣಡಕೆ ತೆಗೆದರೊ ತಾನಾ || ೫೨ ||
ಹಶ್ಯ ಹಣ್ಣಡಕೆ ತೆಗದಾ ನಾರಾಣಸ್ವಾಮೀ
ವಡದೊರಡಕೆ ಹೋ ಳಾ ಮೆಳ್ಳುವಾರೋ ತಾನಾ || ೫೩ ||
ವಡದೊರಡಕೆ ಹೋಳಾ ಮೆಲದಾ ನಾರಾಣಸ್ವಾಮೀ
ಹೊಸ ಕುಲ್ಲೀಯಾ ವಂದ್ ಬೆಲಿಯೆಲೆ ತಾನಾ || ೫೪ ||
ಹೊಸ ಕುಲ್ಲೀಯಾ ವಂದ್ ಬೆಲಿಯೆಲೆ ಮೆಂದ್ಕಂಡಿ
ಯಾನದಾ ವಂದೂ ಕಳಸುನ್ನ ತಾನಾ || ೫೫ ||
ಯಾನದಾ ವಂದೂ ಕಳಸುನ್ನ ಮೆದ್ಕಂಡಿ
ರಾಯರಂಗುಡೆ ವಂದ್ ಹೊಗೆಸಪ್ಪಾ ತಾನಾ || ೫೬ ||
ರಾಯರಂಗುಡೆ ವಂದ್ ಹೊಗೆಸಪ್ಪಾ ಮೆದ್ಕಂಡಿ
ಕತ್ತರಸಿಕೊಂಡಾ ವಂದುಗಿದರೋ ತಾನಾ || ೫೭ ||
ಕತ್ತರಸಿಕೊಂಡಾ ವಂದು ಉಗ್ದಾ ನಾರಾಣಸ್ವಾಮೀ
ಹತ್ತಿ ಹಾಸುಗೆ ವಂದ್ ಬಿಡುಸಾರೋ ತಾನಾ || ೫೮ ||
ಹತ್ತಿ ಹಾಸುಗೆ ವಂದ್ ಬಿಡುಸ್ದಾ ನಾರಾಣಸ್ವಾಮೀ
ಶಿನ್ನದಾರ್ ಕೊಳಗಾ ವಂದ್ ತಳದಿಂಬು ತಾನಾ || ೫೯ ||
ಶಿನ್ನದಾರ್ ಕೊಳಗಾ ವಂದ್ ತಳದಿಂಬು ಲಿಟ್ಕಂಡಿ
ಶಲ್ಲೇದಾ ರೋಳ್ಳೀ ಹೊದಕಂಡಿ ತಾನಾ || ೬೦ ||
ಶಲ್ಲೇದಾ ರೋಳ್ಳೀ ಹೊದಕೆಯು ಬಿಟ್ಟುಕಂಡೀ
ಹೀಮದಾ ಗಾಳೀ ವಂದ್ ಬೀಸುವಾಗ ತಾನಾ || ೬೧ ||
ಹೀಮದಾ ಗಾಳೀ ವಂದ್ ಬೀಸ್ವಂತಾ ಹೊತ್ತೀಗೆ
ಮಾಯದಾ ನಿದುರೀ ವಂದ್ ವರುಗ್ಯಾರೆ ತಾನಾ || ೬೨ ||
*****
ಹೇಳಿದವರು: ಶ್ರೀ ನಾರಾಯಣ ಗೌಡ ಕಲವೇ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.