(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ)
ಹರವಣ ಗುರುವಣ ಬಲಗೊಂಬೆ
ಗುರವಣ ಗುರಪಾದಕೆ ಸರಣು || ೧ ||
ನನಮುನಗಮು ಮಾನೋ ಗೆಲ್ಲಾ
ನಂದಾಸೇತಿ ಪುಣ್ಣಿದಿಂದ || ೨ ||
ಹುಟ್ಟಪಾಪ ಪರಿಹಾರಂದ
ಸಲವನ ದೇವನೆ ಸಿಲವನಗೊಂಬ || ೩ ||
ಸಾರಂದೇವ್ರು ಕಾರನದಿಂದ
ಬಂದಾನಾಯೈನ ಕಾರನದಿಂದ || ೪ ||
ಚೆನ ಮೆನ ನನ ಮೇನ್ ಉಂಡ್ಲೆ ಕೋಳು
ಶಿವೂರ ಮಗಬೇನ್ ಕೊಳಬೈನಂದಾ || ೫ ||
ನಂದಾಸೀತಿ ಪುಣ್ನಾದಿಂದಾ
ಹುಟ್ದ ಪಾಪ ಪರಿಹಾರೆಂದ || ೬ ||
ಕೋಳೊಂದೆರಡು ಕಡದೀ ತಂದೀ
ಹಾಸರಬೀಸರ ಕೆಲ್ಗೆ ಕೋಲುಲ್ ಹೊಯ್ದಾರೆ || ೭ ||
ಪಾಂಡವ್ರ ಮಕಲು ಕುಂಚವೊಲೈ
ನಾರಂದೇವ್ರ ಕಾರಣದಿಂದಾ || ೮ ||
ಬಂದಾನಾಯ್ಕನ ಕಾರಣದಿಂದಾ
ಚೆನ ಮನ ನನ ಮೇನ್ ಉಂಡ್ಲೆ ಕೋಳು || ೯ ||
ದೇವದೇವರೂ ಹರಗಿರ ಕೋಳು
ನಂದಾಸೀತೆ ಪುಣ್ಯದಿಂದಾ || ೧೦ ||
ಹುಟ್ದಾ ಪಾಪ ಪರಿಹಾರಂದಾ
ಶೀತಾರಾಮನ ಪುಣ್ಯಾದಿಂದಾ || ೧೧ ||
ಹಾಸರಬೀಸರ ಗಿರಿಯಲ್ ಕಟ್ಟಿ
ಹುಟ್ದಲ್ ಮೆಟ್ದಲ್ ಸರ್ಪನ ಬಾನ || ೧೨ ||
ಯೆತ್ತರ ಸತ್ತರ ಕಾಕೀ ನಿನ್ನಾ
ಕಾಕೀ ನಂದಾ ನಾಡನಂದಾ || ೧೩ ||
ಬಾಡದ ಕಾಕೇ ಕಣಿಮನ ಕಪ್ಪು
ಹನಮಂತ ಹನ್ಮದ ರಕ್ಸಾನಂದ || ೧೪ ||
ಹೊಣ್ಣಾರ ಹನಮನ ತೇಮಾನಂದಾ
ವಂದಂಬ ಗೆರಿಯ ಬರದೇ ನಂದಾ || ೧೫ ||
ಗೆರಿಯ ದಾಟಿ ಹೋ ಗಬೇಡಂದಾ
ಯೆರಡಂಬ ಸೆರಿಯ ಬರದೇನಂದಾ || ೧೬ ||
ಮೂರಂಬ ಗೆರಿಯ ಬರದೇನಂದಾ
ಗೆರಿಯ ದಾಟಿ ಹೋಗಬೇಡಂದಾ || ೧೭ ||
ಯೆರಡಂಬ ಸೆರಿಯ ಬರದೇನಂದಾ
ಮೂರೆಂಬ ಗೆರಿಯ ಬರದೇನಂದಾ || ೧೮ ||
ಗೆರಿಯ ದಾಟಿ ಹೋ ಗಬೇಡಾಂದಾ
ಬೇವೋನಾಗಿ ಬಿದ್ರೊ ಬಾವಾ || ೧೯ ||
ಬಿಲಿಮನ ಬಿಲ್ಲಿಂದ ಹೊಡೆದಾ ನೋಡು
ಮಿಗನ ಬನಕೇ ಹೋದೋ ನೋಡೂ || ೨೦ ||
ವಂದೆಂಬ ಬಾನ್ದಲ್ ಹೊಡದ್ನೋ ನೋಡು
ಆ ಬಾನವಿಲಾ ಆಕಾಸ್ಕೆ ಹೋಯ್ತು || ೨೧ ||
ಮತ್ತೊಂದ್ ಬಾನಾ ಹೊಡ್ದಾ ನೋಡೂ
ಲಾ ಬಾನಾ ಪಾತಾಲ್ಕೆ ಹೋಯ್ತು || ೨೨ ||
ಮತ್ತಂದ ಬಾನಾ ಹೋಡ್ದಾ ನೋಡು
ಕೋಡ್ನ ಮರ್‍ಗಗಲು ಬಿದ್ದೋ ನೋಡು
ಪಕ್ಕರ ಪಕ್ಕರ ಆಮಟ್ಟಗಾರಗೆ
ಪಕ್ಕರ ಪಕ್ಕರ ಹರದೂ ಬಾಣಾ || ೨೪ ||
ಕಲ್ಲೂ ಹಾಂದಿಗಳು ಹಯದೋ ನೋಡು
ಹೊಣ್ಣಾರ ಹನ್ಮಂತ ತೇಮಾನಂದಾ || ೨೫ ||
ಕಲ್ಲದ ಕೈಕರ ಬಲವೆನಂದಾ
ಕಲ್ಲರ ಗುತ್ತಾ ಬಲ್ಲೇನಂದಾ || ೨೬ ||
ಊಸಡುಂಗ್ಲ ಕೈಲ್ ಕೊಟ್ಟ
ದರ್ಬೆವಳ ಮಂತ್ರನೆ ಕಂಡೀ
ಒಡ್ಲಕ್ಕೇ ಪಡ್ಲಕ್ಕೇನಂದಾ || ೨೭ ||
ಶೀತೇರಾಮರ ಪಾಳಗದಿಂದಾ
ಶೀತೇ ಕಟ್ಕಂಡ ಕಡಿಬೇಕಂದ || ೨೮ ||
ಹೇಲ ಸಂಗ್ರ ಮಾಡಬೇಕಂದಾ
ಕೋಜ ಬುತ್ತೀ ಕಟ್ಟೆನಂದಾ || ೨೯ ||
ಕೈಲ ಕತ್ತಿ ತಾರೇನಂದಾ
ಶೀತೆ ಕಟ್ಕಂದ ಕಡ್ದೇನಂದಾ || ೩೦ ||
ಶೀತೇ ತಕ್ಕಂಡ ಇಲ್ಲೇ ಬಂದಾ
ಹೋ ರಾಮಣ್ಣಾ ರಾಯರ ಪಾದಕ ಬಿದ್ದಣ್ಣ || ೩೧ ||
*****
ಹೇಳಿದವರು: ನಾಗಪ್ಪ ಶಿವಪ್ಪ ಗೌಡ, ತಲಗೊಡು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.